HEALTH TIPS

190ಕ್ಕೆ ಏರಿದ ಭಾರತದ ಪರಮಾಣು ಸಿಡಿತಲೆ ಸಂಗ್ರಹ; ಪಾಕಿಸ್ತಾನ, ಇಸ್ರೇಲ್‌ ಮತ್ತು ಉತ್ತರ ಕೊರಿಯಾ ಮೀರಿಸಿದ ತಾಕತ್ತು!

ನವದೆಹಲಿ: ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ಇಯರ್‌ಬುಕ್ 202 ರಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತವು ತನ್ನ ಪರಮಾಣು ಶಸ್ತ್ರಾಗಾರವನ್ನು ಸುಮಾರು 190 ಸಿಡಿತಲೆಗಳಿಗೆ ವಿಸ್ತರಿಸಿದೆ. ಇದು ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್ ದೇಶಗಳ ಬಳಿ ಇರುವ ಪರಮಾಣು ಸಿಡಿತಲೆಗಳ ಸಂಖ್ಯೆಗಿಂತ ಹೆಚ್ಚಾಗಿದೆ.
SIPRI ಪ್ರಕಾರ, ಬ್ಯಾಲಿಸ್ಟಿಕ್ ಕ್ಷಿಪಣಿಗಳಂತಹ ವಿತರಣಾ ವ್ಯವಸ್ಥೆಗಳಿಂದ ಪ್ರತ್ಯೇಕವಾಗಿ ಸಿಡಿತಲೆಗಳನ್ನು ಸಂಗ್ರಹಿಸುವ ದೀರ್ಘಕಾಲದ ಅಭ್ಯಾಸವನ್ನು ಮುರಿದು, ಭಾರತ ಮೊದಲ ಬಾರಿಗೆ 12 ಪರಮಾಣು ಸಿಡಿತಲೆಗಳ ನಿಯೋಜನೆ ಮಾಡಿದೆ. ಪ್ರಸ್ತುತ ಭಾರತವು 12 ನಿಯೋಜಿತ ಪರಮಾಣು ಸಿಡಿತಲೆಗಳು ಮತ್ತು 178 ಸಂಗ್ರಹಿಸಿದ ಸಿಡಿತಲೆಗಳನ್ನು ಹೊಂದಿದ್ದು, ಈ ವರ್ಷದ ಜನವರಿಯ ವೇಳೆಗೆ ಒಟ್ಟು ದಾಸ್ತಾನು 190ಕ್ಕೆ ತಲುಪಿದೆ.

ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನ 170 ಪರಮಾಣು ಸಿಡಿತಲೆಗಳನ್ನು ಹೊಂದಿದ್ದರೆ, ಮತ್ತೊಂದು ನೆರೆ ರಾಷ್ಟ್ರ ಚೀನಾ ಬಳಿ ಬರೋಬ್ಬರಿ 620 ಪರಮಾಣು ಸಿಡಿತಲೆಗಳಿವೆ. ಆದಾಗ್ಯೂ, ಭಾರತ ಇತ್ತೀಚಿನ ವರ್ಷಗಳಲ್ಲಿ ತನ್ನ ಪರಮಾಣು ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿರುವುದು ಜಗತ್ತಿನ ಗಮನ ಸೆಳೆದಿದೆ.

ಇತರ ದೇಶಗಳ ಸಿಡಿತಲೆ ಸಾಮರ್ಥ್ಯ:

ವಿಶ್ವದ ಪರಮಾಣು ಶಸ್ತ್ರಾಗಾರವು ಒಂಬತ್ತು ದೇಶಗಳಲ್ಲಿ ಕೇಂದ್ರೀಕೃತವಾಗಿದೆ, ಅಮೆರಿಕ ಮತ್ತು ರಷ್ಯಾ ದೇಶಗಳ ಬಳಿ ವಿಶಾಲ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು ಇದೆ. ಇವರೆಡೂ ಒಟ್ಟಾಗಿ ವಿಶ್ವದ ಬಹುಪಾಲು ಪರಮಾಣು ಶಸ್ತ್ರಾಸ್ತ್ರಗಳನ್ನು ತಮ್ಮ ಬಳಿ ಇರಿಸಿಕೊಂಡಿವೆ. ರಷ್ಯಾ ಸುಮಾರು 5,420 ಪರಮಾಣು ಸಿಡಿತಲೆಗಳೊಂದಿಗೆ ಅತಿ ದೊಡ್ಡ ಪರಮಾಣು ದಾಸ್ತಾನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಅದರ ಮಿಲಿಟರಿ ದಾಸ್ತಾನು ಸುಮಾರು 4,400 ಸಿಡಿತಲೆಗಳು ಎಂದು ಊಹಿಸಲಾಗಿದೆ.

ಈ ಪೈಕಿ ಸುಮಾರು 1,796 ಪರಮಾಣು ಸಿಡಿತಲೆಗಳನ್ನು ರಷ್ಯಾ ನಿಯೋಜಿಸಿದೆ. ಅದೇ ರೀತಿ ಅಮೆರಿಕದ ಬಳಿ ಅಂದಾಜು 5,042 ಪರಮಾಣು ಸಿಡಿತಲೆಗಳಿದ್ದು, ಇದರಲ್ಲಿ 3,700 ಮಿಲಿಟರಿ ದಾಸ್ತಾನು ಮತ್ತು ಸುಮಾರು 1,770 ನಿಯೋಜಿತ ಶಸ್ತ್ರಾಸ್ತ್ರಗಳು ಸೇರಿವೆ.

ಇತರ ಪ್ರಮುಖ ಪರಮಾಣು ಶಕ್ತಿಗಳಲ್ಲಿ, ಫ್ರಾನ್ಸ್ ಸುಮಾರು 370 ಸಿಡಿತಲೆಗಳನ್ನು ಹೊಂದಿದೆ. ಅದರ ಮಿಲಿಟರಿ ದಾಸ್ತಾನು ಸುಮಾರು 290. ಇನ್ನು ಯುನೈಟೆಡ್ ಕಿಂಗ್‌ಡಮ್ ಅಂದಾಜು 225 ಪರಮಾಣು ಸಿಡಿತಲೆಗಳನ್ನು ಹೊಂದಿದೆ. ಇನ್ನು ಇಸ್ರೇಲ್ ಮತ್ತು ಉತ್ತರ ಕೊರಿಯಾ ದೇಶಗಳು ಸಣ್ಣ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಇಸ್ರೇಲ್ ಸುಮಾರು 90 ಸಿಡಿತಲೆಗಳನ್ನು ಹೊಂದಿದ್ದರೆ, ಉತ್ತರ ಕೊರಿಯಾ ಸುಮಾರು 60 ಸಿಡಿತಲೆಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.
ಒಟ್ಟಿನಲ್ಲಿ ಭಾರತ ತನ್ನ ಪರಮಾಣು ಸಿಡಿತಲೆ ಸಂಗ್ರಹವನ್ನು ವೃದ್ಧಿಸಿಕೊಂಡಿದ್ದು, ನೆರೆಯ ಪಾಕಿಸ್ತಾನಕ್ಕೆ ಕಂಟಕವಾಗಿ ಪರಿಣಮಿಸಿದೆ. ಆದರೆ ಚೀನಾಗೆ ಹೋಲಿಸಿದರೆ ಭಾರತದ ಸಾಮರ್ಥ್ಯ ಕಡಿಮೆ ಇದೆಯಾದರೂ, ಭೂಮಿ, ಸಾಗರ ಮತ್ತು ಆಕಾಶದಲ್ಲಿ ಯಾವುದೇ ಸಮಯದಲ್ಲಿ ಚೀನಾವನ್ನು ಎದುರಿಸುವ ಛಾತಿ ಮತ್ತು ಸಾಮರ್ಥ್ಯ ಭಾರತಕ್ಕಿದೆ ಎಂದು ಹೇಳಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries