ಯುದ್ಧದ ಭೀತಿಯಲ್ಲಿ ಸಿಲುಕಿದ್ದ 'ಎಂಟಿ ಜಲವೀರ್' ಹಡಗಿನ 20 ಭಾರತೀಯ ಸಿಬ್ಬಂದಿಯನ್ನು ಒಮಾನ್‌ನಲ್ಲಿರುವ ಭಾರತದ ರಾಯಭಾರಿ ಪ್ರಶಾಂತ್ ಪಿಸೆ ಅವರು ಮಸ್ಕತ್‌ನಲ್ಲಿ ಭೇಟಿಯಾಗಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಇರುವ ತೈಲ ಹಡಗುಗಳ ಮೇಲೆ ಜೂನ್11 ರಂದು ಅಮೆರಿಕ ದಾಳಿ ನಡೆಸಿತ್ತು.
ಈ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು. 20 ಭಾರತೀಯರನ್ನು ಒಮಾನ್ ನೌಕಾಪಡೆಯ ಸಹಾಯದೊಂದಿಗೆ ರಕ್ಷಿಸಲಾಗಿತ್ತು.
ಈ ಕುರಿತು ಪೋಸ್ಟ್ ಹಂಚಿಕೊಂಡ ಪ್ರಶಾಂತ್ ಪಿಸೆ, 'ಜೂನ್ 8 ರಂದು ಅಮೆರಿಕದ ಪಡೆಗಳು 24 ಭಾರತೀಯ ನಾವಿಕರಿದ್ದ 'ಎಂಟಿ ಮಾರಿವೆಕ್ಸ್' ತೈಲ ಟ್ಯಾಂಕರ್ ಹಡಗಿನ ಮೇಲೆ ದಾಳಿ ನಡೆಸಿತ್ತು. ಆ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಜೂನ್11 ರಂದು ಎಂಟಿ ಜಲವೀರ್' ಹಡಗಿನನ ಮೇಲೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯರು ಮೃತಪಟ್ಟಿದ್ದು, 20 ಭಾರತೀಯರನ್ನು ರಕ್ಷಿಸಲಾಗಿತ್ತು. ಬಳಿಕ ಓಮನ್ ಅಧಿಕಾರಿಗಳ ಸಹಾಯದಿಂದ ಆ ಸಿಬ್ಬಂದಿಯನ್ನ ಸುರಕ್ಷಿತವಾಗಿ ಸ್ಥಳಕ್ಕೆ ಕಳುಹಿಸಲಾಗಿತ್ತು. ಸಂಕಷ್ಟದಲ್ಲಿರುವ ನಾಗರಿಕರಿಗೆ ತಕ್ಷಣದ ನೆರವು, ಬೆಂಬಲ ನೀಡಲು ಹಾಗೂ ಅವರ ಸುರಕ್ಷಿತಕ್ಕಾಗಿ ಭಾರತೀಯ ರಾಯಭಾರ ಕಚೇರಿ ಯಾವಾಗಲೂ ಬದ್ಧವಾಗಿರುತ್ತದೆ. ಭಾರತೀಯರ ನೆರವಿಗೆ ಬಂದ ಒಮಾನ್ ಸರ್ಕಾರಕ್ಕೆ ಕೃತಜ್ಞತೆ ತಿಳಿಸುತ್ತೇವೆ' ಎಂದಿದ್ದಾರೆ.

