HEALTH TIPS

ಮೋದಿ ಅಭಿನಂದಿಸಿದ ಟ್ರಂ‌ಪ್: US ಅಧ್ಯಕ್ಷರಿಗೆ ಬಹಿರಂಗ ಪತ್ರ ಬರೆದ ಸಂಜಯ್ ರಾವುತ್

 ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಪಡೆದಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದರು.


ಇದನ್ನು ಆಕ್ಷೇಪಿಸಿ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಟ್ರಂಪ್‌ಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 'ಪ್ರೀತಿಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೆ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆದ್ದಿದ್ದಕ್ಕೆ ಮೋದಿಯವರಿಗೆ ಶುಭಹಾರೈಸಿದ ಬಗ್ಗೆ ಭಾರತದ ಸಂಸತ್ತಿನ ಸದಸ್ಯನಾಗಿ ಈ ಪ್ರತಿಕ್ರಿಯೆಯನ್ನು ನೀಡುತ್ತಿದ್ದೇನೆ.

ಇದು ಭಾರತದ ಒಕ್ಕೂಟ ವ್ಯವಸ್ಥೆಯ ಆಂತರಿಕ ವಿಷಯ. ಯಾವುದೇ ಬಾಹ್ಯ ಬೆಂಬಲ ಅಥವಾ ಅನುಮೋದನೆಯು ಅಕಾಲಿಕ ಮತ್ತು ಅಪ್ರಸ್ತುತವಾಗಿ ಕಾಣುತ್ತದೆ. ಮುಖ್ಯವಾಗಿ, ಗಂಭೀರ ಕಳವಳಗಳಿಗೆ ಕಾರಣವಾಗಿದೆ. ಭಯ, ಬೆದರಿಕೆ ಮತ್ತು ವ್ಯವಸ್ಥಿತ ಒತ್ತಡದ ವಾತಾವರಣವಿದೆ ಎಂಬ ಆರೋಪಗಳಿವೆ. ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿಲ್ಲ ಮತ್ತು ಅದರ ಕಾರ್ಯವೈಖರಿಯು ಬಿಜೆಪಿಗೆ ಅನುಕೂಲಕರವಾಗಿರುವಂತೆ ಕಂಡುಬರುತ್ತಿದೆ ಎಂಬ ಅಭಿಪ್ರಾಯಗಳಿವೆ, ಇದು ಸಾಂಸ್ಥಿಕ ತಟಸ್ಥತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದೆ' ಎಂದಿದ್ದಾರೆ.

'ಮಮತಾ ಬ್ಯಾನರ್ಜಿ ಸೇರಿದಂತೆ ಹಿರಿಯ ನಾಯಕರು ನ್ಯಾಯಸಮ್ಮತ ಚುನಾವಣೆ ಬಗ್ಗೆಯೇ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅಸಾಮಾಧನಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ' ಎಂದೂ ಬರೆದುಕೊಂಡಿದ್ದಾರೆ.

'ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಗಳಲ್ಲ. ಸ್ವತಂತ್ರ, ನ್ಯಾಯಯುತ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶ. ಗಂಭೀರ ಆರೋಪಗಳು ಉದ್ಭವಿಸಿದಾಗ, ಅವುಗಳನ್ನು ಪರಿಶೀಲಿಸುವುದು ಕಡ್ಡಾಯ, ಅದು ಆಚರಣೆಯಲ್ಲ. ನಿಮ್ಮ ಹೇಳಿಕೆಗೂ ಮುನ್ನ ಈ ಕಳವಳಗಳನ್ನು ಪರಿಗಣಿಸಲಾಗಿದೆಯೇ' ಎಂದು ಟ್ರಂಪ್‌ ಅವರನ್ನು ಪ್ರಶ್ನಿಸಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries