HEALTH TIPS

ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಕೇರಳದ ಮೂಲದ ಬಾಲಕಿ ನಾಪತ್ತೆ; ತೀವ್ರ ಶೋಧ

ಚಿಕ್ಕಮಗಳೂರು : ಕಾಫಿನಾಡಿನ ಪ್ರವಾಸಿ ತಾಣ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಕೇರಳದ ಪಾಲಕ್ಕಾಡ್ ಮೂಲದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದು, ಕುಟುಂಬದವರು ಹಾಗೂ ಪೊಲೀಸರು ತೀವ್ರ ಹುಟುಕಾಟ ನಡೆಸಿದ್ದಾರೆ.

ನಂದನಾ ನಾಪತ್ತೆಯಾದ ಬಾಲಕಿ ಎಂದು ತಿಳಿದು ಬಂದಿದೆ.

ಸುಮಾರು 40 ಮಂದಿ ಪ್ರವಾಸಿಗರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ, ಮಂಗಳವಾರ ಸಂಜೆ ನಿಗೂಢವಾಗಿ ಕಾಣೆಯಾಗಿದ್ದಾಳೆ.

ನಿನ್ನೆ ಮಧ್ಯರಾತ್ರಿವರೆಗೂ ಹುಡುಕಿದರೂ ಬಾಲಕಿಯ ಸುಳಿವು ಸಿಕ್ಕಿಲ್ಲ. ಮಧ್ಯರಾತ್ರಿ ಒಂದು ಗಂಟೆವರೆಗೆ ಜಿಲ್ಲಾಡಳಿತದ 30ಕ್ಕೂ ಹೆಚ್ಚು ಸಿಬ್ಬಂದಿ ಶೋಧ ನಡೆಸಿದ್ದರು. ಆದರೆ ಭಾರೀ ಕತ್ತಲು ಕವಿದ ಕಾರಣ ರಾತ್ರಿ 1ರ ಬಳಿಕ ಸಿಬ್ಬಂದಿಗಳು ವಾಪಸ್ ಬಂದಿದ್ದರು.

ಇಂದು(ಬುಧವಾರ) ಮತ್ತೆ ಪೊಲೀಸ್, ಅರಣ್ಯ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಡ್ರೋನ್ ಮೂಲಕ ಬಾಲಕಿ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries