ಉಪ್ಪಳ: ಎಂಡಿಎಂಎ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಬಳಿಯ ಬಿಸ್ಮಿಲ್ಲಾ ಮಂಜಿಲ್ನ ಮೊಹಮ್ಮದ್ ಸಮೀರ್ (30) ಎಂಬಾತನನ್ನು ಮಂಜೇಶ್ವರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಈತನ ವಶದಲ್ಲಿದ್ದ 5.080 ಗ್ರಾಂ ಎಂಡಿಎಂಎ ಹಾಗೂ 55,860 ರೂ. ನಗದು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಎಸ್.ಐ ವೈಷ್ಣವ್ ನೇತೃತ್ವದ ಪೆÇಲೀಸರ ತಂಡ ಬಪ್ಪಾಯಿತೊಟ್ಟಿಯಲ್ಲಿ ಕಾರ್ಯಾಚರಣೆ ನಡೆಸಿದೆ. ಈತನ ವಿರುದ್ಧ ಕಾಸರಗೋಡು ನಗರ ಠಾಣೆ ಹಾಗೂ ವಿದ್ಯಾನಗರ ಠಾಣೆಯಲ್ಲಿ ಎಂಡಿಎಂಎ ಸಾಗಾಟ ಪ್ರಕರಣಕಕೆ ಸಂಬಂಧಿಸಿ ಕೇಸುಗಳಿರುವುದಾಗಿ ಪೋಲೀಸರು ತಿಳಿಸಿದ್ದಾರೆ.


