ನವದೆಹಲಿ: ಅರಬಿ ಸಮುದ್ರದಲ್ಲಿ ಸಿಲುಕಿದ್ದ ಎಂ.ವಿ.ಗೌತಮ್ ಹೆಸರಿನ ಭಾರತೀಯ ಹಡಗಿಗೆ ಪಾಕಿಸ್ತಾನದ ನೌಕಾಪಡೆಯು ಮಾನವೀಯ ನೆರವು ಒದಗಿಸಿದೆ ಎಂದು indianexpress.com ವರದಿ ಮಾಡಿದೆ.
ಎಂ.ವಿ.ಗೌತಮ್ ಕಡಲಾಚೆಯ ಟಗ್ ಆಯಂಡ್ ಸಪ್ಲೈ(ಇತರ ಹಡಗುಗಳನ್ನು ಎಳೆದೊಯ್ಯುವ ಮತ್ತು ಅಗತ್ಯ ಸಾಮಗ್ರಿಗಳನ್ನು ಪೂರೈಸುವ) ಹಡಗು ಆಗಿದ್ದು, ಒಮಾನ್‌ನಿಂದ ಭಾರತಕ್ಕೆ ಆಗಮಿಸುತ್ತಿದ್ದಾಗ ತಾಂತ್ರಿಕ ದೋಷದಿಂದಾಗಿ ಸಮುದ್ರದಲ್ಲಿ ಬಾಕಿಯಾಗಿತ್ತು.
ಆರು ಭಾರತೀಯರು ಮತ್ತು ಓರ್ವ ಇಂಡೋನೇಷ್ಯಾ ಪ್ರಜೆ ಸೇರಿದಂತೆ ಏಳು ಸಿಬ್ಬಂದಿಗಳು ಹಡಗಿನಲ್ಲಿದ್ದರು.
ಮುಂಬೈನ ಕಡಲ ರಕ್ಷಣಾ ಸಮನ್ವಯ ಕೇಂದ್ರವು ನೆರವು ಕೋರಿ ಪಾಕ್ ಅಧಿಕಾರಿಗಳನ್ನು ಸಂಪರ್ಕಿಸಿದ ಬಳಿಕ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿತ್ತು.
ಪಾಕ್ ನೌಕಾಪಡೆಯು ಹಡಗಿನಲ್ಲಿದ್ದ ಸಿಬ್ಬಂದಿಗಳಿಗೆ ಆಹಾರ,ವೈದ್ಯಕೀಯ ನೆರವು ಮತ್ತು ತಾಂತ್ರಿಕ ನೆರವು ಸೇರಿದಂತೆ ತುರ್ತು ಅಗತ್ಯಗಳನ್ನು ಒದಗಿಸಿದೆ ಎಂದು ಮೂಲಗಳು ತಿಳಿಸಿವೆ.

