ಕುಂಬಳೆ: ಕುಂಬಳೆ ಗುಂಡದಮೂಲೆ ಪೇರಾಲ್ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಧರ್ಮನೇಮೋತ್ಸವ ಗುರುವಾರ ಸಂಪನ್ನಗೊಂಡಿತು. ಮಂಗಳವಾರ ಬೆಳಗ್ಗೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ನೇಮ, ಶ್ರೀ ರಕ್ತೇಶ್ವರಿ ಪರಿವಾರ ದೈವದ ನೇಮೋತ್ಸವ, ಪುತ್ತೂರುಕೊಟ್ಯದಿಂದ ಶ್ರೀ ಧೂಮಾವತಿ ದೈವದ ಆಭರಣ ಆಗಮನ, ಮಧ್ಯರಾತ್ರಿ ಶ್ರೀ ಜಟಾಧಾರಿ ದೈವದ ಮಹಿಮೆ, ಬುಧವಾರ ಬೆಳಗ್ಗೆ ಶ್ರೀ ಧೂಮಾವತಿ ದೈವದ ನೇಮೋತ್ಸವ, ಸಂಜೆ ಪರಿವಾರ ಶ್ರೀ ದೈವಗಳಾದ ಶ್ರೀ ಕಲ್ಲಾಲ್ತ ಗುಳಿಗ, ಶ್ರೀ ಕೊರತಿ-ಕೊರವ, ಶ್ರೀ ಕೊರಗಜ್ಜ ದೈವದ ಕೋಲೋತ್ಸವ ನಡೆಯಿತು.

.jpg)
.jpg)
