HEALTH TIPS

ಯುದ್ಧದ ಕರಿಛಾಯೆ: ಗಾಜಾದಲ್ಲಿ ಹಣದುಬ್ಬರ, ಸಾಲಬಾಧೆಯಿಂದ ಕಳೆಗುಂದಿದ ಈದ್ ಸಂಭ್ರಮ

 ಖಾನ್ ಯೂನಿಸ್: ಮುಸ್ಲಿಮರ ಹಬ್ಬದ ಪ್ರಮುಖ ಆಕರ್ಷಣೆಗಳಾದ ಹೊಸ ಬಟ್ಟೆ ಧರಿಸಿ ಮಕ್ಕಳ ಸಂಭ್ರಮಾಚರಣೆ, ಕುರ್ಬಾನಿ ಮತ್ತು ಈದ್ ಬಿಸ್ಕತ್ತುಗಳು ಗಾಜಾದಲ್ಲಿ ಕೊಂಡುಕೊಳ್ಳಲು ಸಾಧ್ಯವಾಗಷ್ಟು ದುಬಾರಿಯಾಗಿದೆ, ಅಥವಾ ಲಭ್ಯವೇ ಇಲ್ಲದಂತಾಗಿದೆ. ಸಂಭ್ರಮ ಮತ್ತು ಸಂತೋಷದಿಂದಿರಬೇಕಾದ ಹಬ್ಬದ ವಾತಾವರಣದ ಮೇಲೆ ಯುದ್ಧದ ಕರಾಳ ಛಾಯೆ ಆವರಿಸಿದೆ.


'ಕೇವಲ ಸುತ್ತು ಹಾಕುವುದಕ್ಕೆ ಮಾತ್ರ ಮಾರುಕಟ್ಟೆಗೆ ಬಂದಂತಾಗಿದೆ. ಯಾವುದನ್ನೂ ಖರೀದಿಸುವ ಶಕ್ತಿ ಇಲ್ಲ. ದರ ಎಷ್ಟು ಎಂದು ಕೇಳಿ, ಬೇಸರದಿಂದ ಮರಳಿ ಬಂದೆ' ಎಂದು ಪ್ಯಾಲೆಸ್ಟೀನ್ ನಿವಾಸಿ ನಾದಿಯಾ ಅಬೂ ಶಮಲಾ ನೋವು ತೋಡಿಕೊಂಡರು.

'ಯುದ್ಧದ ಪರಿಣಾಮದಿಂದಾಗಿ ಉಂಟಾಗಿರುವ ಬೆಲೆ ಏರಿಕೆ ಹಾಗೂ ಸಾಲಬಾಧೆಯಿಂದಾಗಿ ಈ ಬಾರಿ ಯಾರಲ್ಲಿಯೂ ಸಂತೋಷದ ಕಳೆ ಇಲ್ಲ. ಮಕ್ಕಳಿಗೆ ಬೇಕಾದ ಸಾಮಾನ್ಯ ವಸ್ತುಗಳನ್ನು ಖರೀದಿಸಲು ನಮ್ಮಿಂದ ಆಗುತ್ತಿಲ್ಲ' ಎಂದು ಕೇಂದ್ರ ಗಾಜಾದ ದೇರ್ ಅಲ್ ಬಲಾಹ್‌ನಲ್ಲಿ ಯುದ್ಧದಿಂದಾಗಿ ನಿರಾಶ್ರಿತರಾದ 40 ವರ್ಷದ ಮಹಿಳೆ ಬೇಸರದಿಂದ ನುಡಿದರು.

2025ರ ಅಕ್ಟೋಬರ್‌ನಲ್ಲಿ ಕದನ ವಿರಾಮ ನಡೆದಿದ್ದರೂ, ಗಾಜಾದ ಮೇಲೆ ಇಸ್ರೇಲ್‌ನ ದಾಳಿ ಸಾಮಾನ್ಯವಾಗಿಬಿಟ್ಟಿದೆ. ಅಲ್ಲಿ ಶೇ 80 ರಷ್ಟು ಕಟ್ಟಡಗಳು ಯುದ್ಧದಿಂದ ಹಾನಿಗೊಳಗಾಗಿವೆ. ಬಹುತೇಕ ಮಂದಿ ಮೂಲಭೂತ ಅಗತ್ಯಗಳನ್ನೂ ಪೂರೈಸಲು ಆಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಗಾಜಾ ಪರಿಹಾರ: 7 ಬಿಲಿಯನ್‌ ಡಾಲರ್‌ ನೆರವು

ಗಾಜಾದ ಎಲ್ಲಾ ಪ್ರವೇಶ ದ್ವಾರಗಳನ್ನು ಇಸ್ರೇಲ್ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಅಗತ್ಯ ವಸ್ತುಗಳನ್ನು ಹೊತ್ತು ಬರುವ ವಿದೇಶಿ ನೆರವು ಹಾಗೂ ಖಾಸಗಿ ವಲಯದ ಟ್ರಕ್‌ಗಳನ್ನೂ ಇಸ್ರೇಲ್ ನಿಯಂತ್ರಿಸುತ್ತಿದೆ. ಇದರಿಂದಾಗಿ ಯುದ್ಧದಿಂದ ಗಗನಕ್ಕೇರಿರುವ ಬೆಲೆಗಳನ್ನು ಇಳಿಸಲು ಅಥವಾ ಸರಕುಗಳ ಕೊರತೆಯನ್ನು ನೀಗಿಸಲು ಆಗುತ್ತಿಲ್ಲ ಎಂದು ಎನ್‌ಜಿಒ ತಿಳಿಸಿದೆ.

'ಕದನ ವಿರಾಮ ಎನ್ನುವುದು ದೊಡ್ಡ ಸುಳ್ಳು. ಈ ಎಲ್ಲಾ ಕಷ್ಟಗಳ ನಡುವೆ ಮಕ್ಕಳನ್ನು ಸಂತೋಷವಾಗಿರಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ' ಎಂದು ₹ 4.38 ಲಕ್ಷ ಕೊಟ್ಟು ಕುರಿ ಖರೀದಿಸಿದ 59 ವರ್ಷದ ಅಬ್ದುಲ್ಲಾ ಅಲ್ ಮೊಸಾದರ್ ಹೇಳಿದರು.

ಇಷ್ಟು ಪ್ರಮಾಣದ ಹಣ ಖರ್ಚು ಮಾಡುವವರ ಸಂಖ್ಯೆ ಗಾಜಾದಲ್ಲಿ ಬೆರಳೆಣಿಕೆಯಷ್ಟಿದೆ.

'ಇದು ಭಾರಿ ದುಬಾರಿ ಎನ್ನುವುದು ನನಗೆ ಗೊತ್ತಿದೆ. ಆದರೆ ಈ ಬಾರಿ ಬಲಿ ನೀಡಲು ನಾನು ನಿರ್ಧರಿಸಿದೆ' ಎಂದು ಮೊಸಾದರ್ ಹೇಳಿದರು. ಈ ಹಿಂದೆ ಅವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಎಲ್ಲವೂ ಸರಿಯಾದರೆ ಮತ್ತೆ ಉದ್ಯಮ ಪ್ರಾರಂಭಿಸುವ ನಿರೀಕ್ಷೆಯಲ್ಲಿ ಅವರಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries