ಏರ್ಪಾಡ್ ಗಳಿಗೆ ಸುತ್ತುವರಿದ ವಿಕಿರಣವನ್ನು ಹೋಲಿಸಲು EMF ಮೀಟರ್ ಬಳಸಿ ಪ್ರಾತ್ಯಕ್ಷಿಕೆಯನ್ನು ತೋರಿಸಿದ್ದಾರೆ ಪೌಷ್ಠಿಕ ತಜ್ಞ ಜಿಬ್ ಆಟ್ಕಿನ್ಸ್.
ಯುನೈಟೆಡ್ ಕಿಂಗ್ಡಂನ ಪೌಷ್ಠಿಕ ತಜ್ಞ ಜಿಬ್ ಆಟ್ಕಿನ್ಸ್ ಇತ್ತೀಚೆಗೆ ವೈರ್ಲೆಸ್ ಇಯರ್ಬಡ್ಗಳನ್ನು ಬಳಸುವ ಬಗ್ಗೆ ಜನರನ್ನು ಎಚ್ಚರಿಸಿದ್ದಾರೆ.
ಮಾತ್ರವಲ್ಲದೆ ವೈರ್ಲೆಸ್ ಇಯರ್ಬಡ್ಗಳ ಸುರಕ್ಷತೆ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದಾರೆ. ವೈರ್ಲೆಸ್ ಇಯರ್ಬಡ್ಗಳು ವಿದ್ಯುತ್ಕಾಂತೀಯ ಕ್ಷೇತ್ರಗಳಿಂದ (EMF) ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ಎಚ್ಚರಿಸಿದ್ದಾರೆ. ಇದು ಸಂಭಾವ್ಯ ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಲಾಗಿದೆ.
ಬ್ಲೂಟೂತ್ ಸಾಧನಗಳು ತಲೆಬುರುಡೆಗೆ ನಿರಂತರವಾಗಿ ಸಮೀಪದಲ್ಲಿರುವುದು ನಿಧಾನವಾಗಿ ಮೆದುಳಿನ ಮೇಲೆ ಪರಿಣಾಮ ಬೀರಲಿದೆ. EMF ಗಮನಾರ್ಹ ಆರೋಗ್ಯ ಅಪಾಯ ಉಂಟು ಮಾಡಲಿದೆ ಎಂದು ವಿವರಿಸಿದ್ದಾರೆ.
ಸಕ್ರಿಯವಾಗಿರುವಾಗ ಏರ್ಪಾಡ್ಗಳಿಗೆ ಸುತ್ತುವರಿದ ವಿಕಿರಣವನ್ನು ಹೋಲಿಸಲು EMF ಮೀಟರ್ ಬಳಸಿ ಅವರು ಪ್ರಾತ್ಯಕ್ಷಿಕೆಯನ್ನು ತೋರಿಸಿದ್ದಾರೆ.
"ಏರ್ಪಾಡ್ಗಳನ್ನು ಧರಿಸುವುದರಿಂದ ನಿಮ್ಮ ಮೆದುಳಿಗೆ ಹಾನಿಯಾಗಲಿದೆ" ಎಂದು ಹೇಳಿದ ಅವರು EMF ಮೀಟರ್ ಬಳಿ ಏರ್ಪಾಡ್ಗಳನ್ನು ಇಟ್ಟು ಪರೀಕ್ಷಿಸಿ ತೋರಿಸಿದ್ದಾರೆ. "ಬ್ಲೂಟೂತ್ ಅನ್ನು EMF ಜೊತೆಗೆ ಇಟ್ಟಾಗ ಹೇಗೆ ಅದರ ಸಂಖ್ಯೆ ನಿಜವಾಗಿಯೂ ಹೆಚ್ಚಾಗಿದೆ ನೋಡಿ. ಈ ರೀತಿ ಹೆಡ್ಫೋನ್ ಬಳಸುವಾಗಲೆಲ್ಲ ವಿಕಿರಣವು ನೇರವಾಗಿ ನಿಮ್ಮ ಮೆದುಳಿಗೆ ಹೋಗುತ್ತದೆ" ಎಂದು ಅವರು ವಿವರಿಸಿದ್ದಾರೆ.
ಪುನರಾವರ್ತನೆಯಾಗುವ ಸಂಕೇತಗಳಿಂದ ಅಪಾಯ
ನಿಯಂತ್ರಕ ಸಂಸ್ಥೆಗಳು ಸಾಧನಗಳಿಂದ ಉತ್ಪತ್ತಿಯಾಗುವ ತಕ್ಷಣದ ಶಾಖದ ಮೇಲೆ ಗಮನ ಕೇಂದ್ರೀಕರಿಸುತ್ತವೆ. ನಿಜವಾದ ಅಪಾಯವು ಕಡಿಮೆ ಮಟ್ಟದ ಮಾನ್ಯತೆಯ ಸಂಚಿತ ಪರಿಣಾಮದಲ್ಲಿದೆ. ಬಹುತೇಕರು ತಲೆನೋವಿನಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. "ಸಣ್ಣ ಸಂಕೇತಗಳು ದಿನಕ್ಕೆ ಸಾವಿರಾರು ಬಾರಿ ಪುನರಾವರ್ತನೆಯಾಗುತ್ತವೆ. ಜೀವಕೋಶಗಳು ಹೇಗೆ ವರ್ತಿಸುತ್ತವೆ ಎನ್ನುವುದರ ಮೇಲೆ ಪ್ರಭಾವ ಬೀರಬಹುದು. ಮುಖ್ಯವಾಗಿ ಮೆದುಳಿನಂತಹ ಸೂಕ್ಷ್ಮ ಅಂಗಗಳಿಗೆ ಸಮೀಪದಲ್ಲಿರುವಾಗ ಸಮಸ್ಯೆ ತೀವ್ರವಾಗಲಿದೆ" ಎಂದು ಅವರು ಹೇಳಿದ್ದಾರೆ.
ಗ್ರೇಡ್ 2ಬಿ ಕಾಸಿನೋಜೆನ್ ಬಗ್ಗೆ ಕಳವಳ
ಇಂಟರ್ನ್ಯಾಷನಲ್ ಏಜಿನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ವರ್ಗೀಕರಣವನ್ನು ಉಲ್ಲೇಖಿಸಿರುವ ಪೌಷ್ಟಿಕ ತಜ್ಞರು ಎಚ್ಚರಿಸಿರುವ ಪ್ರಕಾರ, "ವಿಕಿರಣದ ಕಾಳಜಿಗಳು ಆಧುನಿಕ ಆತಂಕವಲ್ಲ. ಈ ರೀತಿಯ ರೇಡಿಯೋ ಫ್ರೀಕ್ವೆನ್ಸಿಯನ್ನು ವಾಸ್ತವದಲ್ಲಿ 2011ರಿಂದ ಗ್ರೇಡ್ 2ಬಿ ಕಾರ್ಸಿನೋಜೆನ್ ಎಂದು ಪಟ್ಟಿ ಮಾಡಲಾಗಿದೆ. ಪ್ರಮುಖ ವಿಜ್ಞಾನಿಗಳು EMF ಮಾನ್ಯತೆಯ ನಿಯಮಗಳನ್ನು ಬಿಗಿಗೊಳಿಸಬೇಕು ಎಂದು ಹೇಳಿದ್ದಾರೆ. ಆದರೆ ಹಣವಂತರು ತಮಗೆ ಬೇಕಾದಂತಹ ಉತ್ಪನ್ನಗಳನ್ನು ಹೊರತರುತ್ತಾರೆ."
ಅಸ್ತಿತ್ವದಲ್ಲಿರುವ ಸಂಶೋಧನೆಯು ಪ್ರಾಣಿಗಳ ಮಾದರಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ವಾದಿಸುವ ವಿಮರ್ಶಕರನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಲವು ಕಾಳಜಿಗಳನ್ನು ಎತ್ತಿ ತೋರಿಸಿದ್ದಾರೆ.
• ಡಿಎನ್‌ಎ ಹಾನಿ: ಅನುವಂಶಿಕ ವಸ್ತುವಿನಲ್ಲಿ ರಚನಾತ್ಮಕ ಬದಲಾವಣೆಗಳಿಗೆ ಸಂಭಾವ್ಯತೆ
• ಆಕ್ಸಿಡೇಟಿವ್ ಒತ್ತಡ: ಜೀವಕೋಶ ಮತ್ತು ಅಂಗಾಂಶ ಹಾನಿಗೆ ಕಾರಣವಾಗುವ ಅಸಮತೋಲನ
• ರಕ್ತ-ಮಿದುಳಿನ ತಡೆಗೋಡೆ: ಹೆಚ್ಚಿನ ಪರ್ಮಿಯೇಬಿಲಿಟಿ ಇದೆ. ಅಂದರೆ ಮೆದುಳಿಗೆ ಪ್ರವೇಶಿಸುವ ವಿಷದ ಅಪಾಯ ಹೆಚ್ಚಿಸುತ್ತದೆ.
ಪ್ರಾಣಿಗಳಲ್ಲಿ ಈ ಸಮಸ್ಯೆಗಳು ಕಂಡು ಬಂದಿರುವ ಸಂದರ್ಭದಲ್ಲಿ ಮಾನವರಲ್ಲೂ ಇವುಗಳು ಕಾಣಿಸುವುದಿಲ್ಲ ಎನ್ನುವುದು ಯಾರು ಖಾತರಿ ಕೊಡುತ್ತಾರೆ ಎಂದು ಜಿಬ್ ಪ್ರಶ್ನಸಿದ್ದಾರೆ.
ವೈರ್ಲೆಸ್ ಇಯರ್ಬಡ್ ಸಮಸ್ಯೆ ಪರಿಹಾರ ಹೇಗೆ?
ದೀರ್ಘಾವಧಿಯ ಎಲೆಕ್ಟ್ರೋಕೆಮಿಕಲ್ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಜಿಬ್ ಮೂರು ಹಂತದ ರಕ್ಷಣೆಯನ್ನು ಸೂಚಿಸಿದ್ದಾರೆ.
• ಮೊದಲನೆಯದಾಗಿ ವೈರ್ ಇರುವ ಇಯರ್ಪ್ಯಾಡ್ಗೆ ಬದಲಾಗುವುದು.
• ಫೋನ್ ಬಳಸುವಾಗ ಅದನ್ನು ದೇಹದಿಂದ ಸಾಧ್ಯವಾದಷ್ಟು ದೂರ ಇಡುವುದು.
• ವೈರ್ಲೆಸ್ ಟೆಕ್ ಬಳಸುವಾಗ ವಿಶೇಷವಾಗಿ EMF ಕಡಿಮೆಗೊಳಿಸುವ ಸ್ಟಿಕರ್ಗಳನ್ನು ಬಳಸುವಂತೆ ಸೂಚಿಸಿದ್ದಾರೆ.

