ಚಂಡೀಗಢ: ಆಮ್ ಆದ್ಮಿ ಪಕ್ಷವನ್ನು (ಆಪ್) ತೊರೆದು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದ ರಾಜ್ಯಸಭಾ ಸದಸ್ಯರು ದ್ರೋಹಿಗಳು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶುಕ್ರವಾರ ಟೀಕಿಸಿದ್ದಾರೆ.
ಪಂಜಾಬ್ ಜನತೆಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದ್ದಾರೆ.
'ಭಗವಂತ್ ಮಾನ್ ವಿರುದ್ಧ ಅವರಿಗೆ ಏನೂ ಸಿಗದಿದ್ದಾಗ, ಅವರು ಆಪ್ ಪಕ್ಷವನ್ನು ಒಡೆಯಲು ಪ್ರಯತ್ನಿಸಿದರು' ಎಂದು ಹೇಳಿದ್ದಾರೆ.
ಪಂಜಾಬ್ಗೆ ಹೂಡಿಕೆಗಳನ್ನು ಆಕರ್ಷಿಸಲು ನೆದರ್ಲ್ಯಾಂಡ್ಸ್ ಮತ್ತು ಫಿನ್ಲೆಂಡ್ಗೆ ಒಂದು ವಾರಗಳ ಪ್ರವಾಸ ಕೈಗೊಂಡಿದ್ದ ಮಾನ್ ಶುಕ್ರವಾರ ಮರಳಿದ್ದಾರೆ.
'ಪಂಜಾಬ್ನ ಜನ ಆಪ್ ಜೊತೆಗಿದ್ದಾರೆ. ಅವರು ಪಕ್ಷದ ಪರವಾಗಿ ದೃಢವಾಗಿ ನಿಂತಿದ್ದಾರೆ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷ ತೊರೆದ 6-7 ಜನರು ಇಡೀ ಪಂಜಾಬ್ ಆಗಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

