HEALTH TIPS

ಕ್ಷೇತ್ರ ಪುನರ್ ವಿಂಗಡಣೆಯು 'ಸಂವಿಧಾನದ ಮೇಲಿನ ದಾಳಿ': ಆತುರದಲ್ಲಿ ವಿಶೇಷ ಅಧಿವೇಶನ ಕರೆದಿದ್ದನ್ನು ಪ್ರಶ್ನಿಸಿದ ಸೋನಿಯಾ ಗಾಂಧಿ

ನವದೆಹಲಿ:  ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಶಾಸಕಾಂಗ ಕಾರ್ಯಸೂಚಿಯಲ್ಲಿ ಕ್ಷೇತ್ರ ಪುನರ್ ವಿಂಗಡಣೆ (Delimitation) ವಿಷಯಕ್ಕೆ ಪ್ರಮುಖ ಸ್ಥಾನ ನೀಡಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಕ್ರಮವನ್ನು "ಅತ್ಯಂತ ಅಪಾಯಕಾರಿ" ಹಾಗೂ "ಸಂವಿಧಾನದ ಮೇಲಿನ ದಾಳಿ" ಎಂದು ಕರೆದಿದ್ದಾರೆ.


'The Hindu' ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ, ವಿಶೇಷ ಅಧಿವೇಶನದ ಕೇಂದ್ರ ವಿಷಯ ಮಹಿಳಾ ಮೀಸಲಾತಿಯಲ್ಲ; ಬದಲಾಗಿ ಕ್ಷೇತ್ರ ಪುನರ್ ವಿಂಗಡಣೆಯ ಪರಿಣಾಮಗಳೇ ಮುಖ್ಯ ಎಂದು ಅವರು ಹೇಳಿದ್ದಾರೆ. ಲೋಕಸಭೆಯ ಸದಸ್ಯರ ಸಂಖ್ಯೆಯಲ್ಲಿ ಏರಿಕೆ ಮಾಡುವ ಪ್ರಸ್ತಾಪವು "ರಾಜಕೀಯವಾಗಿ ಮತ್ತು ಕೇವಲ ಲೆಕ್ಕಾಚಾರದ ದೃಷ್ಟಿಯಿಂದ ಸಮಾನವಾಗಿರಬಾರದು" ಎಂದು ಅವರು ಒತ್ತಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾತಿ ಜನಗಣತಿಯನ್ನು "ವಿಳಂಬಗೊಳಿಸಲು ಮತ್ತು ಹಳಿತಪ್ಪಿಸಲು" ಯತ್ನಿಸುತ್ತಿದೆ ಎಂದು ಆರೋಪಿಸಿದ ಸೋನಿಯಾ ಗಾಂಧಿ, 2021ರಲ್ಲಿ ನಡೆಯಬೇಕಿದ್ದ ಜನಗಣತಿ ಮುಂದೂಡಲ್ಪಟ್ಟಿರುವುದರಿಂದ ಕಲ್ಯಾಣ ಯೋಜನೆಗಳಿಗೂ ಪರಿಣಾಮ ಬಿದ್ದಿದೆ ಎಂದು ತಿಳಿಸಿದ್ದಾರೆ. 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 10 ಕೋಟಿಗೂ ಹೆಚ್ಚು ಜನರು ತಮ್ಮ ಕಾನೂನುಬದ್ಧ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಎಪ್ರಿಲ್ 16ರಿಂದ 18ರವರೆಗೆ ನಡೆಯಲಿರುವ ವಿಶೇಷ ಅಧಿವೇಶನದ ಸಮಯದ ಕುರಿತೂ ಅವರು ಪ್ರಶ್ನಿಸಿದ್ದಾರೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ತಾರಕಕ್ಕೇರಿರುವ ಸಂದರ್ಭದಲ್ಲಿ ಸರ್ಕಾರ ಶಾಸನವನ್ನು ""ಬಲವಂತವಾಗಿ ಅಂಗೀಕರಿಸಲು" ಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ. "ರಾಜಕೀಯ ಲಾಭಕ್ಕಾಗಿ ಹಾಗೂ ವಿರೋಧ ಪಕ್ಷವನ್ನು ಒತ್ತಡಕ್ಕೆ ತಳ್ಳಲು ಸರ್ಕಾರ ಆತುರಪಡುತ್ತಿದೆ" ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ವಿರೋಧ ಪಕ್ಷಗಳು ಎಪ್ರಿಲ್ 29ರ ನಂತರ ಸರ್ವಪಕ್ಷ ಸಭೆ ನಡೆಸುವಂತೆ ಮೂರು ಬಾರಿ ಮನವಿ ಮಾಡಿದ್ದರೂ ಸರ್ಕಾರ ಅದನ್ನು ನಿರಾಕರಿಸಿದೆ ಎಂದು ಅವರು ತಿಳಿಸಿದ್ದಾರೆ. "ಬದಲಾಗಿ, ಪ್ರಧಾನ ಮಂತ್ರಿ ಅಭಿಪ್ರಾಯ ಲೇಖನಗಳು, ಮನವಿಗಳು ಮತ್ತು ಸಮ್ಮೇಳನಗಳ ಮೂಲಕ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು. ಇದನ್ನು ಅವರು "ನನ್ನ ದಾರಿ ಅಥವಾ ಹೆದ್ದಾರಿ" ಧೋರಣೆ ಎಂದು ಅವರು ಟೀಕಿಸಿದ್ದಾರೆ.

2023ರ ನಾರಿ ಶಕ್ತಿ ವಂದನ ಅಧಿನಿಯಮದ ಅನುಷ್ಠಾನ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದರು. ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ನಂತರವೇ ಮಹಿಳಾ ಮೀಸಲಾತಿ ಜಾರಿಗೆ ಬರಬೇಕೆಂಬ ಷರತ್ತನ್ನು ವಿರೋಧ ಪಕ್ಷ ಕೇಳಿರಲಿಲ್ಲ ಎಂದು ಹೇಳಿದ್ದಾರೆ.

2029ರಿಂದ ಮೀಸಲಾತಿ ಜಾರಿಗೆ ತರಲು ವಿಧಿ 334-ಎ ತಿದ್ದುಪಡಿ ಮಾಡುವ ವಿಚಾರವನ್ನೂ ಅವರು ಪ್ರಶ್ನಿಸಿದರು. "ಈ ಯೂ-ಟರ್ನ್ ತೆಗೆದುಕೊಳ್ಳಲು ಪ್ರಧಾನಿಗೆ 30 ತಿಂಗಳುಗಳು ಏಕೆ ಬೇಕಾಯಿತು?" ಎಂದು ಪ್ರಶ್ನಿಸಿದ್ದಾರೆ.

ಜಾತಿ ಜನಗಣತಿಗೆ ಪ್ರಧಾನಿ ಮೊದಲು ವಿರೋಧ ವ್ಯಕ್ತಪಡಿಸಿದ್ದರು ಎಂದು ಗಾಂಧಿ ಹೇಳಿದರು. ನಂತರ 2027ರ ಜನಗಣತಿಯಲ್ಲಿ ಅದನ್ನು ಸೇರಿಸುವುದಾಗಿ ಘೋಷಿಸಿದ್ದಾರೆ ಎಂದು ಹೇಳಿದರು.

"ಜಾತಿ ಜನಗಣತಿ ವಿಳಂಬವಾಗುತ್ತದೆ ಎಂಬ ಮಾತು ಸತ್ಯವಲ್ಲ. ಅದನ್ನು ಮುಂದೂಡುವುದೇ ಸರ್ಕಾರದ ಉದ್ದೇಶ" ಎಂದು ಅವರು ಆರೋಪಿಸಿದರು.

ಜನಗಣತಿ ಡಿಜಿಟಲ್ ರೂಪದಲ್ಲಿ ನಡೆಯುತ್ತಿರುವುದರಿಂದ 2027ರಲ್ಲಿಯೇ ಹೆಚ್ಚಿನ ಅಂಕಿ-ಅಂಶಗಳು ಲಭ್ಯವಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ಕ್ಷೇತ್ರ ಪುನರ್‌ವಿಂಗಡಣೆಗೆ ಸರ್ಕಾರ ತುರ್ತುಗತಿಯಲ್ಲಿ ಮುಂದಾಗುತ್ತಿರುವುದನ್ನು ಅವರು ಪ್ರಶ್ನಿಸಿದ್ದಾರೆ.

ಜನಗಣತಿ ನಂತರ ಕ್ಷೇತ್ರ ಪುನರ್‌ವಿಂಗಡಣೆ ನಡೆಯಬೇಕು. ಯಾವುದೇ ರಾಜ್ಯಗಳಿಗೂ ಅನ್ಯಾಯವಾಗಬಾರದು ಎಂದು ಅವರು ಒತ್ತಿ ಹೇಳಿದರು. ಕುಟುಂಬ ಯೋಜನೆಯಲ್ಲಿ ಮುಂಚೂಣಿಯಲ್ಲಿರುವ ಹಾಗೂ ಸಣ್ಣ ರಾಜ್ಯಗಳಿಗೆ ತೊಂದರೆಯಾಗಬಾರದು ಎಂದು ಅವರು ಎಚ್ಚರಿಸಿದ್ದಾರೆ.

ಸೀಟುಗಳ ಏರಿಕೆ ಅವುಗಳ ರಾಜಕೀಯ ಪ್ರಭಾವವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಸ್ಥಾನಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ ಮೀಸಲಾತಿ ನೀಡುವ ಆಯ್ಕೆ ಇರುವುದನ್ನು ಉಲ್ಲೇಖಿಸಿದ ಅವರು, ಒಬಿಸಿ ಮಹಿಳೆಯರಿಗೂ ಇದೇ ರೀತಿಯ ಮೀಸಲಾತಿ ಒದಗಿಸುವ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.

ವ್ಯಾಪಕ ಸಮಾಲೋಚನೆ ಅಗತ್ಯವಿದೆ ಎಂದು ಹೇಳಿದ ಸೋನಿಯಾ ಗಾಂಧಿ, ಜುಲೈ ಮಧ್ಯದಲ್ಲಿ ಆರಂಭವಾಗುವ ಸಂಸತ್ತಿನ ಮಳೆಗಾಲ ಅಧಿವೇಶನದಲ್ಲಿ ಈ ವಿಷಯಗಳನ್ನು ಚರ್ಚಿಸಲು ಅವಕಾಶ ನೀಡಬಹುದಿತ್ತು. ಸರ್ಕಾರ ಎಪ್ರಿಲ್ 29ರ ನಂತರ ಸರ್ವಪಕ್ಷ ಸಭೆ ನಡೆಸಿ ಚರ್ಚೆಗೆ ಅವಕಾಶ ಕೊಡಬಹುದಿತ್ತು" ಎಂದು ಅವರು ಹೇಳಿದ್ದಾರೆ.

"ನಮ್ಮ ರಾಜಕೀಯದಲ್ಲಿ ಮುಂದೆ ದೊಡ್ಡ ಪರಿಣಾಮ ಬೀರುವ ಬದಲಾವಣೆಗಳನ್ನು ಇಷ್ಟು ಆತುರದಲ್ಲಿ ಕೈಗೊಳ್ಳುವುದು ಸಮರ್ಥನೀಯವಲ್ಲ. ಇದು ಕೇವಲ ನಿರೂಪಣಾ ನಿರ್ವಹಣೆ" ಎಂದು ಅವರು ಟೀಕಿಸಿದ್ದಾರೆ.

"ಈ ಪ್ರಕ್ರಿಯೆ ದೋಷಪೂರಿತ ಮತ್ತು ಪ್ರಜಾಪ್ರಭುತ್ವ ವಿರೋಧಿ. ಮಹಿಳಾ ಮೀಸಲಾತಿ ಸಮಸ್ಯೆಯಲ್ಲ; ಅದು ಈಗಾಗಲೇ ನಿರ್ಧಾರವಾಗಿದೆ. ನಿಜವಾದ ಸಮಸ್ಯೆ ಕ್ಷೇತ್ರ ಪುನರ್‌ವಿಂಗಡಣೆ. ಅಪೂರ್ಣ ಮಾಹಿತಿಯ ಆಧಾರದ ಮೇಲೆ ಅದನ್ನು ಮುಂದುವರಿಸುವುದು ಅಪಾಯಕಾರಿ. ಇದು ಸಂವಿಧಾನದ ಮೇಲಿನ ದಾಳಿ" ಎಂದು ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries