ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂದರ್ಭ ವರ್ಷಾವಧಿ ಉತ್ಸವದ ದಿನ ಸೋಮವಾರ ನಟರಾಜ ವೇದಿಕೆಯಲ್ಲಿ ಖ್ಯಾತ ಅಂತಾರಾಷ್ಟ್ರೀಯ ವಯಲಿನ್ ವಾದಕ ಕೆ.ಜೆ.ದಿಲೀಪ್ ಜೇನುಮೂಲೆ ಚೆನ್ನೈ ಮತ್ತು ಬಳಗದವರಿಂದ ವಯಲಿನ್ ವಾದನ ನಡೆಯಿತು. ಖಂಜೀರದಲ್ಲಿ ಸುನಾದ್ ಆನೂರು, ಮೃದಂಗದಲ್ಲಿ ಬೋಂಬೈ ಗಣೇಶ್, ಘಟಂನಲ್ಲಿ ವಾಳಪ್ಪಳ್ಳಿ ಕೃಷ್ಣಕುಮಾರ್ ಸಹಕರಿಸಿದರು. ಊರಪರವೂರ ನೂರಾರು ಮಂದಿ ಭಗವದ್ಭಕ್ತರು, ಕಲಾಸಕ್ತರು ಪಾಲ್ಗೊಂಡಿದ್ದರು. ಶ್ರೀ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಕಲಾವಿದರನ್ನು ಅಭಿನಂದಿಸಲಾಯಿತು.


