HEALTH TIPS

ಪಶ್ಚಿಮ ಬಂಗಾಳ ಚುನಾವಣೆ| EVM ಮೇಲಿನ ಬಿಜೆಪಿ ಬಟನ್‌ಗೆ ಟೇಪ್ ಹಾಕಿದ ಟಿಎಂಸಿ: ಬಿಜೆಪಿ ಆರೋಪ

 ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಮತದಾನದ ದಿನವೇ ಹಲವೆಡೆ ಹಿಂಸಾಚಾರ, ಇವಿಎಂ ದೋಷದ ಆರೋಪ ಕೇಳಿ ಬಂದಿದೆ. ಫಾಲ್ಟಾ ಕ್ಷೇತ್ರದಲ್ಲಿ ಟಿಎಂಸಿ ಇವಿಎಂ ಅನ್ನು ತಿರುಚಿದೆ ಎಂದು ಬಿಜೆಪಿ ಆರೋಪಿಸಿದೆ. ಆರೋಪ ದೃಢಪಟ್ಟರೆ ಅಂತಹ ಮತಗಟ್ಟೆಯಲ್ಲಿ ಮರು ಮತದಾನ ನಡೆಸಲಾಗುವುದು ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.


ನನ್ನ ಪರವಾಗಿ ಮತಚಲಾಯಿಸದಂತೆ ಮತದಾರರನ್ನು ತಡೆಯಲು ತೃಣಮೂಲ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಅಡಚಣೆ ಉಂಟು ಮಾಡಿದೆ ಎಂದು ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಆರೋಪಿಸಿದ್ದಾರೆ. ವೀಡಿಯೊಗಳಲ್ಲಿ ಸಿಪಿಎಂ ಮತ್ತು ಬಿಜೆಪಿ ಅಭ್ಯರ್ಥಿಗಳ ಹೆಸರಿನ ಪಕ್ಕದಲ್ಲಿ ಟೇಪ್ ಅಂಟಿಸಿರುವುದು ಕಂಡು ಬಂದಿದೆ. ಈ ಕುರಿತು ಸಿಪಿಎಂ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬಿಜೆಪಿ ಅಭ್ಯರ್ಥಿಯ ಪಕ್ಕದಲ್ಲಿರುವ ಬಟನ್ ಅನ್ನು ಟೇಪ್ ಮಾಡಲಾಗಿದೆ ಎಂದು ಆರೋಪಿಸಿ ವೀಡಿಯೊವನ್ನು ಹಂಚಿಕೊಂಡ ಅಮಿತ್ ಮಾಳವಿಯಾ, ಫಾಲ್ಟಾದಿಂದ ಟಿಎಂಸಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಕ್ರಿಮಿನಲ್ ಜಹಾಂಗೀರ್ ಖಾನ್ ಪರವಾಗಿ ಮಮತಾ ಬ್ಯಾನರ್ಜಿ ಮಾತನಾಡುವಾಗ ಇದನ್ನೇ ಸಮರ್ಥಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

ಹಲವಾರು ಮತಗಟ್ಟೆಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸದಂತೆ ಟೇಪ್‌ ಬಳಸಿ ಬಟನ್‌ ಅನ್ನು ನಿರ್ಬಂಧಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

"ಇವಿಎಂ ಬಟನ್‌ಗೆ ಟೇಪ್ ಅಂಟಿಸಲಾಗಿದೆ ಎಂಬ ಆರೋಪದ ಕುರಿತು ಪರಿಶೀಲಿಸಿ, ಅದು ಸತ್ಯವಾಗಿದ್ದರೆ, ಆ ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲಾಗುವುದು" ಎಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ ಎಂದು  ANI ವರದಿ ಮಾಡಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries