HEALTH TIPS

ಗಬ್ಬದ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಾಟ-ದೂರು

ಕಾಸರಗೋಡು: ಮಲ್ಲ ನಿವಾಸಿ ಎಂ. ವಿಜಯಲಕ್ಷ್ಮಿ ಎಂಬವರ ಮನೆ ಸನಿಹದ ಹಟ್ಟಿಯಲ್ಲಿ ಬಿಗಿಯಲಾಗಿದ್ದ ಗಬ್ಬದ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಿಸರುವ ಬಗ್ಗೆ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೋಮವಾರ ನಸುಕಿಗೆ ಕಾರಿನಲ್ಲಿ ತಲುಪಿದ ಇಬ್ಬರು ಹಸುವನ್ನು ಕಳವುಗೈದಿರುವುದಾಗಿ ಆರೋಪಿಸಲಾಗಿದೆ. ಕಾರಿನ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಕಾರಿನ ನಂಬ್ರಪ್ಲೇಟ್ ನಕಲಿಯಾಗಿದ್ದು, ಇದರಿಂದ ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ತನಿಖೆ ಮುಂದುವರಿಯುತ್ತಿದೆಯೆಂದು ಆದೂರು ಠಾಣೆ ಪೆÇಲೀಸರು ತಿಳಿಸಿದ್ದಾರೆ.  ವಿಜಯಲಕ್ಷ್ಮಿ ಹಸು ಸಾಕಿ ಲಭಿಸುವ ಅಲ್ಪ ಆದಾಯದಿಂದ ಪುತ್ರಿ ಸಹಿತ ಕುಟುಂಬದ ಜೀವನ ಸಾಗಿಸುತ್ತಿದ್ದು,  ಹಸು ಕಳವಾಗಿರುವುದರಿಂದ ಕುಟುಂಬ ಕಂಗಾಲಾಗಿದೆ. 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries