ಕಾಸರಗೋಡು: ವಿಧಾನಸಭಾ ಚುನಾವಣೆಗೆ ಮತದಾನ ಏರುಗತಿಯಲಲಿ ಮುಂದುವರಿಯುತ್ತಿದ್ದು, 140 ಕ್ಷೇತ್ರಗಳ 30,495 ಬೂತ್‍ಗಳಲ್ಲಿ ಮತದಾನ ನಡೆಯುತ್ತಿದೆ. ಕೇರಳವನ್ನು ಯಾರು ಆಳುತ್ತಾರೆ ಎಂಬುದನ್ನು 2.71 ಕೋಟಿ ಮತದಾರರು ನಿರ್ಧರಿಸುತ್ತಿದ್ದಾರೆ. 23 ದಿನಗಳ ಕಾಲ 883 ಅಭ್ಯರ್ಥಿಗಳು ನಡೆಸಿದ ಬಿರುಸಿನ ಪ್ರಚಾರದ ನಂತರ ಕೇರಳ ಮತಗಟ್ಟೆಗಳಲ್ಲಿ ಇಂದು ಭವಿಷ್ಯ ನಿರ್ಧಾರಗೊಳ್ಳಲಿದೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಸಂಜೆ 6 ಗಂಟೆಯವರೆಗೆ ಮತದಾನ ಮುಂದುವರಿಯಲಿದೆ. 2500 ಸಮಸ್ಯೆ ಪೀಡಿತ ಬೂತ್‍ಗಳಲ್ಲಿ ವಿಶೇಷ ಜಾಗರೂಕತೆ ವಹಿಸಲಾಗಿದೆ. ಮೂರು ರಂಗಗಳು ಬಹಳ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿವೆ.
ಮತದಾನ ಆರಂಭಗೊಂಡು ಮಧ್ಯಾಹ್ನ 12 ಗಂಟೆಯ ವರೆಗೆ ರಾಜ್ಯದಾದ್ಯಂತ 33.28 ಶೇ. ಮತ ಚಲಾವಣೆಗೊಂಡಿದೆ.
ತಿರುವನಂತಪುರಂ-33.37ಶೇ
ಕೊಲ್ಲಂ-32.94 ಶೇ
ಪತ್ತನಂತಿಟ್ಟ-33.36 ಶೇ
ಆಲಪ್ಪುಳ-35.72 ಶೇ
ಕೊಟ್ಟಾಯಂ-34.56
ಇಡುಕ್ಕಿ-32.34 ಶೇ
ಎರ್ನಾಕುಳಂ-35.86 ಶೇ
ತ್ರಿಶೂರ್-34.02 ಶೇ
ಪಾಲಕ್ಕಾಡ್-34.05 ಶೇ.
ಮಲಪ್ಪುರಂ_31.97 ಶೇ
ಕೋಝಿಕ್ಕೋಡ್_33.05 ಶೇ
ವಯನಾಡ್-33.43 ಶೇ
ಕಣ್ಣೂರು-32.22 ಶೇ
ಕಾಸರಗೋಡು-31.19 ಶೇ.
ಎಂಬಂತೆ ಮತದಾನ ದಾಖಲಾಗಿದೆ. ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ 29.77 ಶೇ.ಮತ ಚಲಾವಣೆಗೊಂಡಿದೆ.
ಬೆಳಿಗ್ಗೆ 7 ಗಂಟೆಯಿಂದಲೇ ಬಹುತೇಕ ಮತಗಟ್ಟೆಗಳಲ್ಲಿ ಜನಸಂದಣಿ ಕಂಡುಬಂದಿದೆ.


