HEALTH TIPS

AI ಸೃಷ್ಟಿಯ ವೀಡಿಯೊ ಮೂಲಕ ಧಾರ್ಮಿಕ ಅವಹೇಳನ; ಚತ್ತೀಸ್‌ಗಡದಲ್ಲಿ ತೀವ್ರ ಪ್ರತಿಭಟನೆ

ರಾಯ್ಪುರ: ಧಾರ್ಮಿಕವಾಗಿ ಆಕ್ಷೇಪಾರ್ಹ ಹಾಗೂ ದಾರಿತಪ್ಪಿಸುವ ಕೃತಕ ಬುದ್ಧಿಮತ್ತೆ (ಎಐ) ಸೃಷ್ಟಿಯ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಚತ್ತೀಸ್‌ಗಡದ ರಾಜಧಾನಿ ರಾಯ್ಪುರದಲ್ಲಿ ವಿವಾದ ಭುಗಿಲೆದ್ದಿದೆ. 'ಫ್ರಂ ಹೆವನ್ ಟು ಆರ್ಥ್' ಶೀರ್ಷಿಕೆಯ ಫೇಸ್‌ಬುಕ್ ಪುಟವೊಂದರಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊಗಳು ವಿವಿಧ ಬಲಪಂಥೀಯ ಹಿಂದೂ ಸಂಘಟನೆಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

50ಕ್ಕೂ ಅಧಿಕ ವಿವಾದಿತ ಡೀಪ್‌ಫೇಕ್ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿವೆ. ಈ ವೀಡಿಯೊಗಳಲ್ಲಿ ಯೇಸುಕ್ರಿಸ್ತನು ಎಲ್ಲಾ ಹಿಂದೂ ದೇವತೆಗಳ ಪಿತನೆಂದು ಪ್ರತಿಪಾದಿಸಲಾಗಿದೆ. ಇನ್ನು ಕೆಲವು ವೀಡಿಯೊಗಳಲ್ಲಿ ಶ್ರೀರಾಮನು ಯೇಸುಕ್ರಿಸ್ತನಿಂದ ಉಪದೇಶವನ್ನು ಸ್ವೀಕರಿಸುತ್ತಿರುವಂತೆ ತೋರಿಸಲಾಗಿದೆ. ಮತ್ತೊಂದು ವೀಡಿಯೊದಲ್ಲಿ ಯೇಸುಕ್ರಿಸ್ತನು ಹನುಮಾನ್‌ಗಿಂತಲೂ ಶಕ್ತಿಶಾಲಿಯೆಂದು ಹೇಳಲಾಗಿದೆ.

ಈ ವೀಡಿಯೊಗಳ ವಿರುದ್ಧ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಧರ್ಮಸೇನಾ ಸೇರಿದಂತೆ ಇತರ ಕೇಸರಿ ಬಲಪಂಥೀಯ ಸಂಘಟನೆಗಳ ಪ್ರತಿನಿಧಿಗಳು ರಾಯ್ಪುರದಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈ ವೀಡಿಯೊಗಳು ಹಿಂದೂ ದೇವತೆಗಳನ್ನು ಕಾರ್ಟೂನ್ ಪಾತ್ರಗಳಂತೆ ಚಿತ್ರಿಸುವ ಮೂಲಕ ಉದ್ದೇಶಪೂರ್ವಕವಾಗಿ ಅವಮಾನಿಸಿವೆ ಎಂದು ಅವರು ಆರೋಪಿಸಿದ್ದಾರೆ. ಮತ್ತೊಂದು ಸಮುದಾಯದ ನಿರ್ದಿಷ್ಟ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಈ ವೀಡಿಯೊ ಕಂಟೆಂಟ್‌ಗಳನ್ನು ವೈರಲ್ ಮಾಡುತ್ತಿದ್ದಾರೆ ಎಂದು ಸಂಘಟನೆಗಳು ಆಪಾದಿಸಿವೆ.

ಧರ್ಮಸೇನಾ ಸಂಘಟನೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ರಾಯ್ಪುರ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯು ಅಜ್ಞಾತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್ 299ರಡಿ ಪ್ರಕರಣ ದಾಖಲಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries