HEALTH TIPS

ಇರಾನ್‌ ಪಡೆಗಳಿಂದ ದಾಳಿಗೊಳಗಾದ ಹಡಗು ಗುಜರಾತ್‌ನತ್ತ ಸಾಗುತ್ತಿರಬಹುದು: ವರದಿ

 ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳಿಂದ ಗುಂಡಿನ ದಾಳಿಗೊಳಗಾದ ಮೂರು ವಾಣಿಜ್ಯ ಹಡಗುಗಳಲ್ಲಿ ಒಂದು ಗುಜರಾತ್‌ನತ್ತ ಸಾಗುತ್ತಿರಬಹುದು ಎಂದು ಸಾಗರಯಾನ ದತ್ತಾಂಶಗಳು (Shipping data) ತಿಳಿಸಿವೆ. 


ಹೊರ್ಮುಜ್ ಜಲಸಂಧಿಯಲ್ಲಿ ಹಾದುಹೋಗುತ್ತಿದ್ದ ಹಡಗುಗಳ ಮೇಲೆ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಗುಂಡಿನ ದಾಳಿ ನಡೆಸಿದ್ದು, ಎರಡು ಹಡಗುಗಳನ್ನು ವಶಕ್ಕೆ ಪಡೆದಿದೆ.

ಅದರಲ್ಲಿ ಒಂದು ಹಡಗು ಹಾನಿಗೊಳಗಾಗಿದೆ. ಆದಾಗ್ಯೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಕಡಲ ಗುಪ್ತಚರ ಸಂಸ್ಥೆ ಮೆರೈನ್‌ ಟ್ರಾಫಿಕ್‌ (MarineTraffic) ನೀಡಿದ ಹಡಗು-ಟ್ರ್ಯಾಕಿಂಗ್ ದತ್ತಾಂಶಗಳ ಪ್ರಕಾರ, ಬುಧವಾರ ಹೊರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಗುರಿಯಾದ ಹಡಗುಗಳಲ್ಲಿ ಒಂದಾದ 'ಎಪಾಮಿನೊಂಡಾಸ್' (Epaminondas) ಹಡಗು ಗುಜರಾತ್‌ನ ಮುಂದ್ರಾ ಬಂದರನ್ನು ತನ್ನ ತಲುಪಬೇಕಾದ ಸ್ಥಳ (Destination) ಎಂದು ಸೂಚಿಸುತ್ತಿತ್ತು ಎಂದಿದೆ.

ಲೈಬೀರಿಯಾ ಧ್ವಜ ಹೊತ್ತ ಈ ಹಡಗು ಸಂಜೆ 6: 30ರ ವೇಳೆಗೆ (ಸ್ಥಳೀಯ ಕಾಲಮಾನ) ಓಮನ್ ಕೊಲ್ಲಿಯಲ್ಲಿದೆ ಎಂದೂ ತಿಳಿಸಿದೆ.

ಈ ಹಡಗಿನ ಮಾಲೀಕರು ಯಾರು ಮತ್ತು ಅದು ಯಾವ ಸರಕನ್ನು ಹೊತ್ತೊಯ್ಯುತ್ತಿದೆ ಎಂಬ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries