ಟೊಕಿಯೊ: ಒಂದು ವಾರದ ಬಳಿಕ ಜಪಾನ್‌ನಲ್ಲಿ ಮತ್ತೆ ಭೂಮಿ ಕಂಪಿಸಿದೆ. ಉತ್ತರ ಜಪಾನ್‌ನಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಉತ್ತರ ಜಪಾನ್‌ನಲ್ಲಿ ಸೋಮವಾರ ಮುಂಜಾನೆ 6.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಪಾನ್‌ನ ಹವಾಮಾನ ಇಲಾಖೆಯು ಸುನಾಮಿಯ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ.
ನರಬೆಟ್ಸು ಎಂಬ ಚಿಕ್ಕ ಪಟ್ಟಣದ ಪಶ್ಚಿಮಕ್ಕೆ 18 ಕಿ.ಮೀ. ದೂರದಲ್ಲಿ 81 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಒಂದು ವಾರದ ಹಿಂದೆ ಉತ್ತರ ಜಪಾನಿನ ಕರಾವಳಿಯಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಇವಾಟೆ ಪ್ಯಾಂತ್ಯದ ಕುಜಿ ಬಂದರಿನಲ್ಲಿ ಸುಮಾರು 2.6 ಅಡಿ ಎತ್ತರದ ಸುನಾಮಿ ಅಲೆಗಳು ಕಂಡುಬಂದಿತ್ತು.

