HEALTH TIPS

Laos | ಜಲಾವೃತ ಗುಹೆಯಲ್ಲಿ ಸಿಕ್ಕಿಬಿದ್ದವರ ರಕ್ಷಣಾ ಕಾರ್ಯ ಚುರುಕು

ವಿಯೆಂಟೈನ್: ಲಾವೋಸ್‍ನಲ್ಲಿ ಪ್ರವಾಹದ ನೀರಿನಿಂದ ಜಲಾವೃತಗೊಂಡಿರುವ ಗುಹೆಯಲ್ಲಿ ಕಳೆದ ಒಂದು ವಾರದಿಂದ ಸಿಕ್ಕಿಬಿದ್ದಿರುವ ಏಳು ಮಂದಿಯಲ್ಲಿ ಐವರು ಜೀವಂತವಾಗಿರುವುದು ದೃಢಪಟ್ಟಿದೆ. ಉಳಿದ ಇಬ್ಬರ ಪತ್ತೆಯಾಗಿಲ್ಲ ಎಂದು ರಕ್ಷಣಾ ತಂಡದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕ್ಸೈಸೊಂಬೌನ್ ಪ್ರಾಂತದ ಗುಹೆಯನ್ನು ಮೇ 19ರಂದು ಗ್ರಾಮಸ್ಥರು ಪ್ರವೇಶಿಸಿದ್ದರು. ಆದರೆ ನಿರಂತರ ಸುರಿದ ಧಾರಾಕಾರ ಮಳೆಯಿಂದ ಗುಹೆಯೊಳಗೆ ನೀರು ನುಗ್ಗಿ, ಗುಹೆಯ ದ್ವಾರ ನೀರಿನಡಿ ಮುಳುಗಿತ್ತು. ಬಳಿಕ ಮುಳುಗು ತಜ್ಞರ ನೆರವಿನೊಂದಿಗೆ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ, ಗುಹೆಯೊಳಗಿನ ಜಲಾವೃತ ಕಲ್ಲಿನ ಮೇಲೆ ಐವರು ಕುಳಿತಿರುವುದು ಪತ್ತೆಯಾಗಿದೆ. ಉಳಿದ ಇಬ್ಬರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಐವರನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳುವ ಕಾರ್ಯಾಚರಣೆ ಚುರುಕುಗೊಂಡಿದೆ ಎಂದು ರಕ್ಷಣಾ ತಂಡವನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries