HEALTH TIPS

ಟರ್ಕಿಯನ್ನು ಹೊಸ ಶತ್ರುವೆಂದು ಘೋಷಿಸಲು ಇಸ್ರೇಲ್ ಪ್ರಯತ್ನ: ಟರ್ಕಿ ವಿದೇಶಾಂಗ ಸಚಿವ ಆರೋಪ

ಅಂಕಾರ: ಶತ್ರುಗಳಿಲ್ಲದೆ ಇಸ್ರೇಲ್‍ಗೆ ಬದುಕಲು ಸಾಧ್ಯವಿಲ್ಲ. ಇದೀಗ ಆ ದೇಶದ ಸರಕಾರವು ಟರ್ಕಿಯನ್ನು ಹೊಸ ಶತ್ರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿದಾನ್ ಸೋಮವಾರ ಟೀಕಿಸಿದ್ದಾರೆ.

2023ರ ಅಕ್ಟೋಬರ್‍ನಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕ ಗಾಝಾ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಟರ್ಕಿ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಗಳೂ ಉಲ್ಬಣಗೊಂಡಿವೆ.

ಕಳೆದ ವಾರದಿಂದ ಉಭಯ ದೇಶಗಳ ನಾಯಕರ ನಡುವಿನ ವಾಕ್ಸಮರ ತೀವ್ರಗೊಂಡಿದೆ.

`ನೆತನ್ಯಾಹು ನಮ್ಮ ಕಾಲದ ಹಿಟ್ಲರ್' ಎಂದು ಟರ್ಕಿಯ ವಿದೇಶಾಂಗ ಇಲಾಖೆ ಬಣ್ಣಿಸಿದ್ದು ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಯನ್ನು ಹಾಳುಮಾಡುವುದು ಅವರ ಉದ್ದೇಶವಾಗಿದೆ' ಎಂದು ಇಸ್ರೇಲ್ ಆರೋಪಿಸಿದೆ. `ಟರ್ಕಿಯು ತನ್ನದೇ ನಾಗರಿಕರ ಹತ್ಯಾಕಾಂಡ ನಡೆಸಿದೆ' ಎಂದು ಇಸ್ರೇಲ್ ತಿರುಗೇಟು ನೀಡಿತ್ತು.

`ಇಸ್ರೇಲ್‍ಗೆ ಶತ್ರುಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಇರಾನ್‍ನ ಬಳಿಕ ಇದೀಗ ಟರ್ಕಿಯನ್ನು ಹೊಸ ಶತ್ರು ಎಂದು ಘೋಷಿಸಲು ನೆತನ್ಯಾಹು ಮಾತ್ರವಲ್ಲ, ಅಲ್ಲಿನ ಕೆಲವು ವಿರೋಧ ಪಕ್ಷಗಳ ನಾಯಕರೂ ಬಯಸಿದ್ದಾರೆ. ಇದು ಇಸ್ರೇಲ್‍ನಲ್ಲಿ ಹೊಸ ಬೆಳವಣಿಗೆಯಾಗಿದ್ದು ರಾಷ್ಟ್ರದ ಕಾರ್ಯತಂತ್ರವಾಗಿ ರೂಪುಗೊಳ್ಳುತ್ತಿದೆ' ಎಂದು ಫಿದಾನ್‍ರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries