HEALTH TIPS

ಚೀನಾಗೆ ಭೇಟಿ ನೀಡಲಿರುವ ಟ್ರಂಪ್ ಅವರ ಟೆಕ್ ತಂಡದಲ್ಲಿ ಮಸ್ಕ್, ಕುಕ್

 ವಾಷಿಂಗ್ಟನ್: ಚೀನಾ ಪ್ರವಾಸ ಕೈಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವಾಣಿಜ್ಯ ಹಾಗೂ ತಂತ್ರಜ್ಞಾನ ಪ್ರತಿನಿಧಿಗಳನ್ನು ಒಳಗೊಂಡ ಮಹತ್ತರವಾದ ತಂಡವೇ ಪ್ರಯಾಣ ಬೆಳೆಸಲಿದೆ ಎಂದು ಶ್ವೇತಭವನ ತಿಳಿಸಿದೆ.


ಈ ತಂಡವು ವಾಣಿಜ್ಯ, ತಂತ್ರಜ್ಞಾನ, ಹಣಕಾಸು, ರಕ್ಷಣಾ ಹಾಗೂ ಗ್ರಾಹಕ ವಲಯಗಳಲ್ಲಿನ ಪ್ರಮುಖ ಕಂಪನಿಗಳ ನಾಯಕರನ್ನು ಒಳಗೊಂಡಿರಲಿದೆ.

ಟ್ರಂಪ್ ಅವರ ತಂಡದಲ್ಲಿ ಆಯಪಲ್ ಸಿಇಒ ಟಿಮ್ ಕುಕ್, ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್ ಸಿಇಒ ಇಲಾನ್ ಮಸ್ಕ್, ಬ್ಲ್ಯಾಕ್‌ರಾಕ್ ಸಿಇಒ ಲ್ಯಾರಿ ಫಿಂಕ್, ಬ್ಲ್ಯಾಕ್‌ಸ್ಟೋನ್ ಸಿಇಒ ಸ್ಟಿಫನ್ ಶ್ವಾರ್ಜ್‌ಮನ್, ಬೋಯಿಂಗ್ ಸಿಇಒ ಕೆಲ್ಲಿ ಆರ್ಟ್‌ಬರ್ಗ್ ಸೇರಿದಂತೆ ಪ್ರಮುಖರು ಸೇರಿದ್ದಾರೆ.

ತಂತ್ರಜ್ಞಾನ, ಹಣಕಾಸು, ಏರೋಸ್ಪೇಸ್ ಸೇರಿದಂತೆ ಜಗತ್ತಿನ ಪ್ರಮುಖ ವಲಯಗಳಲ್ಲಿ ಪ್ರಭಾವಿ ನಾಯಕರನ್ನು ಒಳಗೊಂಡ ಪ್ರತಿನಿಧಿಗಳ ತಂಡವು ಚೀನಾಗೆ ಭೇಟಿ ಕೊಡಲಿದೆ.

ಟ್ರಂಪ್ ಅವರ ಭೇಟಿ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ವಿಶ್ವದ ಎರಡು ಪ್ರಮುಖ ಆರ್ಥಿಕ ರಾಷ್ಟ್ರಗಳು ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries