HEALTH TIPS

Election: ಬಂಗಾಳದಲ್ಲಿ ಶೇ 91.78, ತಮಿಳುನಾಡಿನಲ್ಲಿ ಶೇ 84 ರಷ್ಟು ದಾಖಲೆ ಮತದಾನ

 ಚೆನ್ನೈ/ ಕೋಲ್ಕತ್ತ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನದಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.


ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗಳಲ್ಲಿ ಮತದಾರರು ಅತ್ಯಧಿಕ ಪ್ರಮಾಣದಲ್ಲಿ ಭಾಗವಹಿಸುವ ಮೂಲಕ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ.ಪ್ರಮುಖ ವ್ಯತ್ಯಾಸಗಳುತಮಿಳುನಾಡು ವಿಧಾನಸಭಾ ಚುನಾವಣೆ• ತಮಿಳುನಾಡಿನಲ್ಲಿ ದಾಖಲೆ ಮತದಾನತಮಿಳುನಾಡಿನ 234 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ 84.29ರಷ್ಟು ಮತದಾನ ದಾಖಲಾಗಿದ್ದು, ಇದು ರಾಜ್ಯದ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.• ತಮಿಳುನಾಡಿನ ಮುಖ್ಯಾಂಶಗಳುಕರೂರು ಜಿಲ್ಲೆಯು ರಾಜ್ಯದಲ್ಲೇ ಅತ್ಯಧಿಕ ಶೇ 91.86 ಮತದಾನವನ್ನು ದಾಖಲಿಸಿದೆ; ಸ್ಟಾಲಿನ್ ಮತ್ತು ಪಳನಿಸ್ವಾಮಿ ಸೇರಿದಂತೆ ಹಲವು ಗಣ್ಯರು ಕಣದಲ್ಲಿದ್ದಾರೆ.• ಮುಂಬರುವ ಮಹತ್ವದ ದಿನಾಂಕಗಳುಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದೆ ಮತ್ತು ಮತ ಎಣಿಕೆಯು ಮೇ 4ರಂದು ನಡೆಯಲಿದೆ.ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ• ಬಂಗಾಳದಲ್ಲಿ ಐತಿಹಾಸಿಕ ಮತದಾನಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನದಲ್ಲಿ ಶೇ 91.78ರಷ್ಟು ಮತದಾನವಾಗಿದೆ, ಇದು ಸ್ವಾತಂತ್ರ್ಯ ನಂತರದ ರಾಜ್ಯದ ಗರಿಷ್ಠ ಪ್ರಮಾಣವಾಗಿದೆ.• ಪಶ್ಚಿಮ ಬಂಗಾಳ ಚುನಾವಣಾ ಸಿದ್ಧತೆ152 ಕ್ಷೇತ್ರಗಳಲ್ಲಿ 1,478 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬಿಗಿ ಭದ್ರತೆಯ ನಡುವೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ.ಪ್ರಮುಖ ಅಂಕಿಅಂಶಗಳುಶೇ 84.29ತಮಿಳುನಾಡು ಮತದಾನ ಪ್ರತಿಶತಶೇ 91.78ಬಂಗಾಳ ಮತದಾನ ಪ್ರತಿಶತಶೇ 91.86ಕರೂರಿನಲ್ಲಿ ಮತದಾನದ ಪ್ರಮಾಣಮೇ 4ಪಶ್ಚಿಮ ಬಂಗಾಳ ಮತ ಎಣಿಕೆ ದಿನಾಂಕ1,478ಪಶ್ಚಿಮ ಬಂಗಾಳ ಅಭ್ಯರ್ಥಿಗಳ ಸಂಖ್ಯೆಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಸಂಜೆ 6 ಗಂಟೆ ವೇಳೆಗೆ ತಮಿಳುನಾಡಿನಲ್ಲಿ ಶೇ 84.29ರಷ್ಟು, ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನದಲ್ಲಿ ಶೇ 91.78ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

ತಮಿಳುನಾಡು...

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ರಾಜ್ಯವು ತನ್ನ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಿತು. ಒಟ್ಟು 5.73 ಕೋಟಿ ಮತದಾರರಲ್ಲಿ ಶೇ 84.29ರಷ್ಟು ಮತದಾನವಾಗಿದೆ. 2011ರ ವಿಧಾನಸಭಾ ಚುನಾವಣೆಯಲ್ಲಿ ದಾಖಲಾಗಿದ್ದ ಶೇ 78.29ರಷ್ಟು ಮತದಾನವೇ ರಾಜ್ಯದ ಗರಿಷ್ಠ ಪ್ರಮಾಣವಾಗಿತ್ತು.

ಎಸ್‌ಐಆರ್‌ ಪರಿಣಾಮ ಮತದಾರರ ಪಟ್ಟಿಯ ಗಾತ್ರ 5.73 ಕೋಟಿಗೆ ಇಳಿಕೆಯಾಗಿತ್ತು. ಕಳೆದ ಚುನಾವಣೆಯಲ್ಲಿ ಸುಮಾರು 6.29 ಕೋಟಿ ಮತದಾರರಿದ್ದರು ಎಂದು ಆಯೋಗ ತಿಳಿಸಿದೆ.

ಕರೂರಿನಲ್ಲಿ ಶೇ 91.86, ಚೆನ್ನೈ ಶೇ.83.09, ಮದುರೈ ಶೇ 80.15, ಕೊಯಮತ್ತೂರು ಶೇ 84.40, ತಿರುಚಿರಾಪಳ್ಳಿ ಶೇ 85.04 ರಷ್ಟು ಮತದಾನವಾಗಿದೆ. ಕರೂರು ರಾಜ್ಯದಲ್ಲೇ ಮೊದಲ ಸ್ಥಾನಪಡೆದಿದೆ.

ಪ್ರಮುಖ ಅಭ್ಯರ್ಥಿಗಳು: ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಪ್ರಮುಖರಾಗಿದ್ದಾರೆ.

ಪಶ್ಚಿಮ ಬಂಗಾಳ...

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನದಲ್ಲಿ 152 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನದಲ್ಲಿ ಶೇ 91.78ರಷ್ಟು ಮತದಾನವಾಗಿದೆ.

ಸ್ವಾತಂತ್ರ್ಯ ನಂತರ ರಾಜ್ಯದಲ್ಲಿ ದಾಖಲಾದ ಅತಿ ಹೆಚ್ಚಿನ ಮತದಾನದ ಪ್ರಮಾಣವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಅಇಅ) ಜ್ಞಾನೇಶ್ ಕುಮಾರ್ ಗುರುವಾರ ತಿಳಿಸಿದ್ದಾರೆ.

294 ವಿಧಾನಸಭಾ ಕ್ಷೇತ್ರಗಳ ಪೈಕಿ 152 ಸ್ಥಾನಗಳಿಗೆ ಗುರುವಾರ ಬಿಗಿ ಭದ್ರತೆಯ ನಡುವೆ ಮತದಾನ ನಡೆಯಿತು. 16 ಜಿಲ್ಲೆಗಳಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ 167 ಮಹಿಳೆಯರು ಸೇರಿದಂತೆ ಒಟ್ಟು 1,478 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿ 6 ಗಂಟೆಗೆ ಮುಕ್ತಯವಾಯಿತು.

ಬಂಗಾಳದಲ್ಲಿ ಎರಡನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದ್ದು ಮತ ಎಣಿಕೆ ಮೇ 4ರಂದು ನಡೆಯಲಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries