ಇಸ್ತಾಂಬುಲ್: ಟರ್ಕಿ ರಾಜಧಾನಿಯಲ್ಲಿರುವ ಇಸ್ರೇಲ್ ದೂತವಾಸ ಕಚೇರಿ ಮೇಲೆ ಮಂಗಳವಾರ(ಏ.7) ಮೂವರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಒಬ್ಬ ಗನ್ಮ್ಯಾನ್ ಹತ್ಯೆ ಮಾಡಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಗವರ್ನರ್ ದಾವುತ್ ಗುಲ್ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಕೂಡ ಅಲ್ವ ಪ್ರಮಾಣದ ಗಾಯವಾಗಿದೆ ಎಂದು ಹೇಳಿದ್ದಾರೆ.
ಟರ್ಕಿ ನೆಲದಲ್ಲಿ ಯಾವುದೇ ಇಸ್ರೇಲ್ ರಾಜತಾಂತ್ರಿಕರು ಇಲ್ಲ. ಹಾಗಾಗಿ ದಾಳಿಕೋರರ ಗುರಿಯು ಇಸ್ರೇಲ್ ದೂತವಾಸ ಕಚೇರಿಯೇ ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.
2023ರ ಅ.7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ನಂತರ, ಟರ್ಕಿ ಸೇರಿದಂತೆ ಆ ಪ್ರದೇಶದಲ್ಲಿದ್ದ ಇಸ್ರೇಲಿ ರಾಜತಾಂತ್ರಿಕರನ್ನು ಸುರಕ್ಷತೆಯ ಕಾರಣಕ್ಕೆ ಅಲ್ಲಿಂದ ಮರಳಿ ಕರೆಸಿಕೊಳ್ಳಲಾಗಿತ್ತು.
ದಾಳಿಕೋರರನ್ನು ಗುರುತಿಸಲಾಗಿದ್ದು, ಅವರು ಐಎಸ್ಐಎಸ್ ಉಗ್ರಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ.

