ಟೆಹರಾನ್: ಅಮೆರಿಕದೊಂದಿಗೆ ಸಂಧಾನ ಮಾತುಕತೆ ನಡೆಸಲು ಇರಾನ್‌ನಿಂದ ಯಾವುದೇ ನಿಯೋಗವು ಪಾಕಿಸ್ತಾನಕ್ಕೆ ಹೊರಟಿಲ್ಲ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಇದರೊಂದಿಗೆ ಎರಡನೇ ಸುತ್ತಿನ ಕದನ ವಿರಾಮ ಮಾತುಕತೆಗೆ ಸಂಬಂಧಿಸಿದಂತೆ ಅನಿಶ್ಛಿತತೆ ಮುಂದುವರಿದಿದೆ.
ಇಲ್ಲಿಯವರೆಗೆ ಇರಾನ್‌ನಿಂದ ಯಾವುದೇ ನಿಯೋಗ ಇಸ್ಲಾಮಾಬಾದ್‌ಗೆ ಪ್ರಯಾಣ ಬೆಳೆಸಿಲ್ಲ ಎಂದು ಖಚಿತಪಡಿಸಿದೆ.
ಸಂಧಾನ ಮಾತುಕತೆಯಲ್ಲಿ ಪಾಲ್ಗೊಳ್ಳುವುದು ಅಮೆರಿಕದ ನಿಲುವನ್ನು ಅವಲಂಬಿಸಿರುತ್ತದೆ ಎಂದು ಇರಾನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯು ಮುರಿದು ಬಿದ್ದಿತ್ತು. ಈ ನಡುವೆ ಎರಡನೇ ಸುತ್ತಿನ ಮಾತುಕತೆಗೆ ಅಮೆರಿಕ ಉತ್ಸುಕತೆ ವ್ಯಕ್ತಪಡಿಸಿತ್ತು.
ಏತನ್ಮಧ್ಯೆ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರದ ಮೇಲೆ ಇರಾನ್ ನಿರ್ಬಂಧ ಮುಂದುವರಿದಿದೆ.

