ಹಣ ಪಾವತಿಸಿ ಚಂದಾದಾರಿಕೆ ಪಡೆಯುವ ʼಫೇಸ್ಬುಕ್ ಪ್ಲಸ್ʼ, ʼಇನ್ಸ್ಟಾಗ್ರಾಂ ಪ್ಲಸ್ʼ ಮತ್ತು ʼವಾಟ್ಸಪ್ ಪ್ಲಸ್ʼ ಅನ್ನು ಜಾಗತಿಕವಾಗಿ ತರುತ್ತಿರುವುದಾಗಿ ಘೋಷಿಸಿದೆ.
ಮೆಟಾ ಬುಧವಾರ ತನ್ನ ಪ್ರಮುಖ ಅಪ್ಲಿಕೇಶನ್ಗಳಿಗೆ ಹಣ ಪಾವತಿಸಿ ಚಂದಾದಾರಿಕೆ ಪಡೆಯುವ (paid subscription) ಯೋಜನೆಗಳನ್ನು ಬಿಡುಗಡೆ ಮಾಡಿದೆ.
ಮೆಟಾ ದೀರ್ಘಕಾಲದ ಜಾಹೀರಾತಿನ ಮೇಲಿನ ಅವಲಂಬನೆ ಮೀರಿ ತನ್ನ ವೇದಿಕೆಗಳನ್ನು ವೈವಿಧ್ಯಗೊಳಿಸಲು ನಿರ್ಧರಿಸಿರುವಂತೆ ತೋರುತ್ತದೆ.
ಮೆಟಾ ಉತ್ಪನ್ನದ ಮುಖ್ಯಸ್ಥೆ ನವೋಮಿ ಗ್ಲೀಟ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ, "ಫೇಸ್ಬುಕ್ ಪ್ಲಸ್, ಇನ್ಸ್ಟಾಗ್ರಾಂ ಪ್ಲಸ್ ಮತ್ತು ವಾಟ್ಸಪ್ ಪ್ಲಸ್ ಅನ್ನು ಜಾಗತಿಕವಾಗಿ ತರುತ್ತಿರುವುದಾಗಿ ಘೋಷಿಸಿದೆ. ಉದ್ಯಮಿಗಳು, ವೀಡಿಯೋ ಸೃಷ್ಟಿಮಾಡುವವರು ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಉತ್ಪನ್ನಗಳಿಗೆ ಇನ್ನಷ್ಟು ಯೋಜನೆಗಳನ್ನು ಸಜ್ಜು ಮಾಡುತ್ತಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.
ಮೆಟಾ ತನ್ನ AI ವೆಚ್ಚಗಳಿಗೆ ವ್ಯಾಪಕ ಪ್ರಮಾಣದಲ್ಲಿ ಹಣ ವ್ಯಯಿಸುತ್ತಿರುವ ಕುರಿತಾಗಿ ಹೂಡಿಕೆದಾರರು ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಂಪನಿ ಈ ನಿರ್ಧಾರ ಕೈಗೊಂಡಿದೆ. ಕಂಪನಿ ಂI ಕ್ಷೇತ್ರದಲ್ಲಿ ವಾರ್ಷಿಕ 125 ಶತಕೋಟಿ ಡಾಲರ್ನಿಂದ 145 ಶತಕೋಟಿ ಡಾಲರ್ ನಡುವೆ ಬಂಡವಾಳ ವೆಚ್ಚವನ್ನು ಯೋಜಿಸಿದೆ. ಇದರಲ್ಲಿ ಬಹುಪಾಲು ಂI ಡೇಟಾ ಕೇಂದ್ರಗಳಿಗೆ ಹೋಗಲಿದೆ.
ಈ ಸುದ್ದಿಯ ನಂತರ ಮೆಟಾದ ಷೇರು ಬೆಲೆ ಸುಮಾರು ಮೂರು ಪ್ರತಿಶದಷ್ಟು ಏರಿಕೆಯಾಗಿದೆ. ವರದಿಗಳ ಪ್ರಕಾರ, ಇನ್ಸ್ಟಾಗ್ರಾಂ ಪ್ಲಸ್ ಮತ್ತು ಫೇಸ್ಬುಕ್ ಪ್ಲಸ್ ತಿಂಗಳಿಗೆ 3.99 ಡಾಲರ್ ಬೆಲೆಗೆ ಲಭ್ಯವಿದ್ದರೆ, ವಾಟ್ಸ್ಆಯಪ್ ಪ್ಲಸ್ ತಿಂಗಳಿಗೆ 2.99 ಡಾಲರ್ ಬೆಲೆಗೆ ಲಭ್ಯವಿರುತ್ತದೆ.
ಇನ್ಸ್ಟಾಗ್ರಾಂ ಪ್ಲಸ್ ಮತ್ತು ಫೇಸ್ಬುಕ್ ಪ್ಲಸ್ ಮೂಲಕ ಉತ್ತಮ ವಿಶ್ಲೇಷಣೆ, ಪೋಸ್ಟ್ಗಳನ್ನು ಮರಳಿ ನೋಡುವಂತಹ ಅಲ್ಗಾರಿದಂ, ಹೆಚ್ಚು ಪ್ರೇಕ್ಷಕರನ್ನು ತಲುಪುವುದು ಮತ್ತು ಪ್ರೊಫೈಲ್ ಕಸ್ಟಮೈಸೇಶನ್ ಆಯ್ಕೆಗಳನ್ನು ಒಳಗೊಂಡಂತೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಅನ್ಲಾಕ್ ಮಾಡಿದೆ.
ವಾಟ್ಸ್ಆಯಪ್ ಪ್ಲಸ್ ಮೂಲಕ ಪ್ರೀಮಿಯಂ ಸ್ಟಿಕರ್ಗಳು, ಕಸ್ಟಂ ರಿಂಗ್ಟೋನ್ಗಳು ಮತ್ತು ಅಪ್ಲಿಕೇಶನ್ ಥೀಮ್ಗಳನ್ನು ನೀಡಲಿದ್ದು, ಪ್ರತಿಯೊಬ್ಬರೂ ತಮಗೆ ಇಷ್ಟವಾದಂತೆ ಬಳಸುವ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಿದೆ. ಕಂಪನಿಯು ಅಂತಿಮವಾಗಿ ಮೆಟಾ ಒನ್ ಎಂಬ ಒಂದೇ ಬ್ರ್ಯಾಂಡ್ ಅಡಿಯಲ್ಲಿ ತನ್ನ ವಿವಿಧ ಕೊಡುಗೆಗಳನ್ನು ಕ್ರೋಢೀಕರಿಸಲು ಉದ್ದೇಶಿಸಿದೆ.
2023ರಲ್ಲಿ ಯುರೋಪ್ನ ಡೇಟಾ ಗೌಪ್ಯತೆ ಶಾಸನವನ್ನು ಅನುಸರಿಸಲು ಯುರೋಪ್ನಲ್ಲಿ ಮೆಟಾ ಕಂಪನಿಯು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂಗಳ ಜಾಹೀರಾತು ಮುಕ್ತ, ಹಣ ಪಾವತಿಸಿದ ಆವೃತ್ತಿಗಳನ್ನು ಬಿಡುಗಡೆ ಮಾಡಿತ್ತು. ಹೀಗಾಗಿ ಬಳಕೆದಾರರಿಗೆ ಉಚಿತ, ಜಾಹೀರಾತುಯುಕ್ತ ಮತ್ತು ಪಾವತಿಸಿದ ಜಾಹೀರಾತು ಮುಕ್ತ ಅನುಭವದ ನಡುವೆ ಆಯ್ಕೆ ಮಾಡಬಹುದಾಗಿತ್ತು.

