HEALTH TIPS

4 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ ಪಾಕ್: ವಿಶ್ವಸಂಸ್ಥೆಯಲ್ಲಿ ಭಾರತ

 ವಿಶ್ವಸಂಸ್ಥೆ: ಪಾಕಿಸ್ತಾನದ ದೀರ್ಘಕಾಲದ ನರಮೇಧದ ಕೃತ್ಯಗಳನ್ನು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಟೀಕಿಸಿದೆ.

ದಶಕಗಳಿಂದ ತನ್ನ ಗಡಿಯೊಳಗೆ ಮತ್ತು ಹೊರಗೆ ಹಿಂಸಾಚಾರ ನಡೆಸುತ್ತಿರುವ ಪಾಕ್‌ನ ಅಮಾನವೀಯ ನಡವಳಿಕೆಯು ಆಂತರಿಕ ವೈಫಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತ ಹೇಳಿದೆ. 


'ಸಶಸ್ತ್ರ ಸಂಘರ್ಷದಲ್ಲಿ ನಾಗರಿಕರ ರಕ್ಷಣೆ' ಕುರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ವಾರ್ಷಿಕ ಮುಕ್ತ ಚರ್ಚೆಯಲ್ಲಿ ಬುಧವಾರ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ, 'ದೀರ್ಘಕಾಲದ ನರಮೇಧ ಕೃತ್ಯಗಳ ದಾಖಲೆ ಹೊಂದಿರುವ ಪಾಕಿಸ್ತಾನವು ಭಾರತದ ಸಂಪೂರ್ಣ ಆಂತರಿಕವಾಗಿರುವ ಸಮಸ್ಯೆಗಳನ್ನು ಉಲ್ಲೇಖಿಸುತ್ತಿರುವುದು ವಿಪರ್ಯಾಸ' ಎಂದು ಹೇಳಿದ್ದಾರೆ.

ಪಾಕಿಸ್ತಾನದ ಪ್ರತಿನಿಧಿಯು ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಚರ್ಚೆಯಲ್ಲಿ ಎತ್ತಿದ ನಂತರ ಪರ್ವತನೇನಿ ಈ ರೀತಿ ತಿರುಗೇಟು ನೀಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ದಾಳಿಯನ್ನು ಪ್ರಸ್ತಾಪಿಸಿದ ಅವರು, 'ಮಾರ್ಚ್‌ನ ಪವಿತ್ರ ರಂಜಾನ್ ತಿಂಗಳಲ್ಲಿ, ಶಾಂತಿ, ಸಹಾನುಭೂತಿಯ ಸಮಯದಲ್ಲಿ ಕಾಬೂಲ್‌ನ ಆಸ್ಪತ್ರೆ ಮೇಲೆ ಪಾಕಿಸ್ತಾನ ಬರ್ಬರ ವೈಮಾನಿಕ ದಾಳಿ ನಡೆಸಿದೆ ಎಂಬುದನ್ನು ಜಗತ್ತು ಮರೆತಿಲ್ಲ' ಎಂದು ಹೇಳಿದ್ದಾರೆ.

ಯುಎನ್‌ಎಎಂಎ (ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ನೆರವು ಮಿಷನ್) ಪ್ರಕಾರ, ' ಪಾಕಿಸ್ತಾನದ ಈ ಹೇಡಿತನ ಮತ್ತು ವಿವೇಚನಾ ರಹಿತ ಕೃತ್ಯವು 269 ನಾಗರಿಕರ ಜೀವವನ್ನು ತೆಗೆದಿದೆ. ಇನ್ನೂ 122 ಜನರು ಗಾಯಗೊಂಡಿದ್ದಾರೆ. ಈ ದಾಳಿಯನ್ನು ಮಿಲಿಟರಿ ಗುರಿ ಎಂದು ಸಮರ್ಥಿಸಲಾಗುವುದಿಲ್ಲ'ಎಂದು ಅವರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಕಾನೂನಿನ ಉನ್ನತ ತತ್ವಗಳನ್ನು ಪಾಲಿಸುವುದಾಗಿ ಹೇಳುತ್ತಾ ಕತ್ತಲೆಯಲ್ಲಿ ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಪಾಕಿಸ್ತಾನದ ಕಪಟತನಕ್ಕೆ ಸಾಕ್ಷಿ ಎಂದು ಪರ್ವತನೇನಿ ಕಿಡಿಕಾರಿದ್ದಾರೆ.

ಅಫ್ಗಾನ್ ನಾಗರಿಕರ ವಿರುದ್ಧ ಪಾಕ್ ನಡೆಸಿದ ಗಡಿಯಾಚೆಗಿನ ಸಶಸ್ತ್ರ ದಾಳಿಯಿಂದಾಗಿ 94,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಯುಎನ್‌ಎಎಂಎ ತಿಳಿಸಿದೆ.

1971ರಲ್ಲಿ ಆಪರೇಷನ್ ಸರ್ಚ್‌ಲೈಟ್ ಸಮಯದಲ್ಲಿ ಪಾಕಿಸ್ತಾನವು ತನ್ನದೇ ಸೈನ್ಯದಿಂದ 4 ಲಕ್ಷ ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಅನುಮೋದಿಸಿತ್ತು ಎಂದು ಪರ್ವತನೇನಿ ಹೇಳಿದ್ದಾರೆ.

1971ರ ಮಾರ್ಚ್ ತಿಂಗಳಲ್ಲಿ ಪೂರ್ವ ಪಾಕಿಸ್ತಾನದಲ್ಲಿ(ಈಗ ಬಾಂಗ್ಲಾದೇಶ) ಬಾಂಗ್ಲಾದೇಶದ ರಾಷ್ಟ್ರೀಯತಾವಾದಿ ಚಳವಳಿಯ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಪಾಕಿಸ್ತಾನಿ ಸೇನೆಯು ಆಪರೇಷನ್ ಸರ್ಚ್‌ಲೈಟ್ ಎಂಬ ಹೀನ ಕೃತ್ಯ ನಡೆಸಿತ್ತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries