HEALTH TIPS

ಟ್ರಿನಿಡಾಡ್‌- ಟೊಬಾಗೊ ಜೊತೆ 8 ಒಪ್ಪಂದ

 ಪೋರ್ಟ್‌ ಆಫ್‌ ಸ್ಪೇನ್‌ (PTI):ಪ್ರವಾಸೋದ್ಯಮ, ಆರೋಗ್ಯ,ಮೂಲಸೌಕರ್ಯ ಹಾಗೂಆಯುರ್ವೇದ ಕ್ಷೇತ್ರದಲ್ಲಿ ಟ್ರಿನಿಡಾಡ್‌- ಟೊಬಾಗೊ ಜೊತೆ ಭಾರತವು ಎಂಟು ಒಪ್ಪಂದಗಳನ್ನು ಮಾಡಿಕೊಂಡಿದೆ.


ಕೆರಿಬಿಯನ್‌ ರಾಷ್ಟ್ರಕ್ಕೆ ಶುಕ್ರವಾರ, ಶನಿವಾರ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಈ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಭಾನುವಾರ ತಿಳಿಸಿದೆ.

ಟ್ರಿನಿಡಾಡ್‌- ಟೊಬಾಗೊದ ಪ್ರಧಾನಿ ಕಮಲಾ ಪೆಸ್ರಾದ್‌ ಬಿಸ್ಸೆಸ್ಸರ್‌ ಹಾಗೂ ಅಲ್ಲಿನ ಹಿರಿಯ ಮುಖಂಡರೊಂದಿಗೆ ಜೈಶಂಕರ್‌ ಅವರು ಮೂಲಸೌಕರ್ಯ, ಭದ್ರತೆ, ವಿಧಿವಿಜ್ಞಾನ, ಆರೋಗ್ಯ, ಸಾಮರ್ಥ್ಯವರ್ಧನೆಯಲ್ಲಿನ ಸಹಕಾರ ಕುರಿತಂತೆ ದ್ವಿಪಕ್ಷೀಯ ಚರ್ಚೆ ನಡೆಸಿದ್ದಾರೆ ಎಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2025ರಲ್ಲಿ ಭೇಟಿ ನೀಡಿದ್ದ ಸಂದರ್ಭ ಘೋಷಿಸಿದ್ದ ಯೋಜನೆಗಳ ಪ್ರಗತಿಯನ್ನು ಜೈಶಂಕರ್‌ ಪರಿಶೀಲಿಸಿದರು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಟ್ರಿನಿಡಾಡ್‌-ಟೊಬಾಗೊದ ಪ್ರಧಾನಿ ಸಮ್ಮುಖದಲ್ಲಿ ಆಯ್ದ ಶಾಲೆಗಳ ವಿದ್ಯಾರ್ಥಿಗಳಿಗೆ ಎರಡು ಸಾವಿರ ಲ್ಯಾಪ್‌ಟಾಪ್‌ ವಿತರಿಸಿದ ಜೈಶಂಕರ್‌, ಕೃಷಿ ಸಂಸ್ಕರಣಾ ಸೌಲಭ್ಯ ಕೇಂದ್ರ ಹಾಗೂ ರಾಷ್ಟ್ರೀಯ ಪ್ರಾಸ್ಥೆಟಿಕ್ಸ್‌ ಕೇಂದ್ರವನ್ನು ಉದ್ಘಾಟಿಸಿದರು ಎಂದಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries