HEALTH TIPS

ವೇದ, ಮಂತ್ರ ಘೋಷಗಳೊಂದಿಗೆ ಅಧಿಕಾರವಹಿಸಿಕೊಂಡ ತೆಲಂಗಾಣದ ‌ನೂತನ ಡಿಜಿಪಿ!

ಅಮರಾವತಿ: ರಾಜಕಾರಣಿಗಳು ಸಚಿವರಾಗಿ ಅಥವಾ ಉನ್ನತ ಅಧಿಕಾರ ಸಿಕ್ಕಾಗ ಅವರು ತಮ್ಮ ಕಚೇರಿಗಳನ್ನು ಪ್ರವೇಶ ಮಾಡುವ ಸಮಯದಲ್ಲಿ ತಮ್ಮ ಧಾರ್ಮಿಕ ನಂಬಿಕೆಗಳಂತೆ ಪೂಜೆ ಇತ್ಯಾದಿ ಮಾಡುವುದನ್ನು ಅಗಾಗ ನೋಡುತ್ತೇವೆ.

ಆದರೆ, ಈ ವಿಚಾರದಲ್ಲಿ ತೆಲಂಗಾಣದಲ್ಲಿ ರಾಜಕಾರಣಿಗಳನ್ನೂ‌ ಮೀರಿಸುವಂತೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ನಡೆದುಕೊಂಡು ಸುದ್ದಿಯಾಗಿದ್ದಾರೆ.

ನಿನ್ನೆ ತೆಲಂಗಾಣದ ನೂತನ ಡಿಜಿಪಿಯಾಗಿ ಹಿರಿಯ ಪೊಲೀಸ್ ಅಧಿಕಾರಿ (IPS 1995 ನೇ ಬ್ಯಾಚ್) ಸಿ.ವಿ. ಆನಂದ್ ಅವರು ಅಧಿಕಾರ ವಹಿಸಿಕೊಂಡರು.

ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬದವರ ಜೊತೆ ಡಿಜಿಪಿ ಕಚೇರಿ ಪ್ರವೇಶ ಮಾಡಿದ ಸಿ.ವಿ‌. ಆನಂದ್, ಕುಂಬಳಕಾಯಿ ಒಡೆದು ಬಾಗಿಲು ಪೂಜೆ ಮಾಡಿದ್ದಾರೆ. ಬಳಿಕ ಇಬ್ಬರು ಪುರೋಹಿತರಿಂದ ಡಿಜಿಪಿ ಕುರ್ಚಿಗೆ ಪೂಜೆ ಮಾಡಿಸಿ ಮಂತ್ರ ಘೋಷಗಳನ್ನು ಮೊಳಗಿಸಿ ಅಧಿಕಾರ ಸ್ವೀಕರಿಸಿದರು. ಇದಕ್ಕೆ ಸಂಬಂಧಿಸಿದ ಫೋಟೊ ವಿಡಿಯೊ ಹರಿದಾಡುತ್ತಿವೆ.

ಡಿಜಿಪಿ ಅವರ ನಡೆ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವಾಗ ಅಧಿಕಾರಿಗಳೇ ಹೀಗೆ ಸಾರ್ವಜನಿಕ ಕಚೇರಿಗಳನ್ನು ತಮ್ಮಿಷ್ಟದಂತೆ ಬಳಸಿಕೊಂಡರೆ ಹೇಗೆ? ಇದಕ್ಕೆ ಕಡಿವಾಣ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮೂಲತಃ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯವರಾದ ಸಿ.ವಿ. ಆನಂದ್ 31 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಈಗ ಉನ್ನತ ಹುದ್ದೆಗೆ ಏರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries