HEALTH TIPS

ಏ. 14 ರಿಂದ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

ಕಾಸರಗೋದು: ಕುಂಬಳೆ ಸೀಮೆಯ ಅತಿ ಪುರಾತನ ಹಾಗೂ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಏ. 14ರಿಂದ 18ರ ವರೆಗೆ ಜರುಗಲಿದೆ.  


ಬೆಳಗ್ಗೆ6.30ಕ್ಕೆ ವೇದ ಪಾರಾಯಣ, 9ಕ್ಕೆ ಧ್ವಜಾರೋಹಣ, 10ಕ್ಕೆ ಸಹಸ್ರ ಕುಂಭಾಭಿಷೇಕ, 12ಕ್ಕೆ ತುಲಾಭಾರ ಸೇವೆ, ಮಹಾಪೂಜೆ ನಡೆಯುವುದು. ಸಂಜೆ 5ಕ್ಕೆ ತಾಯಂಬಕ, ವೀಣಾರಾಧನೆ, ರಾತ್ರಿ 9ಕ್ಕೆ ಉತ್ಸವ, ಬಲಿ ನಡೆಯುವುದು. 15ರಂದು ಬೆಳಗ್ಗೆ 5ಕ್ಕೆ ವಿಶೇಷೋತ್ಸವ, ವಿಘು ಕಣಿಯ ವಿಶೇಷಬಲಿ, ರಾಜಾಂಗಣ ಪ್ರಸಾದ.  ಪೂರ್ವಾಹ್ನ  ಪಂಚವಾದ್ಯ, ಮಧ್ಯಾಃನ 12ಕ್ಕೆ  ತುಲಾಭಾರ ಸೇವೆ, ಸಂಜೆ 5ಕ್ಕೆ ತಾಯಂಬಕ, ವೀಣಾರಾಧನೆ, ರಾತ್ರಿ 9ಕ್ಕೆ ಉತ್ಸವ ಬಲಿ ನಡೆಯುವುದು. 

16ರಂದು ಬೆಳಗ್ಗೆ 5ಕ್ಕೆ ವಿಶೇಷೋತ್ಸವ, ಉತ್ಸವ ಬಲಿ. ಮಧ್ಯಾಹ್ನ ತುಲಾಭಾರ ಸೇವೆಗಳು, ಸಂಜೆ ತಾಯಂಬಕ, ವೀಣಾರಾಧನೆ, ರಾತ್ರಿ 8ಕ್ಕೆ ಮಹಾದೀಪೆÇೀತ್ಸವ, ಉತ್ಸವ ಬಲಿ, ಸೇವೆ ಸುತ್ತುಗಳು ನಡೆಯುವುದು.

17ರಂದು ಬೆಳಗ್ಗೆ 5ಕ್ಕೆ ಉತ್ಸವ ಬಲಿ, ವಿಶೇಷೋತ್ಸವ, ದರ್ಶನ ಬಲಿ, ಮಧ್ಯಾಹ್ನ  ತುಲಾಭಾರ ಸೇವೆಗಳು, ಸಂಜೆ 5ಕ್ಕೆ ತಾಯಂಬಕ, ವೀಣಾರಾಧನೆ.  

7ಕ್ಕೆ ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಘೋಷಯಾತ್ರೆ, ಶ್ರೀ ವೀರಮಾರುತಿ ವ್ಯಾಯಮ ಶಾಲೆ ಕಾಸರಗೋಡು ಇವರ ತಾಲೀಮು ಪ್ರದರ್ಶನ ನಡೆಯುವುದು.  ರಾತ್ರಿ 8.30ಕ್ಕೆ ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ.  10ಕ್ಕೆ ಮಧೂರು ಬೆಡಿಕಟ್ಟೆಯಲ್ಲಿ ಕಟ್ಟೆಪೂಜೆ, ಸಾಂಪ್ರದಾಯಿಕ ಸುಡುಮದ್ದು ಪ್ರದರ್ಶನ, ಶಯನ, ಕವಾಟ ಬಂದನ ನಡೆಯುವುದು. 

18ರಂದು ಬೆಳಗ್ಗೆ 7ಕ್ಕೆ ಕವಾಟೋದ್ಘಾಟನೆ, ಮಧ್ಯಾಹ್ನ ತುಲಾಭಾರ ಸೇವೆಗಳು, ಸಂಜೆ 5ಕ್ಕೆ ತಾಯಂಬಕ, ವೀಣಾರಾಧನೆ, ರಆತ್ರಿ 9ಕ್ಕೆ ಉತ್ಸವ ಬಲಿ, 10ಕ್ಕೆ ವಿಶೇಷ ವಿದ್ಯುತ್ ದೀಪಾಲಂಕೃತಗೊಂಡ ಶ್ರೀ ಕ್ಷೇತ್ರದ ಆರಾಟು ಕೆರೆಯಲ್ಲಿ ಶ್ರೀ ದೇವರ ಅವಭೃತ ಸ್ನಾನ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯುವುದು. ಪ್ರತಿ ದಿನ ವಿವಿಧ ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿರುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries