HEALTH TIPS

ನ್ಯಾಟೊದಿಂದ ಹೊರಬರುವ ಬಗ್ಗೆ ಗಂಭೀರ ಚಿಂತನೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್

ಲಂಡನ್‌: ನ್ಯಾಟೊದಿಂದ ಅಮೆರಿಕವನ್ನು ಹೊರತರುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಇರಾನ್‌ ವಿರುದ್ಧದ ಸೇನಾ ಕಾರ್ಯಾಚರಣೆಗೆ ನ್ಯಾಟೊ ಮಿತ್ರರಾಷ್ಟ್ರಗಳು ಅಮೆರಿಕಕ್ಕೆ ಬೆಂಬಲ ನೀಡದ ಕಾರಣ ಈ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು 'ಟೆಲಿಗ್ರಾಫ್‌' ದಿನಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

'ನ್ಯಾಟೊವನ್ನು 'ಕಾಗದದ ಹುಲಿ' ಎಂದು ಟೀಕಿಸಿರುವ ಅವರು, 'ನ್ಯಾಟೊದಿಂದ ಹೊರಬರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ' ಎಂದು ಹೇಳಿದ್ದಾರೆ' ಎಂದು ದಿನಪತ್ರಿಕೆ ವರದಿ ಮಾಡಿದೆ.

'ನ್ಯಾಟೊ ವಿಶ್ವಾಸಾರ್ಹತೆ ಬಗ್ಗೆ ಬಹಳ ದೀರ್ಘ ಕಾಲದಿಂದಲೂ ಅನುಮಾನವಿತ್ತು ಎಂದೂ ಅವರು ಹೇಳಿದ್ದಾರೆ' ಎಂದಿದೆ.

ಪರಿಣಾಮಕಾರಿ ಸೇನಾ ಮೈತ್ರಿಕೂಟ- ಸ್ಟಾರ್ಮರ್‌:

'ಜಗತ್ತು ಕಂಡ ಅತ್ಯಂತ ಪರಿಣಾಮಕಾರಿ ಸೇನಾ ಮೈತ್ರಿಕೂಟ 'ನ್ಯಾಟೊ' ಎಂದು ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ.

ಡೊನಾಲ್ಡ್‌ ಟ್ರಂಪ್ ಅವರ 'ಕಾಗದದ ಹುಲಿ' ಎಂಬ ಟೀಕೆಯ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

'ಹಲವು ದಶಕಗಳಿಂದ ಅದು ನಮಗೆ ಭದ್ರತೆ ನೀಡಿದೆ. ನ್ಯಾಟೊಗೆ ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ' ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹೊರ್ಮುಜ್‌: ಬ್ರಿಟನ್‌ನಿಂದ ಅಂತರರಾಷ್ಟ್ರೀಯ ಸಮಾವೇಶ

ಹೊರ್ಮುಜ್‌ ಜಲಸಂಧಿಯನ್ನು ತೆರೆಸುವ ಮಾರ್ಗೋಪಾಯಕ್ಕೆ ಸಂಬಂಧಿಸಿದ ಚರ್ಚೆಗಾಗಿ ಅಂತರರಾಷ್ಟ್ರೀಯ ರಾಜತಾಂತ್ರಿಕ ಸಮಾವೇಶವನ್ನು ಬ್ರಿಟನ್ ಈ ವಾರ ಆಯೋಜಿಸಲಿದೆ ಎಂದು ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಬುಧವಾರ ತಿಳಿಸಿದ್ದಾರೆ. ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಕರಾವಳಿಯ ಭದ್ರತೆಯನ್ನು ಪುನರ್‌ ಸ್ಥಾಪಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ 35 ದೇಶಗಳು ಸಹಿ ಮಾಡಿವೆ ಎಂದೂ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries