HEALTH TIPS

ಬಾಲಕಿಗೆ ವಿಷ ಕುಡಿಸಿ ಆತ್ಮಹತ್ಯೆಗೆ ಯತ್ನ-ಆರೋಪಿಗೆ ನ್ಯಾಯಾಂಗ ಬಂಧನ

ಬದಿಯಡ್ಕ


: ಹತ್ತರ ಹರೆಯದ ಬಾಲಕಿಗೆ ಫಿನಾಯಿಲ್ ಕುಡಿಸಿ ಬಳಿಕ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬದಿಯಡ್ಕ ಪೆÇಲೀಸರು ಬಂಧಿಸಿದ್ದಾರೆ. ನರಹತ್ಯಾಯತ್ನ ಹಾಗೂ ಪೆÇೀಕ್ಸೋ ಪ್ರಕಾರ ದಾಖಲಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ 28ರ ಹರೆಯದ ಯವಕ ಬಂಧಿತ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.   

ಆರೋಪಿ ಯುವಕ ಬಾಲಕಿಯ ತಂದೆಯ ಸಮೀಪ ಸಂಬಂಧಿಯಾಗಿದ್ದು, ಬಾಲಕಿಯ ಮನೆಗೆ ಆಗಾಗ ಭೇಟಿನೀಡುತ್ತಿದ್ದನು. ಆದರೆ ಯುವಕನ ನಡತೆಯನ್ನು ಬಾಲಕಿ ತಂದೆ ವಿರೋಧಿಸುತ್ತಿದ್ದನು.  ಈ ಸಿಟ್ಟಿನಲ್ಲಿ   ಬಾಲಕಿಗೆ ಪಿನಾಯಿಲ್ ಕುಡಿಸಿದ ಬಳಿಕ ಅದನ್ನು ತಾನೂ ಕುಡಿದು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದನು. ಆದರೆ ಬಾಲಕಿಯ ಹೊಟ್ಟೆಗೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರವೇ ಪಿನಾಯಿಲ್ ಸೇರಿದ್ದು, ಇದರಿಂದ ಬಾಲಕಿ ಅಪಾಯದಿಂದ ಪಾರಾಗಿರುವುದಾಗಿ ಮಾಹಿತಿಯಿದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ತಕ್ಷಣ ಯುವಕನನ್ನು ಬದಿಯಡ್ಕ ಪೆÇಲೀಸ್ ಇನ್‍ಸ್ಪೆಕ್ಟರ್ ಪಿ. ಅನೂಪ್‍ಕೃಷ್ಣ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries