ಕಾಸರಗೋಡು: 2026 ರ ಕೇರಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಮತ್ತು ಮತ ಎಣಿಕೆ ದಿನದಂದು ರಾಜ್ಯದಲ್ಲಿ 'ಶುಷ್ಕ ದಿನ'ವನ್ನು ಘೋಷಿಸಿದೆ. ಆದೇಶದ ಪ್ರಕಾರ, ಮತದಾನದ ದಿನವಾದ ಏ. 9 ಮತ್ತು ಮತ ಎಣಿಕೆಯ ದಿನಗಳಾದ ಮೇ 4ರಂದು ರಾಜ್ಯದಲ್ಲಿ ಮದ್ಯ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಮತದಾನ ಮುಗಿಯುವ 48 ಗಂಟೆಗಳ ಮೊದಲು ಮದ್ಯ ಮಾರಾಟ ಮತ್ತು ವಿತರಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಯಾವುದೇ ಕ್ಷೇತ್ರದಲ್ಲಿ ಮರು ಮತದಾನ ಅಗತ್ಯವಿದ್ದರೆ, ಆ ದಿನಗಳಲ್ಲಿಯೂ ನಿಷೇಧ ಅನ್ವ¬ಸಲಿದೆ. 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 135ಅ ಪ್ರಕಾರ, ಈ ನಿಗದಿತ ದಿನಾಂಕದಂದು ಹೋಟೆಲ್ಗಳು, ರೆಸ್ಟೋರೆಂಟ್ಗಳು, ಕ್ಲಬ್ಗಳು, ಸ್ಟಾರ್ ಹೋಟೆಲ್ಗಳು ಇತ್ಯಾದಿಗಳನ್ನು ಒಳಗೊಂಡಂತೆ ಮದ್ಯ ಪೂರೈಸಲು ಪರವಾನಗಿ ಪಡೆದ ಯಾವುದೇ ಸಂಸ್ಥೆಗಳಲ್ಲಿ ಮದ್ಯ ಪೂರೈಸಬಾರದು ಅಥವಾ ಮಾರಾಟ ಮಾಡಬಾರದು. ಸಾರ್ವಜನಿಕ ಅಥವಾ ಖಾಸಗಿ ಸ್ಥಳಗಳಲ್ಲಿ ಮದ್ಯ ಮಾರಾಟ ,ಮದ್ಯ ಒದಗಿಸುವುದು ಮತ್ತು ವಿತರಿಸುವುದು ಅಪರಾಧವಾಗಿರುತ್ತದೆ. ಅಕ್ರಮವಾಗಿ ಮದ್ಯ ಸಂಗ್ರಹಿಸುವುದನ್ನು ತಡೆಯಲು ಮತ್ತು ನೆರೆಯ ರಾಜ್ಯಗಳಿಂದ ಮದ್ಯ ಕಳ್ಳಸಾಗಣೆ ನಿಯಂತ್ರಿಸಲು ಅಬಕಾರಿ ಇಲಾಖೆ ಮತ್ತು ಪೆÇಲೀಸರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕಾರ್ಯವನ್ನು ಅಬಕಾರಿ ಆಯುಕ್ತರಿಗೆ ವಹಿಸಲಾಗಿದೆ.
'ಚುನಾವಣಾ ಮಾರ್ಗದರ್ಶಿ-2026' ಬಿಡುಗಡೆ
2026 ರ ವಿಧಾನಸಭಾ ಚುನಾವಣೆಗೆ ಕಾಸರಗೋಡು ಜಿಲ್ಲಾ ಮಾಹಿತಿ ಕಚೇರಿ ಪ್ರಕಟಿಸಿದ ಚುನಾವಣಾ ಸಹಾಯಕ ಮಾರ್ಗದರ್ಶಿ ಪುಸ್ತಿಕೆಯನ್ನು ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಬಿಡುಗಡೆಗೊಳಿಸಿದರು. ಚುನಾವಣಾ ಸಹಾಯಕ ಜಿಲ್ಲಾಧಿಖಾರಿ ಎ.ಎನ್. ಗೋಪಕುಮಾರ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಸಹಾಯಕ ಸಂಪಾದಕಿ ಎ.ಪಿ. ದಿಲ್ನಾ, ಸಹಾಯಕ ಮಾಹಿತಿ ಅಧಿಕಾರಿ ಎಸ್. ಚಿಲಂಕ, ಚುನಾವಣಾ ವಿಭಾಗದ ಕಿರಿಯ ಅಧೀಕ್ಷಕ ರಾಜೀವನ್, ಬಿನುಕುಮಾರ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ರತೀಶ್ ಪಿಲಿಕೋಡ್, ಸುಚಿತ್ವಾ ಮಿಷನ್ ಜಿಲ್ಲಾ ಸಂಯೋಜಕ ಪಿ. ಜಯನ್, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಪ್ರಭಾರ ಅಬ್ದುಲ್ಲಾ, ತ್ಯಾಜ್ಯ ಮುಕ್ತ ಕೇರಳ ಸಂಯೋಜಕ ಎಚ್. ಕೃಷ್ಣ, ಮಾಧ್ಯಮ ಕೇಂದ್ರದ ಅಧಿಕಾರಿಗಳು ಮತ್ತು ನೌಕರರು ಉಪಸ್ಥೀತರಿದ್ದರು.
ಚಿತ್ರ: 'ಚುನಾವಣಾ ಸಹಾಯಕ 2026'ಪುಸ್ತಿಕೆಯನ್ನು ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಬಿಡುಗಡೆ ಮಾಡಿದರು.



