ಅಲ್ಲದೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಬಳಸಲಾದ ಭಾಷೆಯ ಬಗ್ಗೆ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.
"ನೀವು ನಿಮ್ಮ ಅರ್ಜಿಯಲ್ಲಿ ಅಸಭ್ಯ ಭಾಷೆಯನ್ನು ಬಳಸಿದ್ದೀರಿ. ನಿಮ್ಮ ಅರ್ಜಿಯನ್ನು ಬರೆದವರು ಯಾರು?" ಎಂದು ಕೋಪಗೊಂಡ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಖುದ್ದಾಗಿ ಹಾಜರಾಗಿದ್ದ ಅರ್ಜಿದಾರರನ್ನು ಪ್ರಶ್ನಿಸಿದರು.
ಅರ್ಜಿಯಲ್ಲಿ ಅಂತಹ ಭಾಷೆಯನ್ನು ಬಳಸಿದ್ದು ಹೇಗೆ? ಯಾರಿಂದ ಬರೆಸಿದ್ದೀರಿ? ಎಂದು ನ್ಯಾಯಮೂರ್ತಿಗಳಾದ ಜೋಯ್‌ಮಲ್ಯ ಹಾಗೂ ವಿಪುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಕೇಳಿದರು.
ಒಂದೇ ಮಗುವನ್ನು ಹೊಂದಿರುವ ಕುಟುಂಬಕ್ಕೆ ಆರ್ಥಿಕ ಉತ್ತೇಜನ ನೀಡಲು ನೀತಿಗಳನ್ನು ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ ಅರ್ಜಿಯನ್ನು ಕೂಡ ಪೀಠ ವಜಾಗೊಳಿಸಿತು.

