HEALTH TIPS

ಮಲೆನಾಡು ಪ್ರದೇಶದ ಜನತೆಗೆ ವರದಾನವಾದ ಸಂಚಾರಿ ಪಶುವೈದ್ಯಕೀಯ ಚಿಕಿತ್ಸಾಲಯ

ಕಾಸರಗೋಡು: ಮಲೆನಾಡು ಪ್ರದೇಶದ ಹೈನುಗಾರರಿಗೆ ಉಪಯೋಗವಾಗುವ ರೀತಿಯಲ್ಲಿ ಪರಪ್ಪ ಬ್ಲಾಕ್ ಪಂಚಾಯಿತಿಯ ಸಂಚಾರಿ ಪಶುವೈದ್ಯಕೀಯ ಚಿಕಿತ್ಸಾಲಯವನ್ನು ಆರಂಭಿಸಲಾಗಿದೆ.  ರೈತರು ತಮ್ಮ ಪ್ರಾಣಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ಪ್ರಯಾಣಸಮಸ್ಯೆ ಪರಿಹರಿಸುವ ನಿಟ್ಟಿನ್ನಲಿ ಅವರ ಮನೆ ಬಾಗಿಲಿಗೆ ತಜ್ಞ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ. ಯೋಜನೆ ಆರಂಭಗೊಂಡಂದಿನಿಂದ ಇದುವರೆಗೆ 3000 ಕ್ಕೂ ಹೆಚ್ಚು ವಿಭಿನ್ನ ಮೊಬೈಲ್ ಘಟಕವು ಜಾನುವಾರುಗಳ ವಿವಿಧ ರೀತಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಿತು. 


ಬ್ಲಾಕ್ ಪಂಚಾಯಿತಿಯ ವಾರ್ಷಿಕ ಯೋಜನೆಯನ್ವಯ ಸಂಚಾರಿ ಪಶುವೈದ್ಯಕೀಯ ಚಿಕಿತ್ಸಾಲಯವನ್ನು 2022ರ ನವೆಂಬರ್ ತಿಂಗಳಲ್ಲಿ ಆರಂಭಿಸಲಾಗಿದ್ದು, ಬೆಳಗ್ಗೆ 9ರಿಂದ ಸಂಜತೆ 5ರ ವರೆಗೆ ಕ್ಲಿನಿಕ್ ಚಟುವಟಿಕೆ ನಡೆಸುತ್ತಿದೆ.  ಕ್ಲಿನಿಕ್ ಮೂಲಕ ಪ್ರಸಕ್ತ ಮಾಸಿಕ 70 ರಿಂದ 80 ಪ್ರಕರಣಗಳು ದಾಖಲಾಗುತ್ತಿದೆ. ಹಸು, ಆಡು ಮತ್ತು ಇತರ ಸಾಕು ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತುರ್ತು ಸಂದರ್ಭದಲ್ಲಿ, ಸಣ್ಣ ಶಸ್ತ್ರಚಿಕಿತ್ಸೆಗಳನ್ನು ಮನೆಯಲ್ಲಿಯೇ ನಡೆಸಲಾಗುತ್ತಿದೆ. 

ಬಾನಂ ಪ್ರದೇಶದಲ್ಲಿ ಕೃಷಿಕರೊಬ್ಬರ ಹಸುವಿನ ಗರ್ಭಕೋಶ ಹೊರಬಂದು, ಗಂಭೀರಾವಸ್ಥೆ ತಲುಪಿದಾಗ ಸಂಚಾರಿ ಪಶುವೈದ್ಯಕೀಯ ಘಟಕ ಧಾವಿಸಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಹಸುವಿನ ಪ್ರಾಣವುಳಿಸುವ ಮೂಲಕ ನೆರಾಗಿದೆ.   ಹೆರಿಗೆಯ ನಂತರ ಹಸುಗಳಲ್ಲಿ ಗರ್ಭಾಶಯದ ಹಿಗ್ಗುವಿಕೆ  ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದ್ದು, ಇದು ಗರ್ಭಾಶಯವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಹೊರತಳ್ಳುವ ಸ್ಥಿತಿ ನಿರ್ಮಣವಾಗುತ್ತಿದ್ದು, ಇದಕ್ಕೆ ತಕ್ಷಣ ಚಿಕಿತ್ಸೆ ನೀಡಿ, ಹಸುವನ್ನು ಸಾಮಾನ್ಯ ಸ್ಥಿತಿಗೆ ತಾರದಿದ್ದಲ್ಲಿ,  ರಕ್ತಸ್ರಾವ ಸೇರಿದಂತೆ ಸಮಸ್ಯೆಗಳು ಉಲ್ಬಣಗೊಂಡು ಹಸುತನ್ನ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬುದಾಗಿ ಪಶುವೈದ್ಯಾಧಿಕಾರಿಗಳು ಅಭಿಪ್ರಾಯಪಡುತ್ತಾರೆ.   ಸಾರಿಗೆ ಸಂಪರ್ಕವಿಲ್ಲದಿರುವ ಮಲೆನಾಡು ಪ್ರದೇಶದ ರೈತರಿಗೆ, ತಮ್ಮ ಜಾನುವಾರುಗಳು ಮತ್ತು ಸಾಕುಪ್ರಾಣಿಗಳು ಅನಾರೋಗ್ಯಕ್ಕೆ ಒಳಗಾದರೆ ಆಸ್ಪತ್ರೆಗೆ ಕರೆದೊಯ್ಯುವುದು ದೊಡ್ಡ ಸವಾಲಾಗಿರುವುದರಿಂದ ಪರಪ್ಪ ಬ್ಲಾಕ್ ಪಂಚಾಯಿತಿ ಆರಂಭಿಸಿರುವ ಸಂಚಾರಿ ಪಶುವೈದ್ಯಕೀಯ ಘಟಕವು ಇದಕ್ಕೆ ಶಾಶ್ವತ ಪರಿಹಾರ ನೀಡಿರುವುದಾಗಿ ಕೃಷಿಕಕುಞÂಕೃಷ್ಣನ್ ತಿಳಿಸುತ್ತಾರೆ. 

ಅಭಿಮತ:

-ಯೋಜನೆಯ ಮೂಲಕ ಹೆಚ್ಚು ಕ್ಲಿಷ್ಟಕರ ಹಾಗೂ ತುರ್ತು ಚಿಕಿತ್ಸೆಗಳನ್ನು ಸಹ ರೈತರ ಮನೆಗಳಿಗೆ ನೇರವಾಗಿ ಒದಗಿಸಲಾಗುತ್ತಿದೆ. ಇಲ್ಲಿಯವರೆಗೆ ಡಾ. ಆಲ್ವಿನ್ 3,300 ಕ್ಕೂ ಹೆಚ್ಚು ವಿವಿಧ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಾ. ಆಲ್ವಿನ್ ಜೇಮ್ಸ್‍ಕುಟ್ಟಿ, ಶಸ್ತ್ರಚಿಕಿತ್ಸಕ  

ಸಂಚಾರಿ ಪಶುವೈದ್ಯಕೀಯ ಚಿಕಿತ್ಸಾಲಯ  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries