HEALTH TIPS

ಹಂಟಾವೈರಸ್‌ ಮೇಲ್ವಿಚಾರಣೆ: ವಿಶ್ವ ಆರೋಗ್ಯ ಸಂಸ್ಥೆ

 ಟೆನೆರೈಫ್‌  (AP): ಹಂಟಾವೈರಸ್‌ ಪೀಡಿತ ಐಷಾರಾಮಿ ಹಡಗಿನಿಂದ 140ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥರು ಸ್ಪೇನ್‌ಗೆ ಶನಿವಾರ ಆಗಮಿಸಿದ್ದಾರೆ.


ಅರ್ಜೆಂಟೀನಾದಿಂದ ಏ.1ರಂದು ಪ್ರವಾಸ ಆರಂಭಿಸಿರುವ 'ಎಂವಿ ಹೊಂಡಿಯಸ್' ಐಷಾರಾಮಿ ವಿಹಾರ ನೌಕೆಯು ಅಂಟಾರ್ಕ್ಟಿಕಾ ಮತ್ತು ದಕ್ಷಿಣ ಅಂಟ್ಲಾಂಟಿಕ್‌ನ ದ್ವೀಪಗಳಲ್ಲಿ ವಾರಗಳ ಕಾಲ ವಿಹರಿಸಿದ್ದು, ಮೇ 10ರ ಭಾನುವಾರ ಮುಂಜಾನೆ ಸ್ಪೇನ್‌ನ ದ್ವೀಪಕ್ಕೆ ತಲುಪುವ ನಿರೀಕ್ಷೆಯಿದೆ.

ಪಶ್ಚಿಮ ಆಫ್ರಿಕಾದ ಕರಾವಳಿಯಲ್ಲಿರುವ ಸ್ಪೇನ್‌ನ ದ್ವೀಪವಾದ ಟೆನೆರೈಫ್‌ಗೆ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಭೇಟಿ ನೀಡಲಿದ್ದಾರೆ. ಹಂಟಾವೈರಸ್‌ ಪೀಡಿತ ಐಷಾರಾಮಿ ನೌಕೆಯಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷಿತ ಸ್ಥಳಾಂತರದ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಸ್ಪೇನ್‌ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಹಡಗಿನಲ್ಲಿರುವವರಲ್ಲಿ ವೈರಸ್‌ನ ಲಕ್ಷಣ ಕಂಡುಬಂದಿಲ್ಲ. ಡಬ್ಲ್ಯುಎಚ್‌ಒ ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ ಎಂದು ಅಧಾನೊಮ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

'ಅಮೆರಿಕ, ಬ್ರಿಟನ್‌ ತಮ್ಮ ನಾಗರಿಕರನ್ನು ಸ್ಥಳಾಂತರಿಸಲು ವಿಮಾನ ಕಳುಹಿಸಿಕೊಡಲು ಒಪ್ಪಿಕೊಂಡಿವೆ. ಪ್ರಯಾಣಿಕರು ಹಾಗೂ ಸಿಬ್ಬಂದಿಯು ಹಡಗಿನಿಂದ ಇಳಿದ ತಕ್ಷಣವೇ, ಎಲ್ಲರನ್ನೂ ಪ್ರತ್ಯೇಕವಾಗಿಡಲಾಗುವುದು' ಎಂದು ಸ್ಪೇನ್‌ನ ತುರ್ತು ಸೇವೆಗಳ ಮುಖ್ಯಸ್ಥ ವರ್ಜೀನಿಯಾ ಬಾರ್ಕೋನ್ಸ್‌ ತಿಳಿಸಿದ್ದಾರೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries