HEALTH TIPS

ಭಾರತದ ವಿದೇಶಿ ವಿನಿಮಯ ಮೀಸಲು 9 ಶತಕೋಟಿ ಡಾಲರ್‌ ನಿಂದ 697.12 ಶತಕೋಟಿಗೆ ಜಿಗಿತ: RBI

ಮುಂಬೈ: ಎಪ್ರಿಲ್ 3, 2026ಕ್ಕೆ ಅಂತ್ಯಗೊಂಡಂತೆ ಭಾರತದ ವಿದೇಶಿ ವಿನಿಮಯ ಮೀಸಲು ಪ್ರಮಾಣ 9.063 ಶತಕೋಟಿ ಡಾಲರ್‌ ನಿಂದ 697.12 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ ಎಂದು ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಮಾರ್ಚ್ 27, 2026ಕ್ಕೆ ಅಂತ್ಯಗೊಂಡಂತೆ ಭಾರತದ ಒಟ್ಟಾರೆ ವಿದೇಶಿ ವಿನಿಮಯ ಮೀಸಲು 688.058 ಶತಕೋಟಿ ಡಾಲರ್‌ನಿಂದ 10.288 ಶತಕೋಟಿ ಡಾಲರ್‌ಗೆ ಕುಸಿದಿತ್ತು.

ಪಶ್ಚಿಮ ಏಶ್ಯ ಬಿಕ್ಕಟ್ಟು ಪ್ರಾರಂಭಗೊಳ್ಳುವುದಕ್ಕೂ ಮುನ್ನ, ಈ ವರ್ಷದ ಫೆಬ್ರವರಿ 27ರಂದು ಸಾರ್ವಕಾಲಿಕ ಏರಿಕೆ ಕಂಡಿದ್ದ ವಿದೇಶಿ ವಿನಿಮಯ ಮೀಸಲು ಪ್ರಮಾಣ 728.494 ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಪಶ್ಚಿಮ ಏಶ್ಯ ಬಿಕ್ಕಟ್ಟು ಪ್ರಾರಂಭಗೊಂಡ ಬಳಿಕ ಕುಸಿತದ ಹಾದಿ ಹಿಡಿದಿತ್ತು.

ಪಶ್ಚಿಮ ಏಶ್ಯ ಬಿಕ್ಕಟ್ಟು ಪ್ರಾರಂಭಗೊಂಡಾಗಿನಿಂದ ರೂಪಾಯಿ ಮೌಲ್ಯ ಒತ್ತಡಕ್ಕೆ ಸಿಲುಕಿತ್ತು. ಹೀಗಾಗಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ಡಾಲರ್ ಮಾರಾಟಕ್ಕೆ ಮುಂದಾಗಿತ್ತು ಹಾಗೂ ರೂಪಾಯಿ ಕುಸಿತವನ್ನು ತಡೆಗಟ್ಟಲು ಕೆಲವು ಅಚ್ಚರಿದಾಯಕ ನೀತಿ ಕ್ರಮಗಳನ್ನು ಕೈಗೊಂಡಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್‌ನ ದತ್ತಾಂಶದ ಪ್ರಕಾರ, ಎಪ್ರಿಲ್ 3ಕ್ಕೆ ಅಂತ್ಯಗೊಂಡಂತೆ ವಿದೇಶಿ ವಿನಿಮಯ ಸ್ವತ್ತಿನಲ್ಲಿ ಪ್ರಮುಖ ಭಾಗವಾದ ಮೀಸಲು ಪ್ರಮಾಣವು 1.784 ಶತಕೋಟಿಯಷ್ಟು ಏರಿಕೆಯಾಗಿ 552.856 ಶತಕೋಟಿಗೆ ತಲುಪಿತ್ತು.

ಇದೇ ಅವಧಿಯಲ್ಲಿ ಚಿನ್ನದ ಮೀಸಲು ಪ್ರಮಾಣ 7.221 ಶತಕೋಟಿ ಡಾಲರ್‌ನಷ್ಟು ಏರಿಕೆಯಾಗಿ 120.742 ಶತಕೋಟಿ ಡಾಲರ್‌ಗೆ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ವಿಶೇಷ ಹಿಂಪಡೆಯುವ ಹಕ್ಕುಗಳು 58 ದಶಲಕ್ಷ ಡಾಲರ್‌ನಷ್ಟು ಏರಿಕೆಯಾಗಿ 18.707 ಶತಕೋಟಿ ಡಾಲರ್‌ಗೆ ತಲುಪಿದೆ ಎಂದು ಅದು ಹೇಳಿದೆ.

ಎಪ್ರಿಲ್ 3ಕ್ಕೆ ಅಂತ್ಯಗೊಂಡಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ ಭಾರತದ ಮೀಸಲು ಪ್ರಮಾಣ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, 4.816 ಶತಕೋಟಿ ಡಾಲರ್‌ನಷ್ಟಿದೆ ಎಂಬುದು ಭಾರತೀಯ ರಿಸರ್ವ್ ಬ್ಯಾಂಕ್ ದತ್ತಾಂಶಗಳಿಂದ ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries