HEALTH TIPS

ಖ್ಯಾತ ವೈದ್ಯ ಶಂಕರ್‌ರಾಜ್ ಆಲಂಪಾಡಿ ನಿಧನ

 ಕಾಸರಗೋಡು:  ಕಾಸರಗೋಡು ನಗರದ ಎಸ್‌ವಿಟಿ ರಸ್ತೆ ಬಳಿಯ ವೆಂಕಟೇಶ ಮನೆಯ ಖ್ಯಾತ ಆಯುರ್ವೇದ ವೈದ್ಯರಾಗಿರುವ  ಶಂಕರ್‌ರಾಜ್  ಆಲಂಪಾಡಿ (66) ನಿಧನಹೊಂದಿದರು.


ಖ್ಯಾತ ಆಲಂಪಾಡಿ ಮನೆತನಕ್ಕೆ ಸೇರಿದ ದಿ| ವೆಂಕಟೇಶ್ ಶ್ಯಾನುಭೋಗ್-ಜಲಜಮ್ಮ ದಂಪತಿ ಪುತ್ರನಾಗಿರುವ ಡಾ| ಶಂಕರ್‌ರಾಜ್ ಆಲಂಪಾಡಿಯವರು ಖ್ಯಾತ ಮೃದಂಗ ವಿದ್ವಾನ್ ಕೂಡಾ ಅಗಿದ್ದರು. ಹಲವು ಸಂಗೀತ ಕಛೇರಿಗಳಲ್ಲೂ  ಅವರು ಮೃದಂಗ ವಾದಕರಾಗಿ ಸಹಕರಿಸಿದ್ದಾರೆ. ಇವರು ಅನೇಕ ಮೃದಂಗ ಶಿಷ್ಯವೃಂದದ ವರನ್ನು ಹೊಂದಿದ್ದು ಓರ್ವ ಅಪ್ರತಿಮ ಕಲಾಸಕ್ತರೂ ಆಗಿದ್ದರು.

1983ರಿಂದ ನಾಯಮ್ಮಾರ ಮೂಲೆಯಲ್ಲಿ ಸುಪ್ರಭಾತ ಕ್ಲಿನಿಕ್ ಆರಂಭಿಸಿ ೨೦೧೮ರ ತನಕ ಅಲ್ಲಿ  ಆಯುರ್ವೇದ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆರಂಭಗೊಂಡ ಬಳಿಕ ಅವರು ಕ್ಲಿನಿಕ್‌ನ್ನು 2019ರಲ್ಲಿ ಎಸ್‌ವಿಟಿ  ರಸ್ತೆ ಬಳಿಯ ತಮ್ಮ ಸ್ವಂತ ಮನೆಗೆ ಬದಲಿಸಿ ಅಲ್ಲೇ  ಸೇವೆ ಮುಂದುವರಿಸಿದ್ದರು.

ಮೃತರು ಪತ್ನಿ ನಯನ ಕುಮಾರಿ (ಪ್ರಾಧ್ಯಾಪಿಕೆ), ಮಕ್ಕಳಾದ ಡಾ| ಇಂಚರ, ಡಾ| ವಿಶಾಖ, ಅಳಿಯ ಡಾ| ಭಾರ್ಗವ ಚಕ್ರವರ್ತಿ (ಹಾಸನ), ಸಹೋದರ-ಸಹೋದರಿಯರಾದ ಖ್ಯಾತ ಲೇಖಕ, ವಾಗ್ಮಿ ಸುಕುಮಾರ ಆಲಂಪಾಡಿ, ರಾಜೇಶ್ವರಿ ಆಲಂಪಾಡಿ (ದೆಹಲಿ), ಖ್ಯಾತ ಶಾಸ್ತ್ರೀಯ ಸಂಗೀತಜ್ಞೆ ರಾಧಾಮುರಳೀಧರ್ ಆಲಂಪಾಡಿ, ಲಕ್ಷ್ಮೀ ಆಲಂಪಾಡಿ (ಉಡುಪಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಡಾ| ಶಂಕರ್‌ರಾಜ್ ಆಲಂಪಾಡಿ ಯವರ ಆಕಸ್ಮಿಕ ನಿಧನ   ಸುದ್ದಿ ತಿಳಿದು ನೂರಾರು ಮಂದಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.  ಕಾಸರಗೋಡಿನ ಕನ್ನಡಿಗರು ಹಾಗೂ ಕಾಸರಗೋಡು ಬ್ರಾಹ್ಮಣ ಮಹಾಸಭೆಯ ಪರವಾಗಿ  ಜಯನಾರಾಯಣ ತಾಯನ್ನೂರು ಮೃತರ ಮನೆಗೆ ತೆರಳಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries