ತ್ರಿಕೈಪಟ್ಟ : ವಯನಾಡ್ ದುರಂತದಲ್ಲಿ ಮನೆಕಳಕೊಂಡವರಿಗೆ ಮುಸ್ಲಿಂಲೀಗ್ ಘೋಷಿಸಿದ್ದ ಉಚಿತ ಮನೆಗಳ ವಾಗ್ದಾನದಂತೆ ಮೊದಲ ಹಂತದ 51 ಮನೆಗಳ ಹಸ್ತಾಂತರ ನಿನ್ನೆ ಚೂರಲ್ಮಲಾ ಎರತ್‍ನಲ್ಲಿ ನಡೆಯಿತು.
ಮನೆಗೆ ಆಗಮಿಸಿದ ಎಲ್ಲಾ ಆಪ್ತರು, ಸ್ನೇಹಿತರು ಮತ್ತು ನಾಯಕರನ್ನು ಸಂತ್ರಸ್ಥರು ಸಂತೋಷದಿಂದ ಸ್ವಾಗತಿಸಿದರು. ಮನೆ ಮತ್ತು ಎಲ್ಲಾ ಸೌಲಭ್ಯಗಳನ್ನು ಕಂಡು ಅಲ್ಲಿ ಬಂದವರ ಅನೇಕರ ಕಣ್ಣುಗಳು ತುಂಬಿಬಂದವು. ಅನಿಯಂತ್ರಿತ ಜನಸಂದಣಿಯನ್ನು ಪರಿಗಣಿಸಿ ಮತ್ತು ಸಂತ್ರಸ್ಥರ ಗೌಪ್ಯತೆಯನ್ನು ಗೌರವಿಸಲು, ಸಮಾರಂಭಗಳಲ್ಲಿ ದುರಂತ ಸಂತ್ರಸ್ತರ ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಮುಸ್ಲಿಂ ಲೀಗ್ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸಾದಿಖಾಲಿ ಶಿಹಾಬ್ ತಂಙಳ್ ಸೇರಿದಂತೆ ನಾಯಕರು ಒಬ್ಬೊಬ್ಬರಾಗಿ ಮನೆಗಳಿಗೆ ಭೇಟಿ ನೀಡಿದರು. ಸರಳ ಸಮಾರಂಭಗಳ ನಂತರ, ಎಲ್ಲರೂ ಊಟ ಮಾಡಿ ತೆರಳಿದರು.
ಗದ್ಗದಿತರಾದ ಪಿ.ಕೆ. ಕುನ್ಹಾಲಿಕುಟ್ಟಿ:
ಸರಳ ಗೃಹಪ್ರವೇಶ ಸಮಾರಂಭದಲ್ಲಿ ಯಾವುದೇ ಔಪಚಾರಿಕ ಕಾರ್ಯಕ್ರಮಗಳು ಇದ್ದಿರಲಿಲ್ಲ. ನಾಯಕರು ಪ್ರಾರ್ಥನೆ ಸಲ್ಲಿಸಲು ಮತ್ತು ಸಂತ್ರಸ್ಥರ ಸಂತೋಷದಲ್ಲಿ ಭಾಗಿಯಾಗಲು ಬಂದರು. ಸಮಾರಂಭದಲ್ಲಿ ಮಾತನಾಡುವಾಗ, ಮುಸ್ಲಿಂ ಲೀಗ್ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಲಿಕುಟ್ಟಿ ಭಾವುಕರಾಗಿ ಮಾತು ಅರ್ಧದಲ್ಲೇ ನಿಲ್ಲಿಸಿದರು.
ಸಂತ್ರಸ್ತರಿಗಾಗಿ ಇಷ್ಟೊಂದು ಸಹಾಯ ಮಾಡಲು ಮತ್ತು ಆ ಕೆಲಸದಲ್ಲಿ ಭಾಗವಾಗಲು ಸಾಧ್ಯವಾಗಿದ್ದಕ್ಕೆ ಸಂತೋಷವಾಗಿದೆ ಮತ್ತು ತಮ್ಮ ಪ್ರೀತಿಪಾತ್ರರ ಅಗಲಿಕೆ ಇನ್ನೂ ನೋವುಂಟುಮಾಡುತ್ತಿದೆ ಎಂದ ಅವರು ಬಳಿಕ, ದುಃಖದಿಂದ ಗದ್ಗದಿತರಾಗಿ ಭಾಷಣವನ್ನು ಮೊಟಕುಗೊಳಿಸಿದರು. ಪಾಣಕ್ಕಾಡ್ ಸಾದಿಖಲಿ ಶಿಹಾಬ್ ಅವರಿಗೆ ಮೈಕ್ ಹಸ್ತಾಂತರಿಸಿದರು.
“ಮನೆ ಸಾಕಾರಗೊಂಡಿರುವುದು ಒಂದು ಸುಂದರ ಕ್ಷಣ. ಆದಾಗ್ಯೂ, ನಷ್ಟದ ಭಾವನೆಯೂ ಇದೆ. ಈಗ ನಾವು ಮೃತರಿಗಾಗಿ ಪ್ರಾರ್ಥಿಸೋಣ” ಎಂದು ಅವರು ಭಾವನಾತ್ಮಕವಾಗಿ ಹೇಳಿದರು.
ಮುಸ್ಲಿಂ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ. ಸಲಾಂ, ಶಾಸಕ ಪಿ.ಕೆ. ಬಶೀರ್, ಮುಸ್ಲಿಂ ಲೀಗ್ ರಾಷ್ಟ್ರೀಯ ಸಹ ಕಾರ್ಯದರ್ಶಿ ಜಯಂತಿ ರಾಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಮುಹಮ್ಮದ್, ಶಾಸಕ ಟಿ. ಸಿದ್ದಿಕ್, ಯೂತ್ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಫಿರೋಜ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚಂದ್ರಿಕಾ ಕೃಷ್ಣನ್, ಡಿಸಿಸಿ ಅಧ್ಯಕ್ಷ ಟಿ.ಜೆ. ಐಸಾಕ್, ಯುಡಿಎಫ್ ಸಂಚಾಲಕ ಎಚ್.ಬಿ. ಪ್ರದೀಪ್, ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಕೆ. ರಶೀದ್, ಮಾನಂದವಾಡಿ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಉಷಾ ವಿಜಯನ್, ಪಿ.ಪಿ. ಅಲಿ, ಎನ್ಜೆರಲತ್ ಹರಿಗೋವಿಂದನ್ ಮತ್ತಿತರರು ಭಾಗವಹಿಸಿದ್ದರು.

