ಮುಂಬೈ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ 'ದೇವಮಾನವ' ಅಶೋಕ್ ಖರಾತ್ ಅವರ ಆಪ್ತ ಸಹಾಯಕ ಜಿತೇಂದ್ರ ಶೆಲ್ಕೆ ರಸ್ತೆ ಅಪಘಾತದಲ್ಲಿ ನಿಧನರಾದರು.
ಜಿತೇಂದ್ರ ಶೆಲ್ಕೆ ತಮ್ಮ ಕುಟುಂಬದೊಂದಿಗೆ ಛತ್ರಪತಿ ಸಂಭಾಜಿನಗರದಿಂದ ಅಹಲ್ಯಾನಗರದ ಶಿರಡಿ ದೇವಾಲಯಕ್ಕೆ ಕಾರಿನಲ್ಲಿ ಹೋಗುತ್ತಿದ್ದರು.
ಇದೇ ವೇಳೆ ನಾಗ್ಪುರದಿಂದ ಮುಂಬೈಗೆ ಸಂಪರ್ಕ ಕಲ್ಪಿಸುವ ಸಮೃದ್ಧಿ ಎಕ್ಸ್ಪ್ರೆಸ್ ವೇಯಲ್ಲಿ ನಿಲ್ಲಿಸಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಜಿತೇಂದ್ರ ಶೆಲ್ಕೆ ನಿಧನರಾಗಿದ್ದು, ಕಾರಿನಲ್ಲಿದ್ದ ಅವರ ಪತ್ನಿ ಮತ್ತು ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ವಿರೋಧ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಈ ಅಪಘಾತದ ಹಿಂದೆ ಅಕ್ರಮ ನಡೆದಿದೆ ಎಂದು ಶಂಕಿಸಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಇನ್ನೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ, ಸ್ವಯಂಘೋಷಿತ ದೇವಮಾನವ ಅಶೋಕ್ ಖರಾತ್ರನ್ನಯ ಮಾರ್ಚ್ 2026ರಲ್ಲಿ ನಾಸಿಕ್ ಪೊಲೀಸರು ಬಂಧಿಸಿದ್ದರು. ತಾನು ದೈವಿಕ ಶಕ್ತಿ ಹೊಂದಿದ್ದೇನೆ ಎಂದು ನಂಬಿಸಿ, ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡಿರುವ ಮತ್ತು ಅಮಲು ಪದಾರ್ಥ ನೀಡಿ ದೌರ್ಜನ್ಯ ಎಸಗಿರುವ ಆರೋಪ ಆತನ ಮೇಲಿದೆ.

