ಮಾಸ್ಕೊ (ಎಪಿ): ಎರಡನೇ ಮಹಾಯುದ್ಧದಲ್ಲಿ ಜರ್ಮನಿ ವಿರುದ್ಧ ಜಯ ಸಾಧಿಸಿದ 81ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪರೇಡ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾಗಿಯಾಗಿದ್ದರು.
'ನ್ಯಾಟೊದ ಸಂಪೂರ್ಣ ಬೆಂಬಲವನ್ನು ಪಡೆದಿರುವ ನಮ್ಮ ಪಡೆಗಳು ಆಕ್ರಮಣಕಾರಿ ಶಕ್ತಿಯೊಂದಿಗೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡುತ್ತಿವೆ.
ಗೆಲುವು ಎಂದಿಗೂ ನಮ್ಮದಾಗಿರುತ್ತದೆ' ಎಂದು ಪುಟಿನ್ ಅವರು ಪರೇಡ್ ಭಾಷಣದಲ್ಲಿ ಹೇಳಿದರು.

