HEALTH TIPS

ಎಐ ಆಧರಿತ ಡೇಟಾ ಸೆಂಟರ್ ಅಭಿವೃದ್ಧಿಪಡಿಸಲು ರಿಲಯನ್ಸ್-ಮೆಟಾ ಪಾಲುದಾರಿಕೆ

ಗಾಂಧಿನಗರ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited) ಗುಜರಾತ್‌ನ ಜಾಮ್‌ ನಗರದಲ್ಲಿ ಫೇಸ್‌ಬುಕ್‌ನ ಮಾತೃಸಂಸ್ಥೆಯಾದ ಮೆಟಾದ (Meta)ಪಾಲುದಾರಿಕೆಯೊಂದಿಗೆ ಎಐ-ಆಧರಿತ ಡೇಟಾ ಸೆಂಟರ್ ನಿರ್ಮಾಣ ಯೋಜನೆಯನ್ನು ಕೈಗೊಳ್ಳುವುದಾಗಿ ಘೋಷಿಸಿದೆ.

ಈ ಸಹಭಾಗಿತ್ವದ ಭಾಗವಾಗಿ, ಆರ್‌ಐಎಲ್ ಮುಂದಿನ ಎರಡು ವರ್ಷಗಳಲ್ಲಿ 168 ಮೆಗಾವ್ಯಾಟ್ (MW) ಸಾಮರ್ಥ್ಯದ ಡೇಟಾ ಸೆಂಟರ್ ಅಭಿವೃದ್ಧಿಪಡಿಸಲಿದ್ದು, ಭವಿಷ್ಯದಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ನಿರೀಕ್ಷೆ ಇದೆ.

ಮೆಟಾ ಸಂಸ್ಥೆಗಾಗಿ ಭಾರತದಲ್ಲಿ ನಿರ್ಮಿಸಲಾಗುತ್ತಿರುವ ಮೊದಲ 'ಬಿಲ್ಟ್-ಟು-ಸೂಟ್' (ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸಿದ) ಡೇಟಾ ಸೆಂಟರ್ ಇದಾಗಿದೆ. ಜಾಗತಿಕ ಎಐ ಮೂಲಸೌಕರ್ಯದ ಹಬ್ ಆಗಿ ಭಾರತ ಹೊರಹೊಮ್ಮಲು ಇದು ಸಹಕಾರಿಯಾಗಲಿದೆ. ಮೆಟಾ ಈ ಸೌಲಭ್ಯದ ಸಾಮರ್ಥ್ಯವನ್ನು ಗುತ್ತಿಗೆಗೆ (Lease) ಪಡೆಯಲಿದೆ. ಇದು ಮೆಟಾದ ಜಾಗತಿಕ ಮೂಲಸೌಕರ್ಯ ವಿಸ್ತರಣೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ರಿಲಯನ್ಸ್ ಜೊತೆಗಿನ ದೀರ್ಘಕಾಲೀನ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ಈ ಪಾಲುದಾರಿಕೆಯು ವಿಶ್ವದ ಅತ್ಯಂತ ಕ್ರಿಯಾಶೀಲ ಡಿಜಿಟಲ್ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಕನೆಕ್ಟಿವಿಟಿ, ವಾಣಿಜ್ಯ ಮತ್ತು ಎಐ ಆವಿಷ್ಕಾರಗಳನ್ನು ಹೆಚ್ಚಿಸಲಿದೆ. ಈ ಡೇಟಾ ಸೆಂಟರ್ ಮೆಟಾದ ಜಾಗತಿಕ ಮೂಲಸೌಕರ್ಯಕ್ಕೆ ಸೇವೆ ಸಲ್ಲಿಸಲಿದ್ದು, ಅದರ ಪ್ರಮುಖ ವ್ಯವಹಾರ ಮತ್ತು ಎಐ ಕಂಪ್ಯೂಟಿಂಗ್ ಅಗತ್ಯಗಳನ್ನು ಪೂರೈಸಲಿದೆ. ವಿಶ್ವಾದ್ಯಂತ ಡಿಜಿಟಲ್ ಮತ್ತು ಎಐ ವಲಯದಲ್ಲಿ ಭಾರತದ ಬೆಳೆಯುತ್ತಿರುವುದನ್ನು ಇದು ಬಿಂಬಿಸಿದೆ.

ಈ ಒಪ್ಪಂದದ ಪ್ರಕಾರ, ಆರ್‌ಐಎಲ್, ನೂತನ ಡೇಟಾ ಸೆಂಟರ್‌ನ ವಿನ್ಯಾಸ ಮತ್ತು ನಿರ್ಮಾಣದಿಂದ ಹಿಡಿದು ಯುಟಿಲಿಟಿಗಳ ನಿರಂತರ ನಿರ್ವಹಣೆ, ನವೀಕರಿಸಬಹುದಾದ ಇಂಧನ ಪೂರೈಕೆ, ನೆಟ್‌ವರ್ಕ್ ಸಂಪರ್ಕ ಮತ್ತು ಸಂಪೂರ್ಣ ಕಾರ್ಯಾಚರಣೆಗಳನ್ನು ನಿರ್ವಹಿಸಲಿದೆ.

ಗುಜರಾತ್‌ನ ಜಾಮ್‌ ನಗರದ ಈ ಆಯಕಟ್ಟಿನ ಸ್ಥಳವು ಬೃಹತ್ ಪ್ರಮಾಣದ ಡೇಟಾ ಸೆಂಟರ್ ಕಾರ್ಯಾಚರಣೆಗಳಿಗೆ ಅತ್ಯಂತ ಪೂರಕವಾಗಿದೆ. ಇದರಲ್ಲಿ ವಿತರಣಾ ಸಾಮರ್ಥ್ಯ, ನವೀಕರಿಸಬಹುದಾದ ಇಂಧನ, ನೀರಿನ ಲಭ್ಯತೆ, ಜಲಾವೃತ ಸಬ್‌ಮರೀನ್ ಕೇಬಲ್ ಲ್ಯಾಂಡಿಂಗ್ ಸ್ಟೇಷನ್‌ಗಳ ಸಾಮೀಪ್ಯ ಮತ್ತು ಜಿಯೋದ ವ್ಯಾಪಕವಾದ ಫೈಬರ್ ನೆಟ್‌ವರ್ಕ್ ಸೇರಿವೆ. ಈ ಡೇಟಾ ಸೆಂಟರ್ ನವೀಕರಿಸಬಹುದಾದ ಇಂಧನದಿಂದ ಕಾರ್ಯನಿರ್ವಹಿಸಲಿದೆ ಮತ್ತು ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಿ ಇಲ್ಲಿ ಬಳಕೆ ಮಾಡಲಾಗುವುದು.

ಮುಕೇಶ್‌ ಅಂಬಾನಿ ಹೇಳಿದ್ದೇನು?

"ಮೆಟಾ ಜತೆಗಿನ ಈ ಪಾಲುದಾರಿಕೆಯು ಭಾರತದ ಡಿಜಿಟಲ್ ಮೂಲಸೌಕರ್ಯಕ್ಕೆ ಕ್ರಾಂತಿಕಾರಕ ಪರಿವರ್ತನೆಯ ಕ್ಷಣವಾಗಿದೆ. ಮೆಟಾದಂತಹ ಜಾಗತಿಕ ತಂತ್ರಜ್ಞಾನದ ಪ್ರಮುಖ ಸಂಸ್ಥೆಗಾಗಿ ಭಾರತದ ಮೊದಲ ಬಿಲ್ಟ್-ಟು-ಸೂಟ್ ಡೇಟಾ ಸೆಂಟರ್ ಅನ್ನು ನಿರ್ಮಿಸುವುದು, ಜಾಗತಿಕ ಎಐ ಕ್ರಾಂತಿಯ ಮುಂಚೂಣಿಗೆ ಬರುತ್ತಿರುವ ಭಾರತದ ಶಕ್ತಿ-ಸಾಮರ್ಥ್ಯವನ್ನು ಬಿಂಬಿಸಿದೆ. ರಿಲಯನ್ಸ್‌ನಲ್ಲಿ, ನಾವು ಮುಂದಿನ ಪೀಳಿಗೆಯ ಎಐ ಆವಿಷ್ಕಾರಗಳಿಗೆ ಶಕ್ತಿ ನೀಡುವ ವಿಶ್ವದರ್ಜೆಯ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸಲು ಬದ್ಧರಾಗಿದ್ದೇವೆ. ಜಾಮ್‌ ನಗರವು ಕೇವಲ ಭಾರತಕ್ಕಷ್ಟೇ ಅಲ್ಲ, ಇಡೀ ಜಗತ್ತಿಗೆ ಹೈಪರ್‌ಸ್ಕೇಲ್ ಎಐ ಕಂಪ್ಯೂಟಿಂಗ್‌ನ ಮಹತ್ವದ ಕೇಂದ್ರವಾಗಲಿದೆ. ಆದ್ದರಿಂದ ಮೆಟಾ ಜತೆಗಿನ ಪಾಲುದಾರಿಕೆಗೆ ಹೆಮ್ಮೆಪಡುತ್ತೇವೆ" ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್‌ ಅಂಬಾನಿ ಹೇಳಿದ್ದಾರೆ.

"ಭಾರತದಲ್ಲಿ ನಮ್ಮ ಮೊದಲ ಎಐ-ಆಧರಿತ ಡೇಟಾ ಸೆಂಟರ್ ಅನ್ನು ನಿರ್ಮಿಸಲು ರಿಲಯನ್ಸ್ ಜೊತೆ ಸಹಭಾಗಿತ್ವ ಮಾಡುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಜಾಮ್‌ ನಗರದಲ್ಲಿ ನಿರ್ಮಾಣವಾಗಲಿರುವ ಈ ವಿಶ್ವದರ್ಜೆಯ ಕೇಂದ್ರವು ಜಾಗತಿಕವಾಗಿ ನಮ್ಮ ಎಐ ಮೂಲಸೌಕರ್ಯವನ್ನು ವಿಸ್ತರಿಸಲು ಸಹಕರಿಸಲಿದೆ. ಜೊತೆಗೆ ಭಾರತದಲ್ಲಿ ನಮ್ಮ ದೀರ್ಘಕಾಲೀನ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸಲಿದೆ" ಎಂದು ಮೆಟಾ ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries