ನವದೆಹಲಿ: ಅತ್ಯಾಧುನಿಕ ಅಗ್ನಿ ಕ್ಷಿಪಣಿಯ ಉಡ್ಡಯನ ಪರೀಕ್ಷೆಯಲ್ಲಿ ಭಾರತ ಯಶಸ್ವಿಯಾಗಿದೆ. ಒಡಿಶಾದ ಕರಾವಳಿಯಲ್ಲಿ ಶುಕ್ರವಾರ ಈ ಪರೀಕ್ಷೆ ನಡೆಸಲಾಗಿತ್ತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಒಂದೇ ಕ್ಷಿಪಣಿ ಮೂಲಕ ವಿವಿಧ ಗುರಿಗಳ ಮೇಲೆ ದಾಳಿ ನಡೆಸಬಲ್ಲ ಹಲವು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅತ್ಯಾಧುನಿಕ ಕ್ಷಿಪಣಿ ವಾಹಕ ತಂತ್ರಜ್ಞಾನವನ್ನು (ಎಂಐಆರ್ವಿ) ಈ ಅಗ್ನಿ ಕ್ಷಿಪಣಿಯು ಒಳಗೊಂಡಿದೆ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ವಿವಿಧ ಗುರಿಗಳನ್ನು ನಿಗದಿಪಡಿಸಿ, ಹಲವು ಪೇಲೋಡ್ಗಳನ್ನು ಬಳಸಿ ಈ ಪರೀಕ್ಷೆ ನಡೆಸಲಾಗಿದೆ.

