HEALTH TIPS

ತಿದ್ದುಪಡಿ ಮಸೂದೆ ಸೋಲಿಗೆ ಹೀಗಿತ್ತು ವಿಪಕ್ಷಗಳ ವಾಟ್ಸ್‌ಆಯಪ್ ಗ್ರೂಪ್‌ ತಂತ್ರ

ನವದೆಹಲಿ: ಈಗ ಸಾಮಾಜಿಕ ಮಾಧ್ಯಮದ ಜಮಾನ.. ಯಾವುದೇ ಗೆಳಯರ ಬಳವಿರಲಿ, ಉದ್ಯಮವಿರಲಿ, ಸುದ್ದಿ ಮನೆ ಇರಲಿ.. ವಾಟ್ಸ್‌ಆಯಪ್ ಗುಂಪುಗಳು ಮಹತ್ವದ ಪಾತ್ರ ವಹಿಸುತ್ತವೆ. ರಾಜಕಾರಣಿಗಳೂ ಇದರಿಂದ ಹೊರತಾಗಿಲ್ಲ. ಇತ್ತೀಚೆಗೆ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲಾಗುವುದರಲ್ಲೂ ವಾಟ್ಸ್‌ಆಯಪ್ ಗುಂಪುಗಳು ಪಾತ್ರ ವಹಿಸಿವೆ. 


ಕೇಂದ್ರ ಸರ್ಕಾರ ಯಾವಾಗ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಮಂಡಿಸಿ ಮತಕ್ಕೆ ಹಾಕುತ್ತದೆ ಎಂಬ ಬಗ್ಗೆ ಗೊಂದಲವಿದ್ದ ಕಾರಣ, ನಾಲ್ಕು ದಿನಗಳಿಂದ ವಿರೋಧ ಪಕ್ಷಗಳ ನಾಯಕರು ವಾಟ್ಸ್‌ಆಯಪ್ ಗುಂಪುಗಳಲ್ಲಿ ಸಂಸದರ ಹಾಜರಾತಿ, ಕಾರ್ಯತಂತ್ರ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಯತ್ನದ ಬಗ್ಗೆ ಸಂಕಥನ ರಚಿಸುವಲ್ಲಿ ನಿರತರಾಗಿದ್ದರು ಎಂದು ವರದಿ ತಿಳಿಸಿದೆ.

ಏಪ್ರಿಲ್ 17ರಂದು ಮಹಿಳಾ ಮೀಸಲಾತಿಯ ಶೀಘ್ರ ಜಾರಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಕುರಿತ ಮಸೂದೆ ಮತಕ್ಕೆ ಹಾಕುತ್ತಿದ್ದಂತೆ ಒಗ್ಗಟ್ಟು ಪ್ರದರ್ಶಿಸಿದ ವಿಪಕ್ಷಗಳು ಮಸೂದೆಯನ್ನು ಸೋಲಿಸಿದ್ದವು. ಮಸೂದೆ ಪರ 298 ಮತ್ತು ವಿರುದ್ಧವಾಗಿ 230ಕ್ಕೂ ಅಧಿಕ ಮತ ಬಿದ್ದಿದ್ದರಿಂದ ಮೂರನೇ ಎರಡರಷ್ಟು ಬಹುಮತ ಸಿಗದೇ ಮಸೂದೆಗೆ ಸೋಲಾಗಿತ್ತು. ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ತೃಣಮೂಲ ಕಾಂಗ್ರೆಸ್‌ನ ಏಳು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್‌ನ ಇಬ್ಬರು ಸದಸ್ಯರನ್ನು ಬಿಟ್ಟು ವಿರೋಧ ಪಕ್ಷಗಳ ಎಲ್ಲ ಸದಸ್ಯರು ಮತ ಚಲಾಯಿಸಿದ್ದರು.


ಸರ್ಕಾರ ಮಸೂದೆ ಅಂಗೀಕರಿಸಲು 352 ಮತಗಳ ಅವಶ್ಯಕತೆ ಇತ್ತು. ಸಂವಿಧಾನ ತಿದ್ದುಪಡಿ ಮಸೂದೆಯ ಮೇಲಿನ ಮತದಾನಕ್ಕೆ ಮುಂಚಿತವಾಗಿ, ಸರ್ಕಾರವು ಲೋಕಸಭೆ ಸ್ಥಾನಗಳಲ್ಲಿ ಶೇ 50ರಷ್ಟು ಹೆಚ್ಚಳದ ಕುರಿತು ತಿದ್ದುಪಡಿಯನ್ನು ತರುತ್ತಿದೆ. ಚರ್ಚೆಯ ಮಧ್ಯದಲ್ಲಿ 2023ರ ಮಹಿಳಾ ಕೋಟಾ ಕಾನೂನಿನ ಅಧಿಸೂಚನೆ ಹೊರಡಿಸುತ್ತಿದೆ ಎಂಬ ವರದಿಗಳು ಬಂದ ಬಳಿಕ ಸಸ್ಪೆನ್ಸ್ ಹೆಚ್ಚಾಗಿತ್ತು.

2023ರ ಮಹಿಳಾ ಕೋಟಾ ಕಾನೂನಿನ ಅಧಿಸೂಚನೆ

ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕಿರುವುದರಿಂದ ಗುರುವಾರ ರಾತ್ರಿ ಸರ್ಕಾರದ ಪರವಾದ ಕೆಲ ನಾಯಕರು ನಮ್ಮ ಸಂಸದರ ಮನವೊಲಿಸಲು ಯತ್ನಿಸಿದ್ದಾರೆ. ಈ ನಡುವೆ ಸಂವಿಧಾನ ತಿದ್ದುಪಡಿ ಮಸೂದೆ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯನ್ನು ಬೇರ್ಪಡಿಸಲು ಸರ್ಕಾರ ಆಯ್ಕೆಗಳನ್ನು ಅನ್ವೇಷಿಸುತ್ತಿದೆ ಎಂಬ ಮಾಹಿತಿ ಹರಡಿತ್ತು.

2023ರ ಮಹಿಳಾ ಮೀಸಲಾತಿ ಕಾನೂನನ್ನು ಅನುಷ್ಠಾನಗೊಳಿಸುವುದಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದ ನಂತರ ಗುರುವಾರ ರಾತ್ರಿ ವಿರೋಧ ಪಕ್ಷದ ನಾಯಕರು ಅಕ್ಷರಶಃ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾರ್ಯತಂತ್ರ ರೂಪಿಸಿದರು. ಸರ್ಕಾರವು ಯಾವ ಸನ್ನಿವೇಶಗಳನ್ನು ಸೃಷ್ಟಿಸಬಹುದು ಮತ್ತು ಪ್ರತಿತಂತ್ರಗಳನ್ನು ಹೇಗೆ ಸಿದ್ಧಪಡಿಸಬೇಕು ಎಂಬ ಬಗ್ಗೆ ಅವರು ತಲೆಕೆಡಿಸಿಕೊಂಡಿದ್ದರು. ವಾಟ್ಸ್‌ಆಯಪ್ ಗುಂಪುಗಳಲ್ಲಿ ಚರ್ಚೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಮತದಾನವು ಮತ್ತೊಂದು ಸವಾಲು: ಖರ್ಗೆ

'ಮತದಾನವು ಮತ್ತೊಂದು ಸವಾಲಾಗಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಎಚ್ಚರಿಕೆ ಬಂದಿತ್ತು. ಆಡಳಿತ ಪಕ್ಷಗಳ ಸದಸ್ಯರ ಹೇಳಿಕೆಗಳಿಂದ ಪ್ರಚೋದನೆಗೊಳ್ಳದಂತೆ ಅವರು ಸೂಚಿಸಿದ್ದರು. ತಮ್ಮ ಸಂಸದರು, ನಾಯಕರು ಅಥವಾ ಪಕ್ಷದ ಮೇಲೆ ಅವಮಾನಕಾರಿ ಹೇಳಿಕೆ ನೀಡಿದರೂ ತಾಳ್ಮೆ ಕಳೆದುಕೊಳ್ಳಬಾರದು ಎಂದು ಸೂಚಿಸಿದ್ದರು. ಯಾವುದೇ ಸಭಾತ್ಯಾಗದಂತಹ ತಾಳ್ಮೆ ಕಳೆದುಕೊಳ್ಳುವ ಕೃತ್ಯ ಎಸಗದಿರಿ ಎಂಬುದು ಖರ್ಗೆ ಅವರ ಸೂಚನೆಯಾಗಿತ್ತು' ಎಂದು ಹಿರಿಯ ನಾಯಕರೊಬ್ಬರು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.

ಗೈರುಹಾಜರಾದ ಸಂಸದರು ನಿಜವಾಗಿಯೂ ಸಂಸತ್ತಿನಲ್ಲಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು, ಪರಿಶೀಲಿಸಲು ವಾಟ್ಸ್‌ಆಯಪ್ ಗುಂಪನ್ನು ರಚಿಸಲಾಗಿತ್ತು. ಹಿರಿಯ ನಾಯಕರಿಗೆ ಹಾಜರಾತಿಯನ್ನು ಖಚಿತಪಡಿಸಲು ವಿರೋಧ ಪಕ್ಷಗಳು ಸಮನ್ವಯ ಸಾಧಿಸುತ್ತಿದ್ದವು ಎಂದು ಮೂಲಗಳು ತಿಳಿಸಿವೆ.

ಸಂವಿಧಾನ ತಿದ್ದುಪಡಿ ಮಸೂದೆ ಮತ್ತು ಇನ್ನೆರಡು ಆ ಸಂಬಂಧಿತ ಮಸೂದೆಗಳಿಗೆ ಹದಿನಾಲ್ಕು ಸಂಸದರು ಕನಿಷ್ಠ 115 ತಿದ್ದುಪಡಿಗಳನ್ನು ಸಲ್ಲಿಸಿದ್ದರು.

ಮಸೂದೆಯನ್ನು ಸೋಲಿಸಿದ ನಂತರ ವಿರೋದ ಪಕ್ಷಗಳನ್ನು ಸರ್ಕಾರು ಮಹಿಳಾ ವಿರೋಧಿ ಎಂದು ಬಿಂಬಿಸಿದೆ. ಶನಿವಾರ ಬೆಳಿಗ್ಗೆ ನಡೆದ ಸಭೆಯಲ್ಲೂ ತಮ್ಮ ಕುರಿತಾದ ಆಡಳಿತ ಪಕ್ಷದ ಸಂಕಥನದ ಬಗ್ಗೆ ವಿರೋಧ ಪಕ್ಷಗಳ ನಾಯಕರು ತಲೆಕೆಡಿಸಿಕೊಂಡಿದ್ದರು.

ಆಡಳಿತ ಪಕ್ಷದ ಆರೋಪಕ್ಕ ಪ್ರತಿಯಾಗಿ ವಿರೋಧ ಪಕ್ಷದ ದಾಳಿಯ ಮೊದಲ ಅಸ್ತ್ರವಾಗಿ ಪ್ರಿಯಾಂಕಾ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಳಿಕ, ಜೈರಾಮ್ ರಮೇಶ್ ಸುದ್ದಿಗೋಷ್ಠಿ ಸಹ ನಿಗದಿಯಾಗಿತ್ತು. ಆದರೆ, ವಿಪಕ್ಷಗಳ ಸದಸ್ಯರ ಸಲಹೆ ಬಳಿಕ ಅದನ್ನು ಕೈಬಿಡಲಾಯಿತು.

ಜಂಟಿ ಹೋರಾಟ

ವಿರೋಧ ಪಕ್ಷವು ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತದೆ ಎಂಬ ನಿರೂಪಣೆಯನ್ನು ಸರ್ಕಾರ ಮುಂದಿಡುತ್ತದೆ. ಆದರೆ, ಬಿಜೆಪಿ ಹಿಂಬಾಗಿಲಿನ ಮೂಲಕ ಕ್ಷೇತ್ರ ಪುನರ್‌ವಿಂಗಡಣೆಗೆ ಯತ್ನಿಸುತ್ತಿದೆ ಎಂಬ ನಿಲುವನ್ನು ನಾವು ಪ್ರತಿಪಾದಿಸಬೇಕು ಎಂದು ಕಾಂಗ್ರೆಸ್‌ನ ಜೈರಾಮ್ ರಮೇಶ್ ಸಭೆಯಲ್ಲಿ ಹೇಳಿದ್ದರು.

ಚುನಾವಣೆಗಳು ನಡೆಯುತ್ತಿರುವುದರಿಂದ ಜಂಟಿ ಯೋಜನೆಗಳು ಕಾರ್ಯಸಾಧ್ಯವಾಗದಿರಬಹುದು ಮತ್ತು ಪಕ್ಷಗಳು ತಮ್ಮದೇ ಆದ ಯೋಜನೆಗಳನ್ನು ಮಾಡಬೇಕೆಂದು ತೃಣಮೂಲ ಕಾಂಗ್ರೆಸ್ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತರುವಂತೆ ಕೋರಿ ವಿರೋಧ ಪಕ್ಷಗಳು ಸರ್ಕಾರಕ್ಕೆ ಜಂಟಿ ಪತ್ರ ಬರೆಯಬೇಕು ಎಂಬ ಸಲಹೆಗಳೂ ಬಂದಿವೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries