ಜೆರುಸಲೇಂ: 'ಎಲ್ಲ ವಿಧದ ಭಯೋತ್ಪಾದನೆ ವಿರುದ್ಧ ದೇಶವು ದೃಢ ಮತ್ತು ಅಚಲವಾಗಿ ನಿಲ್ಲಲಿದೆ' ಎಂದು ಇಸ್ರೇಲ್ ಬುಧವಾರ ತಿಳಿಸಿದೆ.
'ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಒಂದು ವರ್ಷವಾಗಿದ್ದು, ದಾಳಿಯಲ್ಲಿ ಮಡಿದ ಮುಗ್ಧ ಜೀವಗಳನ್ನು ಸ್ಮರಿಸುತ್ತೇವೆ ಮತ್ತು ಸಂತ್ರಸ್ತರ ಕುಟುಂಬದ ಪರವಾಗಿ ನಿಲ್ಲುತ್ತೇವೆ' ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿದಾನ್ ಸಾರ್ ಅವರು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಹೇಳಿದ್ದಾರೆ.
'ಇಂತಹ ಬೆದರಿಕೆಗಳ ಮಟ್ಟಹಾಕಲು ಹಾಗೂ ಶಾಂತಿ, ಭದ್ರತೆ ಮತ್ತು ಸ್ಥಿರತೆಗಾಗಿ ಭಾರತದ ಜೊತೆಯಾಗಿ ನಿಲ್ಲುತ್ತೇವೆ' ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನ ಮೃತಪಟ್ನಿದ್ದರು. ಇದಕ್ಕೆ ಪ್ರತಿಯಾಗಿ ಭಾರತ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳನ್ನು ನಾಶ ಮಾಡಿತ್ತು.

