HEALTH TIPS

ಉಬರ್ ಉಚಿತ ಪ್ರಯಾಣ, ಹಲ್ವಾ..ಮತದಾನ ಹೆಚ್ಚಿಸಲು ಕೇರಳದಲ್ಲಿ ಆಯೋಗದಿಂದ ವಿಶೇಷ ಕ್ರಮ

 ತಿರುವನಂತಪುರ: ಉಬರ್ ಉಚಿತ ಪ್ರಯಾಣ, ಹಲ್ವಾ ಮತ್ತು ಕೇವಲ ₹ 1 ರೂಪಾಯಿಗೆ ಅಕ್ಕಿ ಹಿಟ್ಟು - ಇವು ಗ್ರಾಹಕರನ್ನು ಸೆಳೆಯಲು ಯಾವುದೋ ಮಳಿಗೆಯ ಜಾಹೀರಾತು ಎಂದು ಭಾಸವಾಗುತ್ತದೆ. ಆದರೆ ಇದು ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ತೆಗೆದುಕೊಂಡಿರುವ ವಿನೂತನ ಕ್ರಮ. ಏಪ್ರಿಲ್ 9 ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುವ ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗ ಈ ಪ್ರಯತ್ನ ಮಾಡುತ್ತಿದೆ.

ಮತದಾನವನ್ನು ಸಂಭ್ರಮವನ್ನಾಗಿ ಮಾಡುವುದು ಆಯೋಗ ಉದ್ದೇಶ.


ಉಬರ್ ಉಚಿತ ಪ್ರಯಾಣ, ಹಲ್ವಾ.. ಕೇರಳದ ಯುವಕರನ್ನು ಸೆಳೆಯಲು ಆಯೋಗದಿಂದ ವಿಶೇಷ ಕ್ರಮ

ಒಂದು ಸಾಲಿನಲ್ಲಿಕೇರಳದಲ್ಲಿ ಯುವ ಮತದಾರರನ್ನು ಆಕರ್ಷಿಸಲು ಉಚಿತ ಉಬರ್ ಪ್ರಯಾಣ, ಹಲ್ವಾ ವಿತರಣೆಯಂತಹ ವಿನೂತನ ಕ್ರಮಗಳನ್ನು ಚುನಾವಣಾ ಆಯೋಗ ಕೈಗೊಂಡಿದೆ.ಪ್ರಮುಖ ಮುಖ್ಯಾಂಶಗಳು• ಯುವ ಮತದಾರರ ಮೇಲೆ ಗಮನಕೇರಳದಲ್ಲಿರುವ 18-30 ವರ್ಷದ ಸುಮಾರು 50 ಲಕ್ಷ ಯುವಕರನ್ನು ಮತದಾನದತ್ತ ಸೆಳೆಯಲು ಆಯೋಗವು ಈ ವಿಶೇಷ ಆಕರ್ಷಣೀಯ ಕಾರ್ಯಕ್ರಮಗಳನ್ನು ರೂಪಿಸಿದೆ.• ಉಚಿತ ಪ್ರಯಾಣದ ಸೌಲಭ್ಯತಿರುವನಂತಪುರ ಮತ್ತು ಎರ್ನಾಕುಲಂನಲ್ಲಿ ಮತಗಟ್ಟೆಗಳಿಗೆ ಹೋಗಲು ಉಬರ್ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸಲಾಗುತ್ತಿದೆ.• ಸಿಹಿ ಹಂಚಿಕೆಯ ವಿಶಿಷ್ಟ ಉಪಕ್ರಮಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುವ ಮೊದಲ ಬಾರಿಯ ಮತದಾರರಿಗೆ ಸಿಹಿಯಾದ ಅನುಭವ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತಗಳು ಲಘು ಉಪಹಾರವಾಗಿ ಹಲ್ವಾ ವಿತರಿಸಲಿವೆ.• ರಿಯಾಯಿತಿ ಮತ್ತು ಕೊಡುಗೆಗಳುಮತದಾನದ ನಂತರ ಗ್ರಾಹಕರಿಗೆ ಸಪ್ಲೈಕೋ ಮೂಲಕ ಅಕ್ಕಿ ಹಿಟ್ಟಿನಲ್ಲಿ ರಿಯಾಯಿತಿ ಹಾಗೂ ಸ್ಟಾರ್‌ಬಕ್ಸ್ ಅಂತಹ ಕೆಫೆಗಳಲ್ಲಿ ವಿಶೇಷ ರಿಯಾಯಿತಿ ನೀಡುವ ಮಾತುಕತೆ ನಡೆದಿದೆ.• ಸಾಮಾಜಿಕ ಜಾಲತಾಣ ಅಭಿಯಾನಯುವಕರನ್ನು ತಲುಪಲು ಆಯೋಗವು ಬ್ಲಿಂಕಿಟ್, ಸ್ವಿಗ್ಗಿ, ಜೊಮ್ಯಾಟೊಗಳ ಮೂಲಕ ಸಂದೇಶ ರವಾನೆ, ಎ.ಐ ವಿಡಿಯೊಗಳು ಹಾಗೂ ರೀಲ್ಸ್ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.ಪ್ರಮುಖ ಅಂಕಿಅಂಶಗಳು50 ಲಕ್ಷಯುವ ಮತದಾರರ ಸಂಖ್ಯೆಏಪ್ರಿಲ್ 9ಚುನಾವಣೆಯ ದಿನಾಂಕ₹ 1ಮತದಾರರಿಗೆ ಅಕ್ಕಿ ಹಿಟ್ಟು ವಿತರಿಸುವ ದರಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಯುವ ಮತದಾರರನ್ನು ಸೆಳೆಯಲು ಸ್ಟಾರ್‌ಬಕ್ಸ್ ಮತ್ತು ಕೆಫೆ ಕಾಫಿ ಡೇಯಲ್ಲಿ ರಿಯಾಯಿತಿ ನೀಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಬ್ಲಿಂಕಿಟ್, ಸ್ವಿಗ್ಗಿ, ಜೊಮ್ಯಾಟೊ ಮತ್ತು ಡೊಮಿನೋಸ್ ಮುಂತಾದ ಆಹಾರ ವಿತರಣಾ ಸೇವೆಗಳ ಮೂಲಕ ಸಂದೇಶ ರವಾನಿಸಲಾಗುತ್ತದೆ. ಜೊತೆಗೆ ಎ.ಐ ವಿಡಿಯೊಗಳು, ರೀಲ್ಸ್ ಸೇರಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬಿಡುಗಡೆ ಮಾಡಿದ ಜೆನ್-ಝೀ ಗೀತೆಯನ್ನೂ ಬಳಸಿಕೊಳ್ಳಲಾಗುತ್ತಿದೆ.

'ನಮ್ಮ ಕ್ರಮದಿಂದ ಸಕಾರಾತ್ಮಕ ಸಂದೇಶ ರವಾನೆಯಾಗುತ್ತದೆ. ಇದು ಮತದಾನದ ಮೇಲೆ ಪ್ರಭಾವ ಬೀರಬಹುದು' ಎಂದು ಕೇರಳ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರತನ್ ಯು. ಕೇಲ್ಕರ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕೇರಳದಲ್ಲಿ 18-30 ವರ್ಷದ ಸುಮಾರು 50 ಲಕ್ಷ ಮತದಾರರಿದ್ದಾರೆ. ಆದರೆ ಇವರು ಮತದಾನದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಮತದಾನ ಮಾಡಲು ಬರುತ್ತಿಲ್ಲ ಎಂದು ಕೇಲ್ಕರ್ ಹೇಳಿದ್ದಾರೆ.

ಈ ಪ್ರವೃತ್ತಿಯನ್ನು ಸರಿಪಡಿಸಲು, ಯುವಕರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ಕಂಡುಕೊಂಡಿರುವ ಹಲವು ಮಾರ್ಗಗಳಲ್ಲಿ ಇವುಗಳೂ ಸೇರಿದೆ ಎಂದು ಅವರು ಹೇಳಿದ್ದಾರೆ.

'ಮತದಾನದ ದಿನದಂದು ಪ್ರತಿ ಜಿಲ್ಲೆಯಲ್ಲಿ ಮೊದಲ ಬಾರಿ ಹಕ್ಕು ಚಲಾಯಿಸುತ್ತಿರುವವರಿಗೆ ಹಲ್ವಾ ನೀಡಲಾಗುವುದು. ಪ್ರಜಾಪ್ರಭುತ್ವದ ಅಂಗಳಕ್ಕೆ ಪ್ರವೇಶಿಸಿ ಮೊದಲ ಹೆಜ್ಜೆ ಇಡುತ್ತಿರುವಾಗ, ಅವರ ನಾಗರಿಕ ಪ್ರಯಾಣವು ಸಿಹಿಯಾಗಿರಲಿ ಎನ್ನುವುದು ನಮ್ಮ ಉದ್ದೇಶ' ಎಂದು ಕೇಲ್ಕರ್ ವಿವರಿಸಿದರು.

ಇದಕ್ಕಾಗಿ ವಿಶೇಷ ಬ್ರಾಂಡೆಡ್ ಹಲ್ವಾಗಳ 200 ಪೊಟ್ಟಣಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಗಳಿಗೆ ತಲುಪಿಸಲಾಗುವುದು. ಅವರು ನಿರ್ದಿಷ್ಟ ಮತಗಟ್ಟೆಗಳನ್ನು ಗುರುತಿಸಲಿದ್ದಾರೆ. ಬಿಎಲ್‌ಒಗಳು ಮತ್ತು ಸ್ವಯಂಸೇವಕರು ಮೊದಲ ಬಾರಿಯ ಮತದಾರರನ್ನು ಪರಿಶೀಲಿಸಿ, ಹಲ್ವಾ ಪೊಟ್ಟಣಗಳನ್ನು ವಿತರಿಸಲಿದ್ದಾರೆ.

ಇದರ ಜೊತೆಗೆ, ಎರ್ನಾಕುಲಂ ಮತ್ತು ತಿರುವನಂತಪುರದಲ್ಲಿ ಮತದಾರರಿಗೆ ಉಬರ್ ಉಚಿತ ‍ಪ್ರಯಾಣ ಸಿಗಲಿದೆ. ಮನೆಯಿಂದ ಎರಡು ಕಿ.ಮೀ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳಿಗಷ್ಟೇ ಇದು ಅನ್ವಯ. ಅದಕ್ಕಿಂತ ದೂರ ಇದ್ದರೆ ಶುಲ್ಕ ಅನ್ವಯವಾಗಲಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಮತದಾನದ ನಂತರ, ಅಂದರೆ ಏಪ್ರಿಲ್ 10 ಮತ್ತು 11 ರಂದು ಗ್ರಾಹಕರಿಗೆ ₹ 1ಯಲ್ಲಿ ಅಕ್ಕಿ ಹಿಟ್ಟನ್ನು ನೀಡಲು ಸಪ್ಲೈಕೋ (Suಠಿಠಿಟಥಿಅo) ಮುಂದೆ ಬಂದಿದೆ. ಸ್ಟಾರ್‌ಬಕ್ಸ್ ಮತ್ತು ಕೆಫೆ ಕಾಫಿ ಡೇ ಮತದಾರರಿಗೆ ಕೆಲವು ರಿಯಾಯಿತಿಗಳನ್ನು ನೀಡುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕೇಲ್ಕರ್ ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries