HEALTH TIPS

ವಿಪಕ್ಷಗಳ ವಿರೋಧ: ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆಗೆ ತಾತ್ಕಾಲಿಕ ತಡೆ

 ನವದೆಹಲಿ: ವಿಪಕ್ಷಗಳು ಹಾಗೂ ಕ್ರೈಸ್ತ ನಾಯಕರ ವಿರೋಧ ಮತ್ತು ಬಿಜೆಪಿ ಕೇರಳ ಘಟಕದ ಒತ್ತಡದಿಂದ, ವಿಧಾನಸಭಾ ಚುನಾವಣೆಯಲ್ಲಿ ಹೊಡೆತ ಬೀಳಬಹುದು ಎಂಬ ಆತಂಕದಿಂದ ಕೇಂದ್ರ ಸರ್ಕಾರವು ವಿವಾದಾತ್ಮಕ 'ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ'ಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯುವುದನ್ನು ಮುಂದೂಡಿದೆ.


'ಎಫ್‌ಸಿಆರ್‌ಎ ಮಸೂದೆ- 2026' ಅನ್ನು ಲೋಕಸಭೆಯಲ್ಲಿ ಚರ್ಚೆ ಮತ್ತು ಅಂಗೀಕಾರಕ್ಕಾಗಿ ಬುಧವಾರಕ್ಕೆ ಪಟ್ಟಿ ಮಾಡಲಾಗಿತ್ತು. ಪ್ರಶ್ನೋತ್ತರ ಅವಧಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, 'ಮಸೂದೆಯನ್ನು ಇಂದು ಚರ್ಚೆಗೆ ತೆಗೆದುಕೊಳ್ಳುತ್ತಿಲ್ಲ' ಎಂದು ಸದನಕ್ಕೆ ತಿಳಿಸಿದರು. 'ಈ ವಿಷಯದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಜನರ ದಾರಿ ತಪ್ಪಿಸುತ್ತಿವೆ' ಎಂದು ಅವರು ಆರೋಪಿಸಿದರು.

ಈ ಮಸೂದೆ ವಿರುದ್ಧ ಕಾಂಗ್ರೆಸ್‌, ಸಿಪಿಎಂ‌ ಹಾಗೂ ಚರ್ಚ್‌ಗಳು ಆಕ್ಷೇಪ ವ್ಯಕ್ತಪಡಿಸಿವೆ. ಮಸೂದೆ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಇದೊಂದು ನಿರಂಕುಶ ಮಸೂದೆಯಾಗಿದ್ದು, ದುರುಪಯೋಗಕ್ಕೆ ಕಾರಣವಾಗಲಿದೆ ಎಂದು ವಿಪಕ್ಷಗಳು ಜರೆದಿವೆ.

ಕೇರಳದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಕ್ರೈಸ್ತ ಮತದಾರರನ್ನು ಸೆಳೆಯಲು ಬಿಜೆಪಿ ವರ್ಷಗಳಿಂದ ಕಸರತ್ತು ನಡೆಸುತ್ತಿದೆ. 'ಒಂದು ವೇಳೆ, ಮಸೂದೆಯನ್ನು ಈಗ ಅಂಗೀಕರಿಸಿದರೆ ರಾಜ್ಯದಲ್ಲಿ ಪಕ್ಷದ ಭವಿಷ್ಯದ ಮೇಲೆ ಹೊಡೆತ ಬೀಳುತ್ತದೆ. ಅದನ್ನು ಸದ್ಯ ಅಂಗೀಕರಿಸಬಾರದು' ಎಂದು ರಾಜ್ಯದ ಬಿಜೆಪಿ ನಾಯಕರು ಕೇಂದ್ರ ನಾಯಕರನ್ನು ಸಂಪರ್ಕಿಸಿದ್ದರು. ಮಸೂದೆಯ ವಿಷಯದಲ್ಲಿ ನಿಧಾನಗತಿಯಲ್ಲಿ ಸಾಗುವಂತೆ ರಾಜ್ಯ ಘಟಕದ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಅವರು ರಾಷ್ಟ್ರೀಯ ನಾಯಕತ್ವವನ್ನು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.


ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸಂಸದರು ಮಸೂದೆಯ ವಿರುದ್ಧ ಘೋಷಣೆಗಳನ್ನು ಕೂಗಿ ಹಿಂಪಡೆಯುವಂತೆ ಒತ್ತಾಯಿಸಿದರು. ಕಲಾಪ ಪ್ರಾರಂಭವಾಗುವ ಮೊದಲು, ಸಂಸದರು ಸಂಸತ್ ಭವನದ ಮಕರ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡುವೆಯೇ ಸಚಿವ ರಿಜಿಜು, 'ನಾವು ಮಸೂದೆಯನ್ನು ಬುಧವಾರ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಹಾಗೂ ಅಂಗೀಕರಿಸುವುದಿಲ್ಲ ಎಂದು ಕಾಂಗ್ರೆಸ್‌ನ ನಾಯಕರಿಗೆ ಈಗಾಗಲೇ ತಿಳಿಸಿದ್ದೇನೆ' ಎಂದು ಸ್ಪಷ್ಟಪಡಿಸಿದರು. 'ಈ ಮಸೂದೆಯು ಯಾವುದೇ ಧರ್ಮಕ್ಕೆ ವಿರುದ್ಧವಾಗಿಲ್ಲ ಅಥವಾ ಯಾವುದೇ ಸಂಘಟನೆಯನ್ನು ಗುರಿಯಾಗಿಸುವ ಉದ್ದೇಶ ಹೊಂದಿಲ್ಲ. ಕೇರಳ ವಿಧಾನಸಭಾ ಚುನಾವಣೆಯ ಕಾರಣದಿಂದಾಗಿ ವಿಪಕ್ಷಗಳು ಮಸೂದೆಯ ವಿರುದ್ಧ ಗುಲ್ಲೆಬ್ಬಿಸುತ್ತಿವೆ' ಎಂದು ಅವರು ಆರೋಪಿಸಿದರು.

ಆದಾಗ್ಯೂ, ಅವರ ಈ ಘೋಷಣೆಯು ಪ್ರತಿಭಟನೆನಿರತ ಸಂಸದರನ್ನು ಸಮಾಧಾನಪಡಿಸಲಿಲ್ಲ. ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಿದರು.

ಏನಿದು ಮಸೂದೆ?

ಈ ಮಸೂದೆಯು ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಅವುಗಳ ಮೇಲಿನ ಹಿಡಿತವನ್ನು ಮತ್ತಷ್ಟು ಬಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ಕಲ್ಪಿಸಲಿದೆ. ಕಾನೂನು ಪ್ರಕಾರ ನೋಂದಣಿ ರದ್ದುಗೊಂಡಿರುವ ಇಲ್ಲವೇ ನಿರ್ಬಂಧಕ್ಕೊಳಗಾಗಿರುವ ಎನ್‌ಜಿಒಗಳ ವಿದೇಶಿ ನಿಧಿಗಳು ಮತ್ತು ಸ್ವತ್ತುಗಳ ನಿರ್ವಹಣೆಗಾಗಿ 'ನಿರ್ದಿಷ್ಟ ಪ್ರಾಧಿಕಾರ'ವೊಂದನ್ನು ಸ್ಥಾಪಿಸಲು ಮಸೂದೆ ಉದ್ದೇಶಿಸಿದೆ. 2010ರ ಮೂಲಶಾಸನದಲ್ಲಿನ ಲೋಪಗಳನ್ನು ಸರಿಪಡಿಸುವುದು ಮಸೂದೆಯ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ. ವಿದೇಶಗಳಿಂದ ಪಡೆಯುವ ದೇಣಿಗೆಗಳ ಮೇಲ್ವಿಚಾರಣೆ ಹಾಗೂ ನಿರ್ವಹಣೆಗೆ 'ಉದ್ದೇಶಿತ ಪ್ರಾಧಿಕಾರ'ದ ಮೂಲಕ ಸಮಗ್ರ ಚೌಕಟ್ಟು ರೂಪಿಸುವ ಅವಕಾಶವನ್ನು ಈ ಮಸೂದೆ ಒಳಗೊಂಡಿದೆ.

Cut-off box - ಈ ಮಸೂದೆ ಕುರಿತು ವಿರೋಧ ಪಕ್ಷಗಳು ನೀಡುತ್ತಿರುವ ಹೇಳಿಕೆಗಳು ಸಂಪೂರ್ಣ ಸುಳ್ಳು ಹಾಗೂ ದಾರಿ ತಪ್ಪಿಸುವಂಥವು. ವಿದೇಶಗಳಿಂದ ಪಡೆಯುವ ದೇಣಿಗೆಯನ್ನು ರಾಷ್ಟ್ರದ ಭದ್ರತೆ ಹಾಗೂ ಹಿತಾಸಕ್ತಿಗಳಿಗೆ ವಿರುದ್ಧದ ಕಾರ್ಯಕ್ಕೆ ಬಳಸುವುದನ್ನು ತಡೆಗಟ್ಟುವ ಸಲುವಾಗಿ ಮಸೂದೆ ತರಲಾಗಿದೆ. ಯುಪಿಎ ಸರ್ಕಾರವು 2010ರಲ್ಲಿ ಈ ಮಸೂದೆಗೆ ಪ್ರಮುಖ ತಿದ್ದುಪಡಿಗಳನ್ನು ತಂದಿತ್ತು ಹಾಗೂ ಆ ಬಳಿಕ ಅನೇಕ ತಿದ್ದುಪಡಿಗಳನ್ನು ಮಾಡಲಾಗಿತ್ತು. ಕೇರಳದ ಸಂಸದರು ದುರುದ್ದೇಶದಿಂದ ಪ್ರತಿಭಟಿಸುತ್ತಿದ್ದಾರೆ ಕಿರಣ್ ರಿಜಿಜು ಸಂಸದೀಯ ವ್ಯವಹಾರಗಳ ಸಚಿವ ಮಸೂದೆಯು ಧಾರ್ಮಿಕ ಅಲ್ಪಸಂಖ್ಯಾತರನ್ನು ವಿಶೇಷವಾಗಿ ಕೇರಳ ಮತ್ತು ದೇಶದಾದ್ಯಂತ ದತ್ತಿ ಚಟುವಟಿಕೆಗಳನ್ನು ನಡೆಸುತ್ತಿರುವ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎನ್‌.ಕೆ. ಪ್ರೇಮಚಂದ್ರನ್‌ ಆರ್‌ಎಸ್‌ಪಿ ಸಂಸದ ಈ ಮಸೂದೆಯು ಕಠೋರವಾಗಿದ್ದು ಅಲ್ಪಸಂಖ್ಯಾತರಷ್ಟೇ ಅಲ್ಲ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಎನ್‌ಜಿಒಗಳ ಹಿತಾಸಕ್ತಿಗಳಿಗೆ ಧಕ್ಕೆ ತರಲಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸಲು ಮೋದಿ ಸರ್ಕಾರ ಮತ್ತೊಂದು ಪ್ರಹಾರ ನಡೆಸಿದೆ. ಹಿಬಿ ಈಡನ್‌ ಕಾಂಗ್ರೆಸ್‌ ಸಂಸದ

Cut-off box - ಏನಿದು ಮಸೂದೆ? ಈ ಮಸೂದೆಯು ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಅವುಗಳ ಮೇಲಿನ ಹಿಡಿತವನ್ನು ಮತ್ತಷ್ಟು ಬಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ಕಲ್ಪಿಸಲಿದೆ. ಕಾನೂನು ಪ್ರಕಾರ ನೋಂದಣಿ ರದ್ದುಗೊಂಡಿರುವ ಇಲ್ಲವೇ ನಿರ್ಬಂಧಕ್ಕೊಳಗಾಗಿರುವ ಎನ್‌ಜಿಒಗಳ ವಿದೇಶಿ ನಿಧಿಗಳು ಮತ್ತು ಸ್ವತ್ತುಗಳ ನಿರ್ವಹಣೆಗಾಗಿ 'ನಿರ್ದಿಷ್ಟ ಪ್ರಾಧಿಕಾರ'ವೊಂದನ್ನು ಸ್ಥಾಪಿಸಲು ಮಸೂದೆ ಉದ್ದೇಶಿಸಿದೆ. 2010ರ ಮೂಲಶಾಸನದಲ್ಲಿನ ಲೋಪಗಳನ್ನು ಸರಿಪಡಿಸುವುದು ಮಸೂದೆಯ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ. ವಿದೇಶಗಳಿಂದ ಪಡೆಯುವ ದೇಣಿಗೆಗಳ ಮೇಲ್ವಿಚಾರಣೆ ಹಾಗೂ ನಿರ್ವಹಣೆಗೆ 'ಉದ್ದೇಶಿತ ಪ್ರಾಧಿಕಾರ'ದ ಮೂಲಕ ಸಮಗ್ರ ಚೌಕಟ್ಟು ರೂಪಿಸುವ ಅವಕಾಶವನ್ನು ಈ ಮಸೂದೆ ಒಳಗೊಂಡಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries