ಕಾಸರಗೋಡು: ರೈಲ್ವೆ ಹಾಗೂ ಭಾರತೀಯ ಸೇನೆಯಲ್ಲಿ ಕೆಲಸದ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಲಂ ಕೊಟ್ಟಾರಕ್ಕರ ಪಾಳಯಂ ಅಂಡೂರು ನಿವಾಸಿ ಎಸ್. ಸಂತೋಷ್ ಕುಮಾರ್ (56)ಎಂಬಾತನನ್ನು ಕಣ್ಣೂರು ಕ್ರೈಂ ಬ್ರಾಂಚ್ ಎಸ್ಪಿ ಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ವಂಚನೆ ನಂತರ ಆರೋಪಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಸಂತೋಷ್ ಕುಮಾರ್ನನ್ನು ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿಯಾಗಿ ಘೋಷಿಸಿತ್ತು.
ಈತನಿಗೆ ಅಂತಾರಾಜ್ಯ ಸಂಪರ್ಕ ಇರುವ ಕಾರಣ ಕೇಸನ್ನು ಕ್ರೈಮ್ ಬ್ರಾಂಚ್ಗೆ ವಹಿಸಿಕೊಡಲಾಗಿತ್ತು. ಆರೋಪಿ ಎರ್ನಾಕುಳಂ, ಕಾಕಿನಾಡ್ನಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಎಸ್ಪಿ ಬಾಲಕೃಷ್ಣನ್ ನಾಯರ್ ಅವರ ನಿರ್ದೇಶನದನ್ವಯ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಕಣ್ಣೂರು, ಕಾಟಾಕಡ್, ಕನಕಕುನ್ನು, ಪಂದಳಂ, ಅಡೂರ್, ಏನಾತ್, ಹರಿಪ್ಪಾಡ್ ಅಲ್ಲದೆ, ಮಂಗಳೂರು ಈಸ್ಟ್ ಪೆÇಲೀಸ್ ಠಾಣೆಗಳಲ್ಲಾಗಿ ಹತ್ತಕ್ಕೂ ಹೆಚ್ಚು ಕೇಸ್ಗಳಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಭಾರತದಲ್ಲೂ ವಿದೇಶದಲ್ಲೂ ಸರಕಾರಿ - ಖಾಸಗಿ ವಲಯಗಳಲ್ಲಿ ಕೆಲಸ ಭರವಸೆ ನೀಡಿ ಹಲವರಿಂದ ಹಣ ಪಡೆದು ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

