ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಛಿದಾನಂದ ಭಾರತೀ ಮಹಾಸ್ವಾಮಿಗಳವರ ಆರನೇ ಚಾತುರ್ಮಾಸ್ಯ ವ್ರತಾಚರಣೆ ಜು.29 ರಿಂದ ಸೆ. 26ರ ತನಕ 60 ದಿನಗಳ ಧಾರ್ಮಿಕ ಮಹೋತ್ಸವ ಸ್ವರೂಪದಲ್ಲಿ ಶ್ರೀಮಠದಲ್ಲಿ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಸಮ್ಮಿಲನದೊಂದಿಗೆ ಯಶಸ್ವಿಯಾಗಿ ನಡೆಸಲು ಶ್ರೀ ಮಠದಲ್ಲಿ ಭಾನುವಾರ ಸ್ವಾಗತ ಸಮಿತಿ ಸಭೆ ಜರಗಿತು.
ಪೂರ್ವಭಾವಿ ಸಮಾಲೋಚನೆ ಹಾಗೂ ಸಿದ್ಧತಾ ಸಭೆಯಲ್ಲಿ ಆಶೀರ್ವಚನ ನೀಡಿದ ಎಡನೀರು ಶ್ರೀಗಳು ಶ್ರೀಮಠದ ಪರಂಪರೆಯಂತೆ ಹೋಮ, ಹವನಾದಿ ವೈದಿಕ, ಧಾರ್ಮಿಕ ಸಾಂಸ್ಕೃತಿ ಆರಾಧನೆಯೊಂದಿಗೆ ಈ ಬಾರಿಯ ಚಾತುರ್ಮಾಸ್ಯ ನಡೆಯಲಿದೆ. ಜನಪರ ಕಾರ್ಯಕ್ರಮಗಳೊಂದಿಗೆ ಶ್ರೀಮಠ ಜನರೊಂದಿಗಿದೆ. ಈ ಪರಂಪರೆ ಸುಭದ್ರವಾಗಿ ಮುಂದುವರಿಯಬೇಕಿದೆ ಎಂದರು.
ಚಾತುರ್ಮಾಸ್ಯ ಸಮಿತಿಯ ಪ್ರಮುಖರಾದ ಪುತ್ತೂರಿನ ಸ್ವರ್ಣೋದ್ಯಮಿ ಜಿ. ಎಲ್. ಬಲರಾಂ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಅಭ್ಯಾಗತರಾಗಿ ಕರ್ನಾಟಕ ಲೋಕಸೇವಾ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಟಿ. ಶ್ಯಾಂ ಭಟ್ ಪಾಲ್ಗೊಂಡರು. ಉದ್ಯಮಿ ಕೆ. ಕೆ. ಶೆಟ್ಟಿ, ಮಧುಸೂಧನ ಆಯರ್ ಮಂಗಳೂರು, ಹಿರಿಯ ನ್ಯಾಯವಾದಿ ಎಂ. ನಾರಾಯಣ ಭಟ್ ಕಾಸರಗೋಡು, ಚೆಂಗಳ ಗ್ರಾ. ಪಂ. ಅಧ್ಯಕ್ಷ ವಸಂತ ಅಜಕ್ಕೋಡು, ಗಂಗಾಧರನ್ ನಾಯರ್ ಪಾಡಿ ಉಪಸ್ಥಿತರಿದ್ದು ಮಾತನಾಡಿದರು.
ಚಾತುರ್ಮಾಸ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ವೇಣುಗೋಪಾಲ ಎಡನೀರು ವಂದಿಸಿದರು. ಕೆ. ಸೂರ್ಯನಾರಾಯಣ ಭಟ್ ನಿರೂಪಿಸಿದರು. ಸರೋಜ ಭಟ್ ಪ್ರಾರ್ಥನೆ ಹಾಡಿದರು.

.jpg)
.jpg)
.jpg)
