HEALTH TIPS

ಅಮೈ ಶ್ರೀ ಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ-ಒಡಿಯೂರು ಶ್ರೀಗಳಿಂದ ಆಶೀರ್ವಚನ

ಕಾಸರಗೋಡು: ನಗರದ ಅಮೈ ಶ್ರೀ ಕೃಷ್ಣ ಭಜನಾ ಮಂದಿರದ ರಜತಮಹೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಜರುಗಿತು. ಒಡಿಯೂರು ಸಂಸ್ಥಾನ   ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಸಭೆಯನ್ನು  ಉದ್ಘಾಟಿಸಿ ಆಶೀರ್ವಚನ ನೀಡಿದರು. ಹಿಂದೂ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾರ್ಮಿಕ ಭಾಷಣ ಮಾಡಿದರು. ರಜತ ಮಹೋತ್ಸವದ ಗೌರವಾಧ್ಯಕ್ಷರಾದ  ಶ್ರೀ ಜಗನ್ನಾಥ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು.  


ಕಾಸರಗೋಡು ಯುನೈಟೆಡ್ ಮೆಡಿಕಲ್ ಸೆಂಟರ್‍ನ ಡಾ. ವೀಣಾ ಮಂಜುನಾಥ್, ಕೊಲ್ಯ ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನ ಟ್ರಸ್ಟಿ ಶ್ರೀ ಮಧುಸೂದನ ಅಯರ್, ನಿವೃತ್ತ ಡಿವೈಎಸ್ಪಿ  ಹರಿಶ್ಚಂದ್ರ ನಾಯ್ಕ್ ಅತಿಥಿಗಳಾಗಿ ಭಾಗವಹಿಸಿದ್ದರು. ಅಮೈ ಭಜನಾ ಮಂದಿರದ ಅಧ್ಯಕ್ಷೆ  ಗುಣಪಾಲ ಅಮೈ, ಉಪಾಧ್ಯಕ್ಷೆ  ಪುಷ್ಪ ಉಪಸ್ಥಿತರಿದ್ದರು. ಈ ಸಂದರ್ಭ ಮಂದಿರ ಸಮಿತಿ ಪ್ರಮುಖರಾದ ರಾಮದಾಸ್ ಪಾಂಡೇಶ್ವರ್,  ನಾರಾಯಣ ಅಮೈ,  ಗಂಗಾಧರ ಅಮೈ,  ಲಲಿತಾ ಅಮೈ,  ಪದ್ಮಾವತಿ ಅಮೈ ಅವರನ್ನು ಗೌರವಿಸಲಾಯಿತು. ರಜತ ಮಹೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ  ಶ್ರೀಲತಾ ಟೀಚರ್  ಪ್ರಾರ್ಥನೆ ಹಾಡಿದರು. ಸಾಂಸ್ಕ್ರತಿಕ ಸಮಿತಿ ಸಂಚಾಲಕ  ರಾಜೇಶ್ ಅಮೈ  ಸ್ವಾಗತಿಸಿದರು.  ರಜತ ಮಹೋತ್ಸವದ ಪ್ರಧಾನ ಸಲಹೆಗಾರರಾದ  ದೇವದಾಸ್ ನುಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಶ್ರೀ ಕಿಶೋರ್ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಶ್ರೀ ಪಾರ್ಥಸಾರಥಿ ಗೀತಾ ಪಾರಾಯಣ ತಂಡ ಕಾಸರಗೋಡು ಇವರ ವತಿಯಿಂದ ಶ್ರೀಮದ್ಭಗವದ್ಗೀತಾ ಪಾರಾಯಣ, ಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಾಂಸ್ಕøಥಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾವೇದಿಕೆ ಕಾಸರಗೋಡು ಹಾಗೂ ಊರ ಪರ ಊರ ಪ್ರತಿಭೆಗಳಿಂದ ನೃತ್ಯ ವೈಭವ ಜರಗಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries