ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಷು ಜಾತ್ರಾ ಮಹೋತ್ಸವ ಆರಂಭಗೊಂಡು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತಿದೆ. ಗುರುವಾರ ನಡುದೀಪೆÇೀತ್ಸವದ ಪ್ರಯುಕ್ತ ರಾತ್ರಿ 7.45 ರಿಂದ ಮಹಾ ತಿರುವಾದಿರಕಳಿ, 8 ರಿಂದ ಮಾಗಣೆ ಕೂಟ, ಪಲ್ಲಕ್ಕಿ ಉತ್ಸವ ಸಹಿತ ಬಲಿ ಉತ್ಸವ, ನಡು ದೀಪೋತ್ಸವ ನಡೆಯಿತು.
ಇಂದು(ಶುಕ್ರವಾರ) ಪೂರ್ವಾಹ್ನ 7 ರಿಂದ ವಿವಿಧ ವೈದಿಕ ಕಾರ್ಯಕ್ರಮ, ರಾತ್ರಿ 7.45 ರಿಂದ ಬಲಿ ಉತ್ಸವ, ಕೆರೆದೀಪೋತ್ಸವ, 9.30 ರಿಂದ ಐಲ ಕ್ಷೇತ್ರದ ಮೈದಾನದಲ್ಲಿ ವಿರಾಟ್ ನೃತ್ಯ ಭಜನಾ ಸಂಭ್ರಮ, 10.30 ರಿಂದ ಕಟ್ಟೆಪೂಜೆ, ಸಾರ್ವಜನಿಕ ಬೆಡಿ ಉತ್ಸವ, 12.30ಕ್ಕೆ ಕವಾಟ ಬಂಧನ ನಡೆಯಲಿದೆ. 18 ರಂದು ಆರಾಟೋತ್ಸವ, ಶ್ರೀ ದೇವರ ಅವಭೃತ ಸ್ನಾನ, ದ್ವಜಾವರೋಹಣದೊಂದಿಗೆ ವಿಷು ಜಾತ್ರೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ. 19 ರಂದು ಸಂಜೆ 5 ರಿಂದ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.

.jpg)
.jpg)
